Sunday, April 27, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ – 34 ಅರ್ಜಿದಾರರಿಗೆ ಮುಖ್ಯ ಪರೀಕ್ಷೆಗೆ ಅವಕಾಶ ಕಲ್ಪಿಸಿದ ಹೈಕೋರ್ಟ್

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ (ಒಟ್ಟು 384 ಹುದ್ದೆಗಳು) ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಪರೀಕ್ಷೆಯ ಅಧಿಸೂಚನೆಯನ್ನು ದಿನಾಂಕ 13-02-2025ರಂದು ಹೊರಡಿಸಿದ್ದು, ಮುಖ್ಯಪರೀಕ್ಷೆಯನ್ನು ದಿನಾಂಕ 03-05-2025, 05-05-2025, 07-05-2025 ಮತ್ತು 09-05-2025 ರಂದು ನಡೆಸಲು ತೀರ್ಮಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಮುಖ್ಯಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆದ interim ಆದೇಶದಂತೆ, W.P.No.9708/2025, W.P.No.10225/2025, W.P.No.10844/2025, W.P.No.11221/2025 ಮತ್ತು W.P.No.11303/2025 ಎಂಬ ವಾದಿಗಳ ಅರ್ಜಿದಾರರಿಗೆ “Petitioner is permitted to appear and take the main examination as scheduled subject to outcome of the petition. Petitioner shall not plead any equity” ಎಂಬಂತೆ ಮಾನ್ಯ ಹೈಕೋರ್ಟ್ ಆದೇಶ ನೀಡಿದೆ. ಈ ಆಧಾರದಲ್ಲಿ, 34 ರಿಟ್ ಅರ್ಜಿದಾರರು ಮುಖ್ಯಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ. ಇವರಿಗೆ ಆಯೋಗದ ಅಂತಿಮ ತೀರ್ಮಾನ ಮತ್ತು ಹೈಕೋರ್ಟ್ ತೀರ್ಪಿನ ಅವಲಂಬನೆಯಿಂದ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಅರ್ಜಿದಾರರು ಆಯೋಗದ ಅಧಿಕೃತ ವೆಬ್‌ಸೈಟ್ http://kpsc.kar.nic.in ನಲ್ಲಿ ಪ್ರಕಟಿಸಿದ ಮುಖ್ಯಪರೀಕ್ಷೆಯ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ, ನಿಗದಿತ ಪರೀಕ್ಷಾ ಶುಲ್ಕ (ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/- ಮತ್ತು ಮೀಸಲಾತಿ ಶ್ರೇಣಿಯ ಅಭ್ಯರ್ಥಿಗಳಿಗೆ ರೂ.300/-) ಸಹಿತ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಐಪಿಒ ರೂಪದಲ್ಲಿ, ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು – 560001 ಇವರ ಹೆಸರಿನಲ್ಲಿ ಪಡೆದು, ದಿನಾಂಕ 28-04-2025ರ ಸಂಜೆ 5.00 ಗಂಟೆಯೊಳಗೆ ಆಯೋಗದ ಕೇಂದ್ರ ಕಚೇರಿಗೆ ಪೂರೈಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಕೋರಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page