Home ರಾಜ್ಯ ಬಳ್ಳಾರಿ ದೇಶದಲ್ಲಿ ಜಿಡಿಪಿ ಬೆಳವಣಿಗೆ ಸುಮಾರು 8.2% ಇದ್ದರೆ ಕರ್ನಾಟಕದಲ್ಲಿ ಶೇ.10% ಬೆಳವಣಿಗೆ: ಸಚಿವ ಸಂತೋಷ್ ಲಾಡ್

ದೇಶದಲ್ಲಿ ಜಿಡಿಪಿ ಬೆಳವಣಿಗೆ ಸುಮಾರು 8.2% ಇದ್ದರೆ ಕರ್ನಾಟಕದಲ್ಲಿ ಶೇ.10% ಬೆಳವಣಿಗೆ: ಸಚಿವ ಸಂತೋಷ್ ಲಾಡ್

0

ಬಳ್ಳಾರಿ, (ಸಂಡೂರು)ಡಿಸೆಂಬರ್ 08: 2013-18 ರ ಅವಧಿಯಲ್ಲಿ ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ರಾಜ್ಯ ಈಗ ಜಿಡಿಪಿ ಪ್ರಗತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರಕಾರದ ಆಯವ್ಯಯದ ವರದಿಯಲ್ಲಿ ದೇಶದಲ್ಲಿ ಜಿಡಿಪಿ ಬೆಳವಣಿಗೆ ಸುಮಾರು 8.2%ಇದ್ದರೆ ಕರ್ನಾಟಕದಲ್ಲಿ ಶೇ.10% ಬೆಳವಣಿಗೆಯಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಿಸಿದರು.

ಅವರು ಇಂದು ಸಂಡೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಬೆಳವಣಿಗೆಗೆ ನಮ್ಮ ಕಾರ್ಯಕ್ರಮಗಳು ಕಾರಣ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಹಿಂದಿನ 50 ವರ್ಷಗಳ ಕಾಲ ರೂಪಿಸಿ ಜಾರಿ ಮಾಡಿದ ಕಾರ್ಯಕ್ರಮಗಳ ಒಟ್ಟು ಪರಿಣಾಮದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಸುಮಾರು 51% ಇದೆ. ಇದನ್ನು ಸಾಧಿಸಲು ನಮ್ಮ ಸರ್ಕಾರದ ಕಾರ್ಯಕ್ರಮಗಳು ಕಾರಣ ಎಂದರು.

2013-18 ರ ಅವಧಿಯಲ್ಲಿ ತೆರಿಗೆ ಸಂಗ್ರಹದಲ್ಲಿ ನಾವು ಮುಂಚೂಣಿಯಲ್ಲಿದ್ದೆವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚವೂ ರಾಜ್ಯದಲ್ಲಿ ಹೆಚ್ಚು ಎಂದರು.

ಪಂಚ ಗ್ಯಾರಂಟಿ ಕಾರ್ಯಕ್ರಮ ಗಳಿಗಾಗಿ 60 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ದೇಶದ ಬುನಾದಿಯನ್ನು ಹಾಕುವಲ್ಲಿ ಕರ್ನಾಟಕದಲ್ಲಿ ವಿಶೇಷವಾಗಿ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಹಮ್ಮಿಕೊಂಡಿದೆ. ಬಿಸಿಯೂಟ, ಅಂಗನವಾಡಿಗಳು, ವಿಧಾವ ವೇತನ, ವೃದ್ಧಾಪ್ಯ ವೇತನ ಮುಂತಾದ ಬಡವರ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಚಿವರು ಹೇಳಿದರು.

ಬಡವರಿಗಾಗಿ ಹೆಚ್ಚು ಅನುದಾನ
ರೈತರಿಗೆ ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲಕ್ಕಾಗಿ ಸುಮಾರು 9.50 ಕೋಟಿ ರೂಪಾಯಿಗಳನ್ನು ಒದಗಿಸಿದೆ.8165 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ಎಸ್.ಸಿ.ಎಸ್. ಟಿ ಸಾಲ ಮನ್ನಾ, ಗ್ರಾಮ ಪಂಚಾಯತಿಗಳಿಗೆ 3700 ಕೋಟಿ ಅನುದಾನವನ್ನು ನೀಡಲಾಗಿದೆ. ಆಶ್ರಯ ಯೋಜನೆಯಡಿ 2633 ಕೋಟಿ ರೂಪಾಯಿ , 2013-18 ರ ಅವಧಿಯಲ್ಲಿ 18 ಸಾವಿರ ಕೋಟಿ ಗಳಿಗೂ ಹೆಚ್ಚು ಅನುದಾನ ನೀಡಿ ಬಡವರಿಗೆ ಅನುಕೂಲ ಮಾಡಿರುವುದಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 80 ಸಾವಿರ ಕೋಟಿಗಳನ್ನು ವೆಚ್ಚ ಮಾಡಿದೆ ಎಂದರು.

ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ.ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇಶದಲ್ಲಿ 26 ಸಾವಿರ ಕೋಟಿ ಕೈಗಳಿಗೆ ಕೆಲಸವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

You cannot copy content of this page

Exit mobile version