Home ರಾಜಕೀಯ ಕರ್ನಾಟಕದ ತಲಾವಾರು ಜಿಎಸ್‌ಡಿಪಿಯು ಭಾರತದಲ್ಲೇ ಅತ್ಯಧಿಕವಾಗಿದೆ, ಇದು ನಮ್ಮ ಸಮರ್ಥ ಆಡಳಿತ ಶಕ್ತಿಯ ಪ್ರತಿಬಿಂಬ –...

ಕರ್ನಾಟಕದ ತಲಾವಾರು ಜಿಎಸ್‌ಡಿಪಿಯು ಭಾರತದಲ್ಲೇ ಅತ್ಯಧಿಕವಾಗಿದೆ, ಇದು ನಮ್ಮ ಸಮರ್ಥ ಆಡಳಿತ ಶಕ್ತಿಯ ಪ್ರತಿಬಿಂಬ – ಪ್ರಿಯಾಂಕ್ ಖರ್ಗೆ

0

ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ 2023-24ರ ಹಣಕಾಸು ವರ್ಷದಲ್ಲಿ ನಮ್ಮ ರಾಜ್ಯದ ಆರ್ಥಿಕತೆಯು ಶೇ. 10.2 ರಷ್ಟು ಬೆಳವಣಿಗೆ ಸಾಧಿಸಿ ರಾಷ್ಟ್ರೀಯ ಸರಾಸರಿಯ ಶೇ. 8.2 ಪ್ರಮಾಣವನ್ನು ಮೀರಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜ್ಯದ ಪ್ರಬಲ ಆರ್ಥಿಕ ಕಾರ್ಯಕ್ಷಮತೆಯ ಸೂಚ್ಯಂಕವನ್ನು ಮೊದಲಿದ್ದ ಶೇ. 4ರಿಂದ ಶೇ. 13.1ಗೆ ಪರಿಷ್ಕರಿಸಲಾಗಿದೆ. ಇದು ರಚನಾತ್ಮಕ ಆಡಳಿತ ಮತ್ತು ವೈವಿಧ್ಯಮಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 10 ಏರಿಕೆ ಕಂಡಿದೆ ಮತ್ತು ಸ್ಟಾಂಪ್ ಡ್ಯೂಟಿ ಆದಾಯದಲ್ಲಿ ಶೇ. 24ರಷ್ಟು ಹೆಚ್ಚಳ ದಾಖಲಿಸಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಅಂಕಿಅಂಶಗಳ ಅಂದಾಜು (NSE) ಪ್ರಕಾರ 2024-25 ಸಾಲಿನಲ್ಲಿ ಜಿಎಸ್‌ಡಿಪಿ (GSDP)ಬೆಳವಣಿಗೆ ಶೇ. 9.4 ತಲುಪುವ ನಿರೀಕ್ಷೆ ಇದೆ. ಆದರೆ ಹಣಕಾಸು ಸಚಿವಾಲಯದ ವರದಿ ಇನ್ನೂ ಆಶಾವಾದಕವಾಗಿದ್ದು, ಶೇ. 14 ಬೆಳವಣಿಗೆ ತಲುಪುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಹಾಕಿದ್ದಾರೆ.

ಕರ್ನಾಟಕದ ತಲಾವಾರು ಜಿಎಸ್‌ಡಿಪಿಯು ಭಾರತದಲ್ಲಿ ಅತ್ಯಧಿಕವಾಗಿದೆ, ಇದು ನಮ್ಮ ಸಮರ್ಥ ಆಡಳಿತ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜನಪರ ನೀತಿಗಳು, ವ್ಯಾಪಾರ-ಸ್ನೇಹಿ ವಾತಾವರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿದೆ. ಇದು ಭಾರತದ ಡಿಜಿಟಲ್ ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

You cannot copy content of this page

Exit mobile version