Tuesday, June 18, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿಯಲ್ಲಿ ಕರ್ನಾಟಕಕ್ಕಿಲ್ಲ ಯಾವುದೇ ಸ್ಥಾನ

ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರಚಿಸಲು ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಸಮಿತಿ ರಚಿಸಿದೆ. ಆದರೆ ಆ ಸಮಿತಿಯಲ್ಲಿ ಕರ್ನಾಟಕದ ಯಾವುದೇ ನಾಯಕರಿಗೆ ಒಂದು ಸ್ಥಾನವನ್ನೂ ಬಿಜೆಪಿ ನೀಡಿಲ್ಲ ಎಂಬ ಅಂಶ ಎದ್ದು ಕಾಣುವಂತಿದೆ.

ಅದರಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರನ್ನು ಕರ್ನಾಟಕದವರೆಂದು ಉಲ್ಲೇಖಿಸಿದರೂ ಅವರದು ಮೂಲತಃ ಕೇರಳ ರಾಜ್ಯದವರಾದ್ದರಿಂದ ಕರ್ನಾಟಕದ ಯಾವ ನಾಯಕರಿಗೂ ಪ್ರಣಾಳಿಕೆ ಸಮಿತಿಯಲ್ಲಿ ಸ್ಥಾನ ನೀಡಿಲ್ಲ. ಅಷ್ಟೇ ಅಲ್ಲದೇ ಈ ಅಪವಾದ ಮರೆಮಾಚಲು ರಾಜೀವ್ ಚಂದ್ರಶೇಖರ್ ಅವರಿಗೆ ಕರ್ನಾಟಕದವರೆಂದು ಉಲ್ಲೇಖಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆ ಹೊಂದಿರುವ ಈ ಸಮಿತಿಯು 27 ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ ಉತ್ತರ ಪ್ರದೇಶದಿಂದ 5 ಮಂದಿ ಸದಸ್ಯರು ಇದ್ದರೆ, ರಾಜಸ್ಥಾನ 3, ಒಡಿಶಾ 3, ಮಹಾರಾಷ್ಟ್ರ 2, ಮಧ್ಯಪ್ರದೇಶ 2, ಬಿಹಾರ 2 ಸದಸ್ಯರು ಇದ್ದರೆ, ಗುಜರಾತ್, ತಮಿಳುನಾಡು, ಜಾರ್ಖಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸಗಡ, ದೆಹಲಿ ಹಾಗೂ ಕೇರಳ ರಾಜ್ಯಗಳ ನಾಯಕರಿಗೆ ತಲಾ ಒಂದೊಂದು ಸ್ಥಾನವನ್ನು ಬಿಜೆಪಿ ನೀಡಿದೆ.

ಸಮಿತಿಗೆ ರಾಜನಾಥ್ ಸಿಂಗ್ ಅಧ್ಯಕ್ಷರಾದರೆ, ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವ ಪೀಯೂಷ್ ಗೋಯಲ್‌ ಅವರನ್ನು ಕ್ರಮವಾಗಿ ಸಂಚಾಲಕಿ ಮತ್ತು ಉಪಸಂಚಾಲರಾಗಿ ನೇಮಕ ಮಾಡಲಾಗಿದೆ. ಸಮಿತಿಯಲ್ಲಿ ಕೇಂದ್ರದ ಹಲವು ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಅರ್ಜುನ್ ಮುಂಡಾ, ಭೂಪೇಂದ್ರ ಯಾದವ್, ಅರ್ಜುನ್‌ರಾಮ್ ಮೇಘವಾಲ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಪಟೇಲ್, ಹಿಮಂತ ವಿಶ್ವಶರ್ಮ, ವಿಷ್ಣುದೇವ್ ಸಾಯಿ, ಮೋಹನ್ ಯಾದವ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ, ಸ್ಮೃತಿ ಇರಾನಿ, ಜುಯಲ್ ಓರಾಮ್, ಸುರಸಿಲ್, ರವಿಶಂಕರ್, ಮೋದಿ ಕೇಶವ್ ಪ್ರಸಾದ್ ಮೌರ್ಯ, ರಾಜೀವ್ ಚಂದ್ರಶೇಖರ್, ವಿನೋದ್ ತಾವ್ಡೆ, ರಾಧಾಮೋಹನ್ ದಾಸ್ ಅಗರ್ವಾಲ್, ಮಂಜಿಂದರ್ ಸಿಂಗ್ ಸಿರ್ಸಾ, ಒಪಿ ಧಂಖರ್, ಅನಿಲ್ ಆಂಟೋನಿ, ತಾರಿಕ್ ಮನ್ಸೂರ್ ಈ ಸಮಿತಿಯ ಸದಸ್ಯರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು