ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಕರ್ನಾಟಕದಲ್ಲಿ ಭಾರತ್‌ ಜೋಡೋ ಆರಂಭದ ಹಿನ್ನೆಲೆ ರಾಜ್ಯದ ಜನತೆಗೆ ಡಿ.ಕೆ.ಶಿ ಸಂದೇಶ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಕರ್ನಾಟಕದಲ್ಲಿ ಭಾರತ್‌ ಜೋಡೋ ಆರಂಭದ ಹಿನ್ನೆಲೆ ರಾಜ್ಯದ ಜನತೆಗೆ ಡಿ.ಕೆ.ಶಿ ಸಂದೇಶ

ಬೆಂಗಳೂರು:  ಸೆಪ್ಟೆಂಬರ್ 30ರಂದು ಐತಿಹಾಸಿಕ ಭಾರತ ಐಕ್ಯತಾ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಲಿದೆ. ಈ ಹಿನ್ನಲೆ ಕರ್ನಾಟಕದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಈ ಹಿನ್ನಲೆ ರಾಜ್ಯದ ಜನತೆಗೆ ಸಂದೇಶ ನೀಡಿರುವ ಅವರು, ಜನ-ಮನ ಒಂದಾಗದೆ ಜಗತ್ತಿನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕೇವಲ 5 ವರ್ಷಕ್ಕೊಮ್ಮೆ ಮತ ಹಾಕಿದರೆ ಸಾಲದು. ನಾವು ರಾಜಕಾರಣಿಗಳಾಗಲಿ ಅಥವಾ ಮತದಾರರಾಗಲಿ, ನಮ್ಮ ಕಾಲದ ಸಮಸ್ಯೆಗಳಿಗೆ ಪ್ರತಿದಿನ ಸ್ಪಂದಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ನೀವು ಬದಲಾವಣೆಯನ್ನು ಕಾಣಬೇಕಾದರೆ, ನೀವು ಬದಲಾವಣೆಗೆ ಮುಂದಾಗಬೇಕು, ಬದಲಾವಣೆಗಾಗಿ ಈ ಚಳುವಳಿಯಲ್ಲಿ ಹೆಜ್ಜೆ ಹಾಕಿ. 1947ರಲ್ಲಿ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಭಾರತವನ್ನು ಒಗ್ಗೂಡಿಸಿತು. ಇಂದು, 75 ವರ್ಷಗಳ ನಂತರ, ನಾವು ಬದಲಾವಣೆಗಾಗಿ ಏಕತೆಯ ಪ್ರತಿಜ್ಞೆಯನ್ನು ಮಾಡಿದ್ದೇವೆ ಎಂದರು.

ಬಾರತ ಐಕ್ಯತಾ ಯಾತ್ರೆಯು ಬದಲಾವಣೆಯ ಮೊದಲ ಹೆಜ್ಜೆಯಾಗಿದೆ. ಶ್ರೀ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಿರಂಕುಶ ಅಧಿಕಾರದ ವಿರುದ್ಧ, ದ್ವೇಷ ರಾಜಕಾರಣದ ವಿರುದ್ಧ ನಾವು ಧ್ವನಿ ಎತ್ತುತ್ತಿದ್ದೇವೆ. ಬಿಜೆಪಿಯ ರಾಜಕೀಯ ನಡೆಯಲ್ಲಿ ಜನರ ಬಗ್ಗೆಯಾಗಲಿ, ಅವರ ಸಮಸ್ಯೆಗಳ ಬಗ್ಗೆಯಾಗಲಿ ಮಾತೇ ಇಲ್ಲವಾಗಿದೆ. ಬೆಲೆ ಏರಿಕೆ, ನಿರುದ್ಯೋಗಕೋಮು ಸೌಹಾರ್ದತೆ, ಮಹಿಳಾ ಸುರಕ್ಷತೆ ಅಥವಾ ಆರ್ಥಿಕ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರವು ಮಾತೇ ಆಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ,

ಈ ಹಿನ್ನಲೆ ನೀವು ಯಾತ್ರೆಯಲ್ಲಿ ಪಾಲ್ಗೊಂಡು ನಮ್ಮೊಂದಿಗೆ ನಡೆದಾಗ ಬದಲಾವಣೆಯ ಶಕ್ತಿಯೇನು ಎಂಬುದು ಅರಿವಾಗಲಿದೆ. ಉತ್ತಮ ಭವಿಷ್ಯ ಸಾಧ್ಯ ಎಂಬ ನಂಬಿಕೆ ನಿಮ್ಮದಾಗುತ್ತದೆ. ಹಾಗ ನಾವು 40% ಭ್ರಷ್ಟಾಚಾರದೊಂದಿಗೆ ಬದುಕಬೇಕಾಗಿಲ್ಲ ಎಂದು ನೀವು ನಂಬಲು ಪ್ರಾರಂಭಿಸುತ್ತೀರಿ. ನಾವು ಸಾರ್ವಕಾಲಿಕ ಐತಿಹಾಸಿಕ ನಿರುದ್ಯೋಗದಿಂದ ಕೊರಗಬೇಕಿಲ್ಲ. ನಮ್ಮ ಪ್ರೀತಿಯ ನಾಡು ಎಲ್ಲರಿಗೂ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನೀವು ನಂಬಲು ಪ್ರಾರಂಭಿಸುತ್ತೀರಿ. ಹೀಗಾಗಿ ಇತರ ಪಕ್ಷಗಳಲ್ಲಿರುವ ನನ್ನ ಸ್ನೇಹಿತರನ್ನು ಒಳಗೊಂಡಂತೆ ಎಲ್ಲರನ್ನೂ ಸಹ ಈ ಯಾತ್ರೆಯಲ್ಲಿ ಹೆಜ್ಜೆಹಾಕಲು ನಾನು ಆಹ್ವಾನಿಸುತ್ತಿದ್ದೇನೆ, ಇದರಿಂದಾಗಿ ‘ಅಧಿಕಾರವೆಂದರೆ ಆಳುವುದಲ್ಲ, ಜನರ ಸೇವೆ ಮಾಡುವುದು’ ಎಂದು ಅರಿತುಕೊಳ್ಳಲು ಸಾಧ್ಯವಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

.ಇದು ಪಿಕ್ನಿಕ್ ಅಲ್ಲ ಎಂಬ ಅರಿವಿರಲಿ. ಹವಾಮಾನ ಹೇಗಿದ್ದರೂ ಸಹ ದಿನಕ್ಕೆ 20 ಕಿಲೋಮೀಟರ್ ನಡೆಯಲಿದ್ದೇವೆ. ನಮ್ಮನ್ನು ಪ್ರೀತಿಸುವ ಎಲ್ಲಾ ವರ್ಗದ ಜನರನ್ನು ನಾವು ಭೇಟಿ ಮಾಡಲಿದ್ದೇವೆ, ಅವರ ದುಃಖವನ್ನು ಆಲಿಸಲಿದ್ದೇವೆ.ಉಚಿತ ಸಿಲಿಂಡರ್ ಕೊಟ್ಟು ರಿಫಿಲ್‌ಗಾಗಿ ದುಬಾರಿ ಹಣ ತೆರಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರನ್ನು ನಾವು ಭೇಟಿಯಾಗಲಿದ್ದೇವೆ. ಇದರ ನಡುವೆ ನಿಮಗೆ ಭರವಸೆಯ ಬೆಳಕೂ ಕಾಣಲಿದೆ. ಜನರನ್ನು ಭೇಟಿ ಮಾಡಿದಾಗ ಅವರು ತೋರುವ ಪ್ರೀತಿ, ನೀಡುವ ಆಹಾರದಲ್ಲಿ ನಿಮಗೆ ಭರವಸೆ ಕಾಣಲಿದೆ. ಜಗತ್ತನ್ನು ಎಲ್ಲರಿಗಾಗಿ ಉತ್ತಮವಾಗಿಸಲು ಬದಲಾವಣೆಗಾಗಿ ನಿಮ್ಮೊಡನೆ ಹೆಜ್ಜೆ ಹಾಕುವ ಸಹ ಪಾದಯಾತ್ರಿಗಳನ್ನು ಭೇಟಿಯಾದಾಗ ನಿಮಗೆ ಭರವಸೆ ಮೂಡುತ್ತದೆ ಎಂದರು.

ಈ ಹಿನ್ನಲೆ ಕರ್ನಾಟಕದಲ್ಲಿ ಯಾತ್ರೆಯನ್ನು ಎಲ್ಲಿ ಮತ್ತು ಯಾವಾಗ ಸೇರಬಹುದು ಎಂದು ತಿಳಿಯಲು http://www.bharathaikyatayatre.in/ ವೆಬ್‌ಸೈಟ್‌ಗೆ ಭೇಟಿ ಕೊಡಿ ಎಂದು ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು