ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ರಂಗಾಯಣದಲ್ಲಿ ಭಾರತೀಯತೆ ಬಿಂಬಿಸುವ ಪ್ರಯೋಗಗಳಾಗಲಿ : ಬೊಮ್ಮಾಯಿ

PPeepal Media Desk

Peepal Media Desk • ರಾಜ್ಯ

• 1 ನಿಮಿಷದ ಓದು

ರಂಗಾಯಣದಲ್ಲಿ ಭಾರತೀಯತೆ ಬಿಂಬಿಸುವ ಪ್ರಯೋಗಗಳಾಗಲಿ : ಬೊಮ್ಮಾಯಿ

ಮೈಸೂರು: ನಮ್ಮ ಸಂಸ್ಕೃತಿಯ ಜೊತೆಗೆ ಭಾರತೀಯತೆಯನ್ನು ಬಿಂಬಿಸುವಂತಹ ಪ್ರಯೋಗಗಳು ರಂಗಾಯಣದಲ್ಲಿ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರದಂದು ರಂಗಾಯಣದ ವನರಂಗದಲ್ಲಿ ಬಹುರೂಪಿ ರಂಗಾಯಣ ವತಿಯಿಂದ ಆಯೋಜಿಸಿದ್ದ “ಬಹುರೂಪಿ ರಾಷ್ಟ್ರೀಯ ರಂಗೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ʼಬಹುರೂಪಿ ರಂಗೋತ್ಸವದಲ್ಲಿ ನಮ್ಮ ಸಂಸ್ಕೃತಿ ಪರಂಪರೆ, ಇತಿಹಾಸವುಳ್ಳ ಭಾರತೀಯತೆಯ ಆತ್ಮವನ್ನು ಬಿಂಬಿಸುವ ಪ್ರಯತ್ನ ಮಾಡಬೇಕು. ಇಂತಹ ಹೊಸ ಪ್ರಯತ್ನಗಳಿಂದ ರಂಗಾಯಣಕ್ಕೆ ಹೊಸ ಆಯಾಮ ದೊರೆಯಲಿದೆ. ರಂಗಾಯಣದ ಹೊಸ ವಿಚಾರಗಳು  ಹಾಗೂ ವಿಭಿನ್ನ ಪ್ರಯತ್ನಗಳು ಜನರ ಬದುಕಿನಲ್ಲಿ ಬದಲಾವಣೆಗೆ ನಾಂದಿಯಾಗಲಿ.  ರಂಗಾಯಣಕ್ಕೆ ಜಾಗ ಹಾಗೂ ಹೆಚ್ಚಿನ ಅನುದಾನದ ಬಗ್ಗೆಯೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಾಟಕಗಳು ಹೇಗೆಲ್ಲಾ ಪರಿಣಾಮಕಾರಿ ಬೀರುತ್ತವೆ ಎಂಬುದರ ಬಗ್ಗೆ ಮಾತನಾಡಿ ಹೊಸ ವಿಚಾರಗಳನ್ನೊಳಗೊಂಡ ಹಾಗೂ ಎಲ್ಲರನ್ನೂ ಒಳಗೊಳ್ಳುವ ರಂಗಾಯಣ ಆಗಬೇಕು. ವೈಚಾರಿಕೆಯಲ್ಲಿ ಸತ್ಯ ಹಾಗೂ ಬದುಕಿಗೆ ಹತ್ತಿರವಾದ ವಿಚಾರಗಳನ್ನು ರಂಗಾಯಣ ಮುಂದಕ್ಕೆ ತರಬೇಕು. ಶಬ್ದಗಳಲ್ಲಿ ಹೇಳಲಾಗದ್ದನ್ನು ಹಾವ ಭಾವಗಳ ಮೂಲಕ ಜನರಿಗೆ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸುವ ಮಾಧ್ಯಮವೇ ನಾಟಕಗಳು ಎಂದರು.

ನಟ ರಮೇಶ್  ಅರವಿಂದ್ ಅವರು ತಮ್ಮ ಪಾತ್ರಗಳನ್ನು ಸರಳವಾಗಿ ನಿರ್ವಹಿಸುತ್ತಾರೆ‌. ಅವರು ತಮ್ಮ ಮುಗ್ಧತೆಯನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ. ನೈಜವಾಗಿ ಅಭಿನಯ ಮಾಡುವುದು ಬಹಳ ಕಷ್ಟ. ನಮ್ಮ ಬದುಕಿನಲ್ಲಿಯೇ ಕೆಲವು ನಿರ್ಬಂಧಗಳನ್ನು ಹಾಕಿಕೊಂಡಿರುತ್ತೇವೆ. ಚಿಕ್ಕವರಿದ್ದಾಗ ಇರುವ ಮುಗ್ದತೆ, ದೊಡ್ಡವರಾದ ಮೇಲೆ  ಇರುವುದಿಲ್ಲ. ನಮ್ಮಲ್ಲಿ ಕೃತಕತೆ ಬಂದಾಗ ನೈಜತೆ ಮಾಯವಾಗುತ್ತದೆ. ಆತ್ಮಸಾಕ್ಷಿಯಿಂದ ಬದುಕುವುದು ಬಹಳ ಕಷ್ಟ. ಕೆಲವೇ ಸಾಧಕರಿಗೆ ಇದು ಸಾಧ್ಯವಾಗುತ್ತದೆ ಎಂದರು.

ಮನಸ್ಸು ಶುದ್ದ ಇದ್ದರೆ ಅದು ಮುಖದಲ್ಲಿ ಅಭಿವ್ಯಕ್ತವಾಗುತ್ತದೆ. ರಂಗಾಯಣದಲ್ಲಿ ಮಾನವೀಯತೆಯ ಮೇಲೆ ಪ್ರಯೋಗಗಳಾಗಬೇಕು. ಸಮಾಜದಲ್ಲಿರುವ ಲೋಪದೋಷಗಳನ್ನು, ಅಂಕುಡೊಂಕುಗಳನ್ನು ಸರಿಪಡಿಸುವ  ಹಾಗೂ ವಾಸ್ತವಾಂಶದ ವಿಷಯ ವಸ್ತುಗಳಿರುವ ನಾಟಕಗಳು ಬರಬೇಕು. ನಾಟಕಗಳಲ್ಲಿ ನಿಷ್ಟುರತೆ ಹಾಗೂ ಸ್ಪಷ್ಟತೆ ಇರಬೇಕು. ನಮ್ಮಲ್ಲಿರುವ ನಮ್ಮ ನಾಗರಿಕತೆ ಮತ್ತು ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪರಂಪರಾಗತ ಮೈಸೂರು ಇಂದು ಆಧುನಿಕ ಮೈಸೂರಾಗಿ ಅಭಿವೃದ್ಧಿ ಹೊಂದಿದೆ . ಮೈಸೂರಿಗೆ ತನ್ನದೇ ಆದ ಸ್ಥಾನ ಇದೆಯೊ ಅದೇ ರೀತಿ ಮೈಸೂರು ರಂಗಾಯಣಕ್ಕೂ ವಿಶೇಷ ಸ್ಥಾನ ಇದೆ. ಇಂತಹ ಸಂಸ್ಥೆಗಳಲ್ಲಿ ವೈಚಾರಿಕ ಸಂಘರ್ಷಗಳು ನಡೆಯುತ್ತಿವೆ‌. ಎಲ್ಲಿ ವೈಚಾರಿಕ ಸಂಘರ್ಷ ಇರುವುದಿಲ್ಲವೊ ಅಲ್ಲಿ ಹೊಸ ವಿಚಾರಗಳು ಹಾಗೂ ಜೀವಂತಿಕೆ ಇರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಚಲನಚಿತ್ರ ನಟ ರಮೇಶ್ ಅರವಿಂದ್, ಸಂಸದ ಪ್ರತಾಪ ಸಿಂಹ ಮತ್ತಿತರು ಉಪಸ್ಥಿತರಿದ್ದರು.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು