Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ವಿಧಾನಸಭಾ ಚುನಾವಣೆ: ಗುಜರಾತ್ ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ಎಎಪಿ ಭರವಸೆ

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಕೆಲವೇ ತಿಂಗಳುಗಳಲ್ಲಿ ನಡೆಯುತ್ತಿದ್ದು, ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ತಮ್ಮದೇ ಆದ ಖ್ಯಾತಿಯ ಮೇಲೆ ಗೆಲ್ಲಬಲ್ಲ ಉತ್ತಮ ಅಭ್ಯರ್ಥಿಗಳನ್ನು ಹುಡುಕುತ್ತದೆ, ಹಾಗೆಯೇ ಚುನಾವಣೆಯಲ್ಲಿ ಗೆಲ್ಲುವ ಸುಮಾರು 60 ಕ್ಷೇತ್ರಗಳತ್ತ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅನ್ನು ಬಿಜೆಪಿಯಿಂದ ವಶಪಡಿಸಿಕೊಂಡ ನಂತರ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಂತರ ಎಎಪಿ ಉತ್ಸಾಹಭರಿತವಾಗಿದೆ ಎಂದು ಕರ್ನಾಟಕದ ಎಎಪಿಪಕ್ಷದ ನಾಯಕರು ಹೇಳುತ್ತಿದ್ದಾರೆ.

ಈ ಕುರಿತು ಶುಕ್ರವಾರ ನಡೆದ ಪತಿಕಾಗೋಷ್ಠಿಯಲ್ಲು ಮಾತನಾಡಿದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್ ರಾವ್ ಅವರು, ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಐವರು ಎಎಪಿ ಅಭ್ಯರ್ಥಿಗಳು ʼಹಣ ಮತ್ತು ಸ್ನಾಯುಬಲʼದಿಂದ ಬೆಂಬಲಿತರಾಗಿರಲಿಲ್ಲ ಮತ್ತು ಅವರು ತಮ್ಮದೇ ಆದ ಖ್ಯಾತಿಯಿಂದ ಗೆದ್ದಿದ್ದಾರೆ. ಇದೇ ಮಾರ್ಗವನ್ನು ನಾವು ಕರ್ನಾಟಕದಲ್ಲೂ ಮುಂದುವರೆಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಮೇ ತಿಂಗಳೊಳಗೆ ಚುನಾವಣೆ ನಡೆಯಲಿದ್ದು, ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ʼಹೊಸ ಮತ್ತು ಉತ್ತಮ ಅಭ್ಯರ್ಥಿಗಳನ್ನುʼ ಕಣಕ್ಕಿಳಿಸಲಿದೆ. ಹಾಗೆಯೇ 50 ರಿಂದ 60 ʼಗೆಲ್ಲಬಹುದಾದʼ ಕ್ಷೇತ್ರಗಳ ಮೇಲೆ ಗಮನ ಹರಿಸಲಿದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ʼನಾವು ಗುಜರಾತ್ನಲ್ಲಿ ಏನು ಮಾಡಿದ್ದೇವೆಯೋ ಅದಕ್ಕಿಂತ ಉತ್ತಮ ಛಾಪು ಕರ್ನಾಟಕದಲ್ಲಿಯೂ ಮೂಡಿಸಲಿದ್ದೇವೆ,  ನಾವು ತುಂಬಾ ಆಶಾವಾದಿಗಳಾಗಿದ್ದೇವೆ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಚಾರವು ಖಂಡಿತವಾಗಿಯೂ ಪಕ್ಷದ ಗೆಲುವು, ಸ್ವೀಕಾರಾರ್ಹತೆ ಮತ್ತು ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕಕ್ಕೆ ಸಂಪೂರ್ಣವಾಗಿ ಹೊಸ ಮಾದರಿಯ ಅಗತ್ಯವಿದೆ. ಆದರೆ ರಾವ್‌ ಅವರ ಪ್ರಕಾರ ಕಾಂಗ್ರೆಸ್, ಬಿಜೆಪಿ ಮತ್ತು ಮೈತ್ರಿ ಮಾದರಿಗಳನ್ನು ತಿರಸ್ಕರಿಸಿದ್ದಾರೆ.

ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್ ಮತಗಳನ್ನು ತಿಂದು ಹಾಕಿದೆ ಎಂಬ ರಾಜ್ಯದ ಕಾಂಗ್ರೆಸ್‌ ಪಕ್ಷದ ನಾಯಕರ ವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಪಕ್ಷಕ್ಕೆ ತಮ್ಮ ಮತಗಳನ್ನು ಕ್ರೋಢೀಕರಿಸುವುದನ್ನು ಯಾರೂ ತಡೆಯಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು