ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಧಾರ್ಮಿಕ ಘೋಷಣೆಗಳನ್ನು ಕ್ರೀಡಾಂಗಣಕ್ಕೆ ತಂದವರು, ಪನೌತಿಯಂತಹ ಮೂಢನಂಬಿಕೆಗಳನ್ನು ಸಹ ಹೆಗಲಿಗೇರಿಸಿಕೊಳ್ಳಲೇಬೇಕು: ಹುಲಿ ಕಿಶೋರ್

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಧಾರ್ಮಿಕ ಘೋಷಣೆಗಳನ್ನು ಕ್ರೀಡಾಂಗಣಕ್ಕೆ ತಂದವರು, ಪನೌತಿಯಂತಹ ಮೂಢನಂಬಿಕೆಗಳನ್ನು ಸಹ ಹೆಗಲಿಗೇರಿಸಿಕೊಳ್ಳಲೇಬೇಕು: ಹುಲಿ ಕಿಶೋರ್

ಗುಜರಾತಿನ ಅಹ್ಮದಾಬಾದ್‌ನಲ್ಲಿ ನಡೆದ ವಿಶ್ಪಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ಮ್ಯಾಚಿನಲ್ಲಿ ಭಾರತ ಸೋತ ನಂತರ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪನೌತಿ ಎಂದು ಕರೆಯಲಾಗುತ್ತಿದೆ. ಈ ಕುರಿತು ಪರ-ವಿರೋಧ ಚರ್ಚೆಗಳೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.

ಚಂದ್ರಯಾನ ಎರಡರ ಸಮಯದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿಯವರನ್ನು ಕಾಂಗ್ರೆಸ್‌ ಬೆಂಬಲಿಗರು ಪನೌತಿ ಎಂದು ಕರೆದಿದ್ದರು. ಮೋದಿ ಅಂದು ಸ್ಥಳದಲ್ಲಿದ್ದ ಕಾರಣದಿಂದಾಗಿ ಚಂದ್ರಯಾನ ವಿಫಲವಾಗಿತ್ತು ಎಂದು ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಚರ್ಚೆ ನಡೆದಿತ್ತು.

ಅದಾದ ನಂತರ ಪ್ರಧಾನಿ ವಿಶ್ವಕಪ್‌ ಪಂದ್ಯಕ್ಕೆ ಹೋಗಲಿದ್ದಾರೆನ್ನುವ ಸುದ್ದಿ ಹರಡುತ್ತಿದ್ದಂತೆ ಮತ್ತೆ ಪನೌತಿ ಎನ್ನುವ ಶಬ್ಧ ಮುನ್ನೆಲೆಗೆ ಬಂದು ವಿಶ್ವಕಪ್‌ ಮುಗಿಯುವ ವೇಳೆಗೆ ಅದು ಟ್ವಿಟರ್‌ (ಈಗಿನ ಎಕ್ಸ್)‌ ವೇದಿಕೆ ಟ್ರೆಂಡಿಂಗಿನಲ್ಲಿತ್ತು. ರಾಹುಲ್‌ ಗಾಂಧಿ ಕೂಡಾ ಮೋದಿಯ ಹೆಸರನ್ನು ಬಳಸದೆ “ಪಂದ್ಯಕ್ಕೆ ಪನೌತಿಗಳು ಹೋಗಿದ್ದರಿಂದ ಪಂದ್ಯದಲ್ಲಿ ಸೋಲಾಯಿತು” ಎಂದು ಹೇಳಿದ ನಂತರವಂತೂ ಈ ಪದ ಇನ್ನಷ್ಟು ವೈರಲ್‌ ಆಗತೊಡಗಿತು ಮತ್ತು ಘಟಾನುಘಟಿಗಳು ಈ ಪದವನ್ನು ಬಳಸಿ ಟ್ವೀಟ್‌ ಮಾಡತೊಡಗಿದರು. ಇದರೊಂದಿಗೆ ಬಹುತೇಕೆ ಈ ಪದ ಸೋಷಿಯಲ್‌ ಮೀಡಿಯಾವನ್ನು ಎರಡು ಮೂರು ದಿನಗಳ ಕಾಲ ಆಳಿತು.

ಪ್ರಸ್ತುತ ಚಿತ್ರನಟ ಹುಲಿ ಕಿಶೋರ್‌ ಅವರು ವಿಷಯಕ್ಕೆ ಪ್ರತಿಕ್ರಿಯಿಸುವುದರೊಂದಿಗೆ ಮತ್ತೊಮ್ಮೆ ಪನೌತಿ ಪದ ಮುನ್ನೆಲೆಗೆ ಬಂದಿದೆ. ಸಾಮಾನ್ಯವಾಗಿ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಪ್ರತಿಕ್ರಿಯಿಸುವ ಕೆಲವೇ ನಟರಲ್ಲಿ ಒಬ್ಬರಾದ ಕಿಶೋರ್‌ ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ‌ ಬರೆದುಕೊಂಡಿದ್ದಾರೆ.

ಈ ಕುರಿತು ಪೋಸ್ಟ್‌ ಮಾಡಿರುವ ಅವರು, ” ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೊ….
ಜೈಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು..
ಆದರೆ ಇಂದಿನ ವ್ಯವಸ್ಥೆಯ ವ್ಯಂಗ್ಯವೇನೆಂದರೆ ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್ಟಿನಲ್ಲೂ, ಪ್ರೇಕ್ಷಕರನ್ನು ಜೈ ಶ್ರೀರಾಮ್ ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಂದಿಟ್ಟವರು ಪನೌತಿಯ ಪ್ರಭಾವವನ್ನೂ ಹೆಗಲಿಗೇರಿಸಿಕೊಳ್ಳಲೇಬೇಕು..
ಹೊಲಸು ಧರ್ಮಾಂಧ ರಾಜಕಾರಣದಿಂದ ಮೂಢನಂಬಿಕೆಯ ಕೂಪದಲ್ಲಿ ತಳ್ಳಲ್ಪಟ್ಟು ಮೂರ್ಖರಾದ ನಾವು ತಿಳಿದುಕೊಳ್ಳಬೇಕಿರುವುದು .. ನಿಜವಾದ ಪನೌತಿ ಈ ದೇಶವನ್ನು ವಿನಾಶದಂಚಿಗೆ ತಳ್ಳುತ್ತಿರುವ ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳು ಎಂದು….” ಎಂದು ಬರದಿದ್ದಾರೆ.

https://www.facebook.com/story.php?story_fbid=pfbid02wPMer5tRWz5MJ7vBYCk6KpvdLpCpb1R66kM5GrT3DxE3GNNrmLkkPucjexFT8SQ3l&id=1655906036&mibextid=Nif5oz

ಈ ಕುರಿತು ಈಗಾಗಲೇ ಪರ-ವಿರೋಧ ಕಮೆಂಟುಗಳ ಸುರಿಮಳೆ ಅವರ ಪೋಸ್ಟಿನಲ್ಲಿ ಆರಂಭಗೊಂಡಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು