ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ದೇವೇಗೌಡ್ರು, ಕುಟುಂಬದ ಸಾಧನೆ ತಿಳಿಯಲು ಜಿಲ್ಲೆಯ ಪ್ರವಾಸ ಕೈಗೊಳ್ಳಲಿಶ್ರೇಯಸ್ ಪಟೇಲ್ ರಿಗೆ ಸವಾಲು ಹಾಕಿದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 2 ನಿಮಿಷದ ಓದು

ದೇವೇಗೌಡ್ರು, ಕುಟುಂಬದ ಸಾಧನೆ ತಿಳಿಯಲು ಜಿಲ್ಲೆಯ ಪ್ರವಾಸ ಕೈಗೊಳ್ಳಲಿಶ್ರೇಯಸ್ ಪಟೇಲ್ ರಿಗೆ ಸವಾಲು ಹಾಕಿದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್


ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಅವರ ಕುಟುಂಬದವರು ಏನು ಕೆಲಸ ಮಾಡಿದ್ದಾರೆ ಬಗ್ಗೆ ತಿಳಿಯಲು ಸಂಸದರು ಜಿಲ್ಲೆಯ ಪ್ರವಾಸ ಕೈಗೊಂಡು ಸಂಚಾರ ಮಾಡಿ ಎಲ್ಲೆಲ್ಲಿ ಏನು ಕೆಲಸ ಆಗಿದೆ ಪಟ್ಟಿ ಮಾಡಿಕೊಳ್ಳಲಿ. ಇವರು ಮಾಡಿದ ಅಭಿವೃದ್ಧಿ ಕೆಲಸವನ್ನು ಸಂಸದರಾದ ಶ್ರೇಯಸ್ ಪಟೇಲ್ ಅವರು ಕೂಡ ಮಾಡಿ ತೋರಿಸಲಿ ಎಂದು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸವಾಲು ಹಾಕಿದರು.


ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಒಬ್ಬ ಯುವಕನಾಗಿ, ಸೌಮ್ಯ ಸ್ವಭಾವದವನಾಗಿ, ಮುಂದಿನ ದಿನಗಳಲ್ಲಿ ದೊಡ್ಡ ಲೀಡರ್ ಆಗಿ ಹಾಸನ ಜಿಲ್ಲೆಗೆಯಲ್ಲ, ರಾಜ್ಯಕ್ಕೆ ಪರಿಚಿತರಾಗಿ ಜಿಲ್ಲೆಯ ಕೀರ್ತಿ ಹೆಚ್ಚು ಮಾಡಲಿ. ನಮಗೆ ಸಂಸದರಾದ ಶ್ರೇಯಸ್ ಪಟೇಲ್ ಬಗ್ಗೆ ಬಹಳ ಗೌರವವಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಕುಟುಂಬದವರು ಏನು ಎಂದು ಕೆಲಸ ಮಾಡಿದ್ದಾರೆ ಎಂದು ಹೇಳುವುದಾದರೇ ಒಂದು ದಿನ ಬೇಕಾಗುತ್ತದೆ. ಶ್ರೇಯಸ್ ಪಟೇಲ್ ಅವರು ನಮ್ಮ ಜಿಲ್ಲೆಯ ಪ್ರವಾಸ ಕೈಗೊಂಡು ಸಂಚಾರ ಮಾಡಲಿ. ಎಲ್ಲೆಲ್ಲಿ ಏನೆನು ಕೆಲಸ ಆಗಿದೆ ಎಂಬುದನ್ನು ಪಟ್ಟಿ ಮಾಡಲಿ. ತಾತ ಹಾಗೂ ಶ್ರೀಕಂಠಯ್ಯ ಅವರ ಸಾಧನೆಯನ್ನು ಜಿಲ್ಲೆಯ ಜನ ಕಂಡಿದ್ದಾರೆ. ಹಳೇಬೀಡಿಗೆ ಯಗಚಿ ನೀರು ಹರಿಸುವುದಾಗಿ ಪುಟ್ಟಸ್ವಾಮಿಗೌಡ ಭರವಸೆ ನೀಡಿದರು ಆದರೆ ಮುಂದೆ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ಎಚ್ ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ 130 ಕೋಟಿ ಯೋಜನೆಗೆ ಚಾಲನೆ ನೀಡಲಾಯಿತು. ಯಡಿಯೂರಪ್ಪ ಅವರು ಸಹ ಹಣ ಬಿಡುಗಡೆ ಮಾಡಿದರು ಎಂದರು. ಆರು ತಿಂಗಳ ಕುಮಾರಸ್ವಾಮಿಯವರ ಅಭಿವೃದ್ಧಿಯ ಬಗೆ ಮಾತನಾಡುವ ಶ್ರೇಯಸ್ ಪಟೇಲ್ ಅವರು ಇದುವರೆಗೂ ಏನು ಎಂಬುದನ್ನು ಗಮನಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದು, ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲಿ ಆಗ ಜನರು ಬೇಷ್ ಎನ್ನುತ್ತಾರೆ ಎಂದು ಸಲಹೆ ನೀಡಿದರು. ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಮಾವೇಶದ ಬಗ್ಗೆ ಜನರು ಈಗಲೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ಅಧಿವೇಶನ ಮಾಡಿಲ್ಲ. ದೇವೇಗೌಡರ ಕುಟುಂಬವನ್ನು ಬಯ್ಯುವುದಕ್ಕೆ ಮಾಡಿರುವ ಅಧಿವೇಶನವಾಗಿದೆ ಎನ್ನುತ್ತಿದ್ದಾರೆ. ಇಷ್ಟು ದೊಡ್ಡ ಸಮಾವೇಶ ಮಾಡಿ ಕನಿಷ್ಠ ನೂರು ಕೋಟಿ ಅನುಧಾನ ಬಿಡುಗಡೆ ಮಾಡಿಸಿದ್ದರೇ ಬಹಳ ಸಂತೋಷವಾಗುತಿತ್ತು. ಒಂದು ಕಡೆ ಗ್ಯಾರಂಟಿ ತಂದು ಅರ್ಧಬರ್ಧವಾಗಿ ಎಲ್ಲಾ ಅಭಿವೃದ್ಧಿ ಶೂನ್ಯವಾಗಿ ಜನರು ಬಯ್ಯುವ ಕಾಲದಲ್ಲಿ ಅನುಧಾನ ತಂದು ಅದನ್ನಾದರೂ ಪೋಕಸ್ ಮಾಡಬಹುದಿತ್ತು ಎಂದು ಕುಟುಕಿದರು. ಎಚ್ ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ 130 ಕೋಟಿ ರಣಘಟ ್ಟ ಯೋಜನೆಗೆ ಚಾಲನೆ ನೀಡಲಾಯಿತು ಯಡಿಯೂರಪ್ಪ ಅವರು ಸಹ ಹಣ ಬಿಡುಗಡೆ ಮಾಡಿದರು ಎಂದರು. ಆರು ತಿಂಗಳ ಕುಮಾರಸ್ವಾಮಿಯವರ ಅಭಿವೃದ್ಧಿಯ ಬಗೆ ಮಾತನಾಡುವ ಶ್ರೇಯಸ್ ಪಟೇಲ್ ಅವರು ಇದುವರೆಗೂ ಏನು ಮಾಡಿದ್ದಾರೆ ಎಂಬುದನ್ನು ಗಮನಿಸಲಿ. ಕುಮಾರಸ್ವಾಮಿಯವರು ದೇಶದಲ್ಲಿ ನಿಂತು ಹೋಗಿದ್ದ ಅನೇಕ ಕೈಗಾರಿಕೆಗಳನ್ನು ಮರು ಸ್ಥಾಪಿಸಲು ಪ್ರಯತ್ನ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಸಾಧನೆ ಶೂನ್ಯ ಎಂದು ಹೇಳುತ್ತಿದ್ದೀರಾ, ಕಳೆದ ಆರು ತಿಂಗಳಲ್ಲಿ ದೇಶದಾಧ್ಯಂತ ತಿರುಗಿದ್ದಾರೆ. ಮುಚ್ಚಿ ಹೋಗುತ್ತಿದ್ದಂತಹ ಖಾಸಗೀಯವರು ಕಬಳಿಸುತ್ತಿದ್ದ ಆಂದ್ರದ ವಿಶಾಖಪಟ್ಟಣ, ಭದ್ರವತಿಯ ಕಬ್ಬಿಣದ ಕಾರ್ಖಾನೆ, ಹೆಚ್.ಎಂ.ಟಿ. ಕುದುರೆಮುಖ ಭೇಟಿ ಮಾಡಿ ಉಳಿಸಲು ಪುನರುಜ್ಜೀವನಗೊಳಿಸಲು 1.35 ಲಕ್ಷ ಕೋಟಿ ರೂ ವೆಚ್ಚದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಿದ್ದಾರೆ. ದೇವೇಗೌಡರು ಪ್ರಧಾನಿ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಂತಹ ವೇಳೆ ರೇವಣ್ಣನವರ ಶಕ್ತಿಯಿಂದ ಕೆ.ಎಂ.ಎಫ್. ಅಭಿವೃದ್ಧಿಯಾಗಿದ್ದರಿಂದ ಬಡವರು ಕೂಲಿಗೆ ಹೋಗದಂತೆ ಬದುಕುವ ಕೆಲಸ ಮಾಡಿದ್ದಾರೆ. ಇಂತಹ ಒಂದು ಕೆಲಸ ಮಾಡಿ ತೋರಿಸಿ ಪಟೇಲ್ರೆ ಎಂದು ಸವಾಲು ಹಾಕಿದರು.
ಹಾಸನಾಂಬೆ ದೇವಾಲಯದ ಜಾತ್ರೆ ವೇಳೆ ಮದುಗಿರಿ ಮತ್ತು ಅರಸೀಕೆರೆ ಕಡೆಯಿಂದ ಬಸ್ ಟಿಕೆಟ್ ಹಂಚುವಾಗೆ ವಿತರಣೆ ಮಾಡಿರುವ ಬಗ್ಗೆ ಜನರು ಮಾತನಾಡಿದ್ದಾರೆ. ಈ ವೇಳೆ ಸಂಸದರು ಏಕೆ ಪ್ರಶ್ನೆ ಮಾಡಲಿಲ್ಲ ಎಂದು ಗುಡುಗಿದರು. ಸಂಸದರಾಗಿ ಶ್ರೇಯಸ್ ಪಟೇಲ್ ಪ್ರಮುಖವಾಗಿ ಜಿಲ್ಲೆಗೆ ಅಂತರಾಷ್ಟಿçÃಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಶ್ರಮವಹಿಸಬೇಕು. ಸಾಕ್ಷಿಗುಡ್ಡೆಗಳನ್ನು ಕಣ್ಣ ಮುಂದೆ ಇಟ್ಟುಕೊಂಡು ಜೆಡಿಎಸ್ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡುವ ಶ್ರೇಯಸ್ ಪಟೇಲ್ ಅಧಿವೇಶನದಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಿದ್ದಾರೆ, ಕೇಂದ್ರ ಸಚಿವರು ಹಾಸನಕ್ಕೆ ಬಂದಾಗ ಅವರಿಗೆ ಮನವಿ ಮಾಡುವ ಬದಲಾಗಿ ಅವರ ವಿರುದ್ಧವೇ ಮಾತನಾಡುವ ಮೂಲಕ ಆಗುವ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಡಿ ಬಗ್ಗೆ ಮಾತನಾಡುವ ಸಂಸದರು ಸಿಡಿ ಬಿಡುಗಡೆ ಮಾಡಿ ಜಿಲ್ಲೆಯ ಗೌರವವನ್ನು ಬೀದಿ ಪಾಲು ಮಾಡಿದವರ ಜೊತೆಗೆ ಊಟ ಮಾಡುವ ಕೆಲಸ ಮಾಡುತ್ತಿದ್ದಾರೆ ಹಾಗಾದರೆ ಕುತಂತ್ರ ಯಾರದ್ದು ಎಂಬ ಬಗ್ಗೆ ಜನ ಯೋಚಿಸಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಪಕ್ಷದ ಮಾಧ್ಯಮ ವಕ್ತಾರ ಹೊಂಗೇರೆ ರಘು, ಎಚ್ ಡಿ ಸಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ ಇತರರು ಉಪಸ್ಥಿತರಿದ್ದರು.

ವಿಷಯಗಳು: #india #news #peepal #politics
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು