Wednesday, October 2, 2024

ಸತ್ಯ | ನ್ಯಾಯ |ಧರ್ಮ

ಓಲಾ ಚಾಲಕನಿಂದ ಲೈಂಗಿಕ ಕಿರುಕುಳ- ಕಂಪನಿಯೇ ಪರಿಹಾರ ನೀಡಬೇಕು ಎಂದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಚಾಲಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಆತ ಕೆಲಸ ಮಾಡುವ ಎಎನ್‌ಐ ಟೆಕ್ನಾಲಜೀಸ್, ಕ್ಯಾಬ್ ಅಗ್ರಿಗೇಟರ್ ಓಲಾ ಮಾಲೀಕರು ಮತ್ತು ನಿರ್ವಾಹಕರಿಗೆ ಆದೇಶಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013, ಅಥವಾ POSH ಕಾಯಿದೆಯ ಅಡಿಯಲ್ಲಿ ಚಾಲಕನನ್ನು ಓಲಾ ಉದ್ಯೋಗಿ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠವು ತಿಳಿಸಿದೆ.

ಆಗಸ್ಟ್ 2018 ರಲ್ಲಿ ಬೆಂಗಳೂರಿನಲ್ಲಿರುವ ತನ್ನ ಕಚೇರಿಗೆ ಓಲಾ ಕ್ಯಾಬ್ ಬಳಸಿ ಹೋಗಿದ್ದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.

ಚಾಲಕನು ತನ್ನನ್ನು ಕನ್ನಡಿಯ ಮೂಲಕ ನೋಡುತ್ತಿದ್ದನು ಮತ್ತು ಕಾರಿನಲ್ಲಿ ಹೋಗುವ ಸಮಯದಲ್ಲಿ ತನ್ನ ಫೋನ್‌ನಲ್ಲಿ ಅಶ್ಲೀಲ ವೀಡಿಯೊವನ್ನು ವೀಕ್ಷಿಸಿದನು ಎಂದು ಅವರು ಆರೋಪಿಸಿದ್ದರು. ಫೋನ್ ಮಹಿಳೆಗೆ ಕಾಣುವಂತೆ ಇಟ್ಟಿದ್ದಾಗಿ ಅವರು ತಿಳಿಸಿದ್ದಾರೆ. 

ನಂತರ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಎನ್‌ಐ ಟೆಕ್ನಾಲಜೀಸ್‌ಗೆ ದೂರು ನೀಡಿದ್ದರು ಎಂದು ಲೈವ್ ಲಾ ವರದಿ ಮಾಡಿದೆ. ಆದರೆ, ಆಕೆಯ ದೂರನ್ನು ಪರಿಗಣಿಸಲಾಗಿಲ್ಲ, ಕಂಪನಿಯ ಆಂತರಿಕ ದೂರುಗಳ ಸಮಿತಿಯು ವಿಚಾರಣೆ ನಡೆಸಲು ನಿರಾಕರಿಸಿದೆ ಎಂದು ಮಹಿಳೆ ಹೇಳಿದ್ದರು.

ನಂತರ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ದೂರನ್ನು ಪರಿಶೀಲಿಸಲು ಎಎನ್‌ಐ ಟೆಕ್ನಾಲಜೀಸ್‌ಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಕಂಪನಿಯು ಕಾಯಿದೆಗೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನಿರ್ದೇಶನಗಳನ್ನು ಕೋರಿದರು. ಆಗಸ್ಟ್ 20ರಂದು ಈ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ, ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ಓಲಾ ಕೇವಲ ಪ್ಲಾಟ್‌ಫಾರ್ಮ್‌ ಅಲ್ಲ, ಸಾರಿಗೆ ಕಂಪನಿಯಂತೆ ವರ್ತಿಸಿದೆ ಎಂದು ಹೇಳಿದರು ಎಂದು ಲೈವ್ ಲಾ ವರದಿ ಮಾಡಿದೆ. “ಕಂಪನಿ ಮತ್ತು ಚಾಲಕನ ನಡುವೆ ಯಾವುದೇ ಒಪ್ಪಂದದ ಗೌಪ್ಯತೆಯಿಲ್ಲ ಹಾಗೂ ನನ್ನ ಮತ್ತು ಚಾಲಕನ ನಡುವೆಯೂ ಇಲ್ಲ” ಎಂದು ವಕೀಲರು ಹೇಳಿದರು.

ಚಾಲಕನ ಕೃತ್ಯಗಳಿಗೆ ಕಂಪನಿಯೇ ಹೊಣೆ ಎಂದು ಅರ್ಜಿದಾರರು ತಿಳಿಸಿದ್ದಾರೆ. “ನಾವು ನಿಮ್ಮ ಸುರಕ್ಷತೆಗೆ ಜವಾಬ್ದಾರರಲ್ಲ ಎಂದು OLA ಹೇಳಿದ್ದರೆ, ನಾನು [ಅರ್ಜಿದಾರ] ಕ್ಯಾಬ್ ಅನ್ನು ತೆಗೆದುಕೊಳ್ಳುತ್ತಿರಲಿಲ್ಲ” ಎಂದು ಆಕೆಯ ವಕೀಲರು ಹೇಳಿದ್ದಾರೆ.

POSH ಕಾಯಿದೆಯು ಕಂಪನಿಗೂ ಅನ್ವಯಿಸುತ್ತದೆ, ಆಂತರಿಕ ದೂರುಗಳ ಸಮಿತಿಯು ತನ್ನ ದೂರನ್ನು ತಳ್ಳಿಹಾಕಬಾರದು ಎಂದು ಅರ್ಜಿದಾರರು ವಾದಿಸಿದರು.

ಹಾಘಿದ್ದು, ಲೈವ್ ಲಾ ಪ್ರಕಾರ ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿರುವ ಸಂದರ್ಭಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ಓಲಾ ಪರ ವಕೀಲರು ಹೇಳಿದರು . ಆದ್ದರಿಂದ ಓಲಾ ಚಾಲಕನ ಉದ್ಯೋಗದಾತನಲ್ಲ ಎಂದು ವಕೀಲರು ಹೇಳಿದರು. ಓಲಾ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ತಿಳಿಸಿದರು.

ಸೋಮವಾರದ ತನ್ನ ಆದೇಶದಲ್ಲಿ, ಪೀಠವು OLA ಮತ್ತು ಚಾಲಕರ ನಡುವಿನ ಚಂದಾದಾರಿಕೆ ಒಪ್ಪಂದದ ನಿಯಮಗಳ ವಿಶ್ಲೇಷಣೆಯಿಂದ, “PoSH ಕಾಯಿದೆ, 2013 ರ ಸೆಕ್ಷನ್ 2 (ಎಫ್) ಅಡಿಯಲ್ಲಿ ಒದಗಿಸಲಾದ ‘ಉದ್ಯೋಗಿ’ ಎಂಬ ಪದದ ವ್ಯಾಖ್ಯಾನವು ಸ್ಪಷ್ಟವಾಗಿದೆ. ಉದ್ಯೋಗದಾತನು ಉದ್ಯೋಗಿಯೊಂದಿಗೆ ಹೊಂದಬಹುದಾದ ಎಲ್ಲಾ ಸಂಭಾವ್ಯ ಸಂಬಂಧಕ್ಕೆ ಅನುಗುಣವಾಗಿದೆ,” ಎಂದು ಹೇಳಿದೆ

ಕಾಯಿದೆಯ ಸೆಕ್ಷನ್ 2(ಎಫ್) ನೌಕರನನ್ನು ಕೆಲಸದ ಸ್ಥಳದಲ್ಲಿ ಕೆಲಸ ಮಾಡುವ ನಿಯಮಿತ, ತಾತ್ಕಾಲಿಕ ಅಥವಾ ad hoc ಆಧಾರದ ಮೇಲೆ ಕೆಲಸ ಮಾಡುವ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ.

ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ದೂರಿನ ವಿಚಾರಣೆ ನಡೆಸುವಂತೆ ಓಲಾ ಆಂತರಿಕ ದೂರುಗಳ ಸಮಿತಿಗೆ ಪೀಠ ಸೂಚಿಸಿದೆ. 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page