ಪತ್ರಕರ್ತರಿಗೆ ಭಕ್ಷೀಸು-ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ? : ಕಾಂಗ್ರೆಸ್ ಕಿಡಿ
ಲಿಂಕ್ ನಕಲಿಸಲಾಗಿದೆ ✓

ಬೆಂಗಳೂರು : ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿಯ ಜೊತೆಗೆ 2.5 ಲಕ್ಷ ರೂಪಾಯಿ ನಗದು ಕೊಡುಗೆಯಾಗಿ ನೀಡಿರುವ ಸುದ್ದಿ ಎಲ್ಲಡೆ ವರದಿಯಾಗಿದ್ದು, ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಇದು ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ? ಎಂದು ಬಿಜೆಪಿಗೆ ಪ್ರಶ್ನೆ ಮಾಡಿದೆ.
ಮಾಧ್ಯಮಗಳ ಪತ್ರಕರ್ತರಿಗೆ, ಸಂಪಾದಕರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ದೀಪಾವಳಿ ಗಿಫ್ಟ್ ಆಗಿ ಸಿಹಿ ತಿಂಡಿಯೊಂದಿಗೆ ಲಕ್ಷಗಟ್ಟಲೆ ಹಣ ನೀಡಿರುವ ಕುರಿತು ʻಪೀಪಲ್ ಮೀಡಿಯಾʼ ಇಂದು ಬೆಳಿಗ್ಗೆ ಸ್ಫೋಟಕ ವರದಿ ಮಾಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ಲಕ್ಷ ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 40% ಕಮಿಷನ್‌ನಲ್ಲಿ ನೀಡಿದ ಹಣವೇ? 40% ಕಮಿಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ? ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ? ಎಂದು ಸಿಎಂ ಬೊಮ್ಮಾಯಿಗೆ ಪ್ರಶ್ನೆ ಮಾಡಿದ್ದು, ಆ ‘ಲಂಚ’ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕು ಎಂದು ಸವಾಲೊಡ್ಡಿದೆ.
ಈ ಸುದ್ದಿಗಳನ್ನೂ ಓದಿ:
ಪತ್ರಕರ್ತರಿಗೆ ಲಕ್ಷಗಟ್ಟಲೆ ದುಡ್ಡು: ಸಿಎಂ ಕಚೇರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆ
ಸಿಎಂ ಕಚೇರಿಯ ಗಿಫ್ಟ್ ಹಣ ನಿರಾಕರಿಸಿದ ಕನ್ನಡಪ್ರಭ
ಶಾಕಿಂಗ್ ನ್ಯೂಸ್: ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ತಲಾ 2.5 ಲಕ್ಷ ರುಪಾಯಿ ಗಿಫ್ಟ್!
Peepal Media Desk
Peepal Media · ರಾಜ್ಯ ವಿಭಾಗ
