ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಆಶಾ ಕಾರ್ಯಕರ್ತೆಯರ ಬೇಡಿಕೆ ಇಡೇರಿಸಿ ಇಲ್ಲವಾದರೆ ಕರ್ನಾಟಕ ಬಂದ್​​​ – ವಾಟಾಳ್‌ ನಾಗರಾಜ್‌ನ.26ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶವ್ಯಾಪಿ ಪ್ರತಿಭಟನೆ; ಮುಕ್ತ ವ್ಯಾಪಾರ ಒಪ್ಪಂದ ರದ್ದತಿಗೆ ಆಗ್ರಹಇಸ್ರೇಲ್ ದೇಶದಿಂದ ಶಸ್ತ್ರಾಸ್ತ್ರ ಖರೀದಿಗೆ ರಾಹುಲ್ ಗಾಂಧಿ ಬೆಂಬಲ: ಎಡಪಕ್ಷಗಳ ನಾಯಕರಿಂದ ಟೀಕೆಅಪ್ಪನನ್ನು ಕೊಲ್ಲಲೆಂದೇ ಸೆಕ್ಯುರಿಟಿ ತೆಗೆದುಹಾಕಲಾಗಿತ್ತು: ಅಂದಿನ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪಪಾಲಕ್ಕಾಡ್ ಶಾಲೆಯಲ್ಲಿ ಸಹಪಾಠಿಯಿಂದ ಗುಂಡಿನ ದಾಳಿ: 9ನೇ ತರಗತಿ ವಿದ್ಯಾರ್ಥಿಗೆ ಗಾಯ; ವಿದ್ಯಾರ್ಥಿ ವಶಕ್ಕೆಎರಡು ಮಕ್ಕಳಿರುವ ಹೆಂಗಸನ್ನು ಮದುವೆಯಾಗುವುದಾಗಿ ಹಟ ಹಿಡಿದ ಮಗನನ್ನು ಕೊಂದು ಮುಗಿಸಿದ ತಾಯಿಬೆಂಗಳೂರಿನ ಇತಿಹಾಸ, ಕಲೆ, ಸಾಹಿತ್ಯಕ್ಕೆ ಹೊಸ ವೇದಿಕೆ: ಡಿಸೆಂಬರ್ 4ರಿಂದ 10 ದಿನಗಳ ಬೆಂಗಳೂರು ಜಾತ್ರೆಕೆಪಿಎಸ್‌ಸಿ ನೇಮಕಾತಿ ಹಗರಣ: 384 ಕೆಎಎಸ್ ಅಧಿಕಾರಿಗಳ ಆಯ್ಕೆಯ ಮೇಲೂ ಅನುಮಾನದ ನೆರಳು; ತನಿಖೆಗೆ ಹೈಕೋರ್ಟ್ ಆದೇಶಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್ ಭರವಸೆಹಿಜಾಬ್ ನಿಯಮಕ್ಕೆ ಸೆಡ್ಡು ಹೊಡೆದ ಗಾಯಕಿಗೆ 74 ಚಡಿಯೇಟು; ಇರಾನ್‌ನಲ್ಲಿ ಕಠಿಣ ಶಿಕ್ಷೆಲಾಭ ಹೆಚ್ಚುತ್ತಿದೆ, ಉದ್ಯೋಗ ಮತ್ತು ವೇತನ ಏಕೆ ಹೆಚ್ಚುತ್ತಿಲ್ಲ? ಉದ್ಯಮ ವಲಯಕ್ಕೆ ಪ್ರಧಾನಿ ಮೋದಿ ನೇರ ಪ್ರಶ್ನೆಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿಯೆಮನ್‌ನಲ್ಲಿ ಸೌದಿ ಅರೇಬಿಯಾದ ವೈಮಾನಿಕ ದಾಳಿ: 25 ಮಂದಿ ಸಾವು ಅಥವಾ ನಾಪತ್ತೆ; ಆರು ಜನರಿಗೆ ಗಾಯಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ, ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?ಪುಣೆಯ ಟೆಕ್ಕಿಯಿಂದ ಲಿವ್‌-ಇನ್‌ ಸಂಗಾತಿಯ ಹತ್ಯೆ; ಇಡೀ ರಾತ್ರಿ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಆರೋಪಿ, ಬೆಳಗ್ಗೆ ಪೊಲೀಸರಿಗೆ ಕರೆಆನೆಗಳನ್ನು ಸ್ಥಳಾಂತರಿಸುವುದರಿಂದ ಸಮಸ್ಯೆ ಬಗೆಹರಿಯದು; ಅವು ನಡೆದಾಡುವ ದಾರಿಗಳ ಒತ್ತುವರಿ ತೆರವುಗೊಳಿಸಿ: ರಮ್ಯಾ ದಿವ್ಯ ಸ್ಪಂದನಭಾರತ್‌ ಜೋಡೋ ಯುವ ಸಂಘಕ್ಕೆ ₹1,000 ಕೋಟಿ ಘೋಷಿಸಿದ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದು ಕಷ್ಟವಲ್ಲ: ಕುಮಾರಸ್ವಾಮಿಗ್ರೀನ್ ಎಸ್‌ಎಂ, ವಿನ್ಫಾಸ್ಟ್‌ ವಾಹನಗಳ ನೋಂದಣಿಗೆ ಮಿತಿ ವಿಧಿಸುವಂತೆ ಆಟೋ, ಟ್ಯಾಕ್ಸಿ ಚಾಲಕರ ಆಗ್ರಹಕಬ್ಬಿನ ಬೆಲೆ ನಿಗದಿ ಬಿಕ್ಕಟ್ಟು: ಹಾವೇರಿ ಡಿಸಿ ಕಚೇರಿಗೆ ಮುತ್ತಿಗೆ, ಸಚಿವರು–ಸಕ್ಕರೆ ಕಾರ್ಖಾನೆ ಮಾಲೀಕರನ್ನು ಒಳಗೆ ಕೂಡಿ ಹಾಕಿದ ರೈತರುಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ಬಂದ್: ಸಚಿವ ಶಿವರಾಜ್ ತಂಗಡಗಿ

ಕರ್ನಾಟಕ ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ, ಅಲ್ಪಸಂಖ್ಯಾತರ ಸಮಸ್ಯೆಗಳ ಚರ್ಚೆಗೆ ಪ್ರತ್ಯೇಕ ಸಭೆ: ಡಿ.ಕೆ. ಶಿವಕುಮಾರ್ ಭರವಸೆ

ಕರ್ನಾಟಕ ಉರ್ದು ಅಕಾಡೆಮಿಗೆ ಹೆಚ್ಚುವರಿ ಅನುದಾನ ನೀಡುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳ ಕುರಿತು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. DK Shivakumar, Karnataka Urdu Academy, Urdu Language, Urdu Literature, Minority Welfare, Jashn-e-Urdu,

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಕರ್ನಾಟಕ ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ

ಬೆಂಗಳೂರು: ಕರ್ನಾಟಕ ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಇದೇ ವೇಳೆ, ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸುವುದಾಗಿಯೂ ತಿಳಿಸಿದ್ದಾರೆ.

ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್‌ಹಾಲ್‌ನಲ್ಲಿ ಸೋಮವಾರ ಕರ್ನಾಟಕ ಉರ್ದು ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಪುಸ್ತಕ ಬಿಡುಗಡೆ ಹಾಗೂ ‘ಜಶ್ನ್‌-ಎ-ಉರ್ದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಾಗಿ 20 ಸಾಧಕರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಉರ್ದು ಅಕಾಡೆಮಿಗೆ ಹೆಚ್ಚುವರಿ ಅನುದಾನ ನೀಡುವ ಪ್ರಸ್ತಾವವನ್ನು ಈಗಾಗಲೇ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು. ಅಕಾಡೆಮಿಗೆ ಎಷ್ಟು ಅನುದಾನದ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ, ಅದರ ಚಟುವಟಿಕೆಗಳಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

“ಅಕಾಡೆಮಿಗೆ ಏನೇನು ಅಗತ್ಯವಿದೆಯೋ ಅದನ್ನು ಪರಿಶೀಲಿಸಿ ನೆರವು ನೀಡಲಾಗುವುದು. ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ” ಎಂದು ಹೇಳಿದರು.

ಕ್ರೈಸ್ತರು, ಮುಸ್ಲಿಮರು, ಜೈನರು ಮತ್ತು ಬೌದ್ಧ ಸಮುದಾಯಗಳ ಮುಖಂಡರು ಹಾಗೂ ಶಾಸಕರೊಂದಿಗೆ ಮುಂದಿನ ವಾರ ಸಭೆ ನಡೆಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಸಕರ ಅಭಿಪ್ರಾಯಗಳನ್ನೂ ಆಲಿಸಲಾಗುವುದು ಎಂದು ತಿಳಿಸಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಹಾಗೂ ವಿವಿಧ ಸಮುದಾಯಗಳಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವ ಉದ್ದೇಶದಿಂದ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಗೌರವವನ್ನು ಎಲ್ಲ ಸಮುದಾಯಗಳಿಗೂ ರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ. ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿ ಕಾಪಾಡುವುದು ಮತ್ತು ಅವರ ಧ್ವನಿಯಾಗಿ ಕೆಲಸ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಉರ್ದು ಭಾಷೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ಭಾಷೆಯಲ್ಲ. ಅದು ಸಾಹಿತ್ಯ, ಕವಿತೆ ಮತ್ತು ಶಾಯರಿ ಮೂಲಕ ಜನರನ್ನು ಬೆಸೆಯುವ ಭಾಷೆ. ಉರ್ದು ಭಾಷೆ ಮತ್ತು ಸಂಸ್ಕೃತಿಗೆ ಜಾಗತಿಕ ಮನ್ನಣೆ ದೊರೆತಿದ್ದು, ಎಲ್ಲರೂ ಅದನ್ನು ಗೌರವಿಸಬೇಕು ಎಂದು ಶಿವಕುಮಾರ್ ಹೇಳಿದರು.

ಮೈಸೂರು ದಸರಾ ಸಂದರ್ಭದಲ್ಲಿ ನಡೆದ ಉರ್ದು ಶಾಯರಿ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಭಾಗವಹಿಸಿದ್ದನ್ನು ಅವರು ಸ್ಮರಿಸಿದರು. ಆ ಕಾರ್ಯಕ್ರಮದಲ್ಲಿ ಮುಸ್ಲಿಮರಷ್ಟೇ ಅಲ್ಲದೆ ಜೈನರು, ಬ್ರಾಹ್ಮಣರು, ಕನ್ನಡಿಗರು ಮತ್ತು ಹಿಂದಿ ಭಾಷಿಕರೂ ಆಸಕ್ತಿಯಿಂದ ಶಾಯರಿ ಆಲಿಸಿದ್ದರು. ಭಾಷೆ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟರು.

“ನಮ್ಮ ಭಾಷೆಗಳು ಬೇರೆಬೇರೆಯಾಗಿರಬಹುದು. ಆದರೆ ಮಾನವೀಯ ಭಾವನೆಗಳು ಒಂದೇ. ಮಾನವೀಯತೆಯೇ ನಮ್ಮ ಜಾತಿ, ಮಾನವೀಯತೆಯೇ ನಮ್ಮ ಧರ್ಮ. ಕತ್ತರಿಯಂತೆ ಜನರನ್ನು ಬೇರ್ಪಡಿಸುವ ಬದಲು ಸೂಜಿಯಂತೆ ಜನರನ್ನು ಬೆಸೆಯುವ ಕೆಲಸ ಮಾಡೋಣ” ಎಂದು ಹೇಳಿದರು.

ಭಾಷೆ ಎನ್ನುವುದು ಸಂವಹನದ ಮಾಧ್ಯಮವಾಗಿದ್ದು, ಯಾವುದೇ ಭಾಷೆಯನ್ನು ಕೀಳಾಗಿ ಕಾಣಬಾರದು. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ:

https://peepalmedia.com/sports/election-commission-mcc-restrictions-retired-government-officials
PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು