ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧಲೇಖಕಿ ಸುಶೀಲಾ ಸೋಮಶೇಖರ್

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 1 ನಿಮಿಷದ ಓದು

ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧಲೇಖಕಿ ಸುಶೀಲಾ ಸೋಮಶೇಖರ್

ಹಾಸನ: ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧ ಸಿರಿವಂತಿಕೆ ಹೊಂದಿರುವುದು ಹಾಗೂ ಸ್ತ್ರೀಪರವಾದ ನೂತನ ಚಿಂತನೆಗಳನ್ನು ಎತ್ತಿ ಹಿಡಿದದ್ದು ವಚನ ಸಾಹಿತ್ಯದ ಮೌಲ್ಯವೇ ಎಂದು ಲೇಖಕಿ ಸುಶೀಲಾ ಸೋಮಶೇಖರ್ ತಿಳಿಸಿದರು.

  ನಗರದ ಹಾಸನಾಂಬ ಥಿಯೋಸಾಫಿಕಲ್ ಸೊಸೈಟಿಯಲ್ಲಿ ಜಿಲ್ಲಾ ಲೇಖಕಿಯರ ಬಳಗದಿಂದ ಆಯೋಜಿಸಲಾಗಿದ್ದ ಜನವರಿ ಮಾಹೆಯ "ಸಾಹಿತ್ಯದ ನಡಿಗೆ ಸಮುದಾಯದೆಡೆಗೆ" ತಿಂಗಳ ತಿರುಳು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ನಮ್ಮ ಮುಂದೆ ಇರುವ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧ ಸಿರಿವಂತಿಕೆ ಹೊಂದಿದೆ. ವಚನಕಾರರು ಚಿತ್ತಶುದ್ದಿ ಹಾಗೂ ಸಾಮಾಜಿಕ ಶುದ್ಧಿಗಾಗಿ ನೂತನ ಚಿಂತನೆಗಳನ್ನು ರೂಡಿಗೆ ತಂದರು.

ಅಸಹಾಯಕರ ದುರ್ಬಲರ, ದುಃಖ ದರಿದ್ರರ ಅನಾಥರ ಪರಕಾಯ ಪ್ರವೇಶಿಸಿದ ಮೌಲ್ಯವನ್ನು ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ಸಾಮಾನ್ಯ ಜನ ಮಾನಸವನ್ನು ಪ್ರಫುಲ್ಲಗೊಳಿಸುವಲ್ಲಿ ಹಾಗು ಅವರ ಬದುಕನ್ನು ಹಸನಗೊಳಿಸಲು ಯತ್ನಿಸಿದ ಸಾಹಿತ್ಯ ಪ್ರಕಾರವಾಗಿದೆ. ಇಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲದೆ ಉಭಯ ಪ್ರಧಾನತೆ ಇದೆ. ಸ್ತ್ರೀಪರವಾದ ನೂತನ ಚಿಂತನೆಗಳನ್ನು ಎತ್ತಿ ಹಿಡಿದದ್ದು ವಚನ ಸಾಹಿತ್ಯದ ಮೌಲ್ಯವೇ ವಚನ ಸಾಹಿತ್ಯ ಅನುಭಾವದ ಸೆಲೆಯಾಗಿ ಅನುಭಾವ ಸಾಹಿತ್ಯ ಎಂದೇ ಕರೆಯಲ್ಪಟ್ಟಿದೆ.

ಇಲ್ಲಿ ನಡೆ ನುಡಿ ಒಂದೆಂಬ ಖಚಿತತೆಯಿದೆ. ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಸಂವಾದಗಳು, ವಚನಾನುಸಂಧಾನಗಳು ಸಕಲರಿಗೂ ಬೇಕಾಗಿರುವ ಸಂವಿಧಾನಗಳೇ ಆಗಿವೆ ಎಂದರು. ಮತಕ್ಕಿಂತ ಮತಿಗೆ ಮಾನ್ಯತೆ ನೀಡಿರುವುದು ವಚನ ಸಾಹಿತ್ಯದ ವಿಶಿಷ್ಟತೆ. ಜಾತ್ಯತೀತ ಶರಣ ಸಂಕುಲದ ಕಾಲವಾದ ೧೨ನೇ ಶತಮಾನದ ಶರಣರ ಮುಖ್ಯ ಉದ್ದೇಶ ಅಸ್ಪೃಷ್ಯತೆ ನಿವಾರಣೆ. ಆತ್ಮಾವಲೋಕನ. ಸಿದ್ಧಿಗಿಂತ ಸಾಧನೆಯ ಸಾಧ್ಯತೆಗೆ ಬೇಕಾದ ಅರಿವು ಆಚಾರಗಳಾಗಿವೆ. ಆಧ್ಯಾತ್ಮಿಕ ಆರ್ಥಿಕ ಸಾಮಾಜಿಕ ಸಮಾನತೆಯನ್ನು ತರುವುದು ಆಗಿತ್ತು ಎಂದು ಕಿವಿಮಾತು ಹೇಳಿದರು. “ಸರಳ ಜೀವನ ಉನ್ನತ ಆಲೋಚನೆಗೆ” ಆದ್ಯತೆ ಕೊಟ್ಟಿದ್ದ ಶರಣರು ಈ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಧ್ಯೇಯ ವಾಕ್ಯ ಅವರದಾಗಿತ್ತು ಎಂದು ಹೇಳಿದರು.


ಲೇಖಕಿಯರ ಬಳಗದ ಅಧ್ಯಕ್ಷರಾದ ರಾಜೇಶ್ವರಿ ಹುಲ್ಲೇನಹಳ್ಳಿ ಎಲ್ಲರ ಬರಹಗಳ ಕುರಿತು ಅನಿಸಿಕೆಗಳನ್ನು ಹೇಳುತ್ತಾ, ಇಂದಿನ ಸಾಹಿತ್ಯದ ಹಲವಾರು ಪ್ರಕಾರಗಳ ಬರಹಗಳ ಪ್ರಸ್ತುತಿಯು ಬರವಣಿಗೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿರುವುದರ ಪ್ರತೀಕವಾಗಿದ್ದು, ಇದು ಹರ್ಷದಾಯಕವೆನ್ನುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಹಿತ್ಯ ಸೃಷ್ಟಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಲಕ್ಷ್ಮೀದೇವಿ ದಾಸಪ್ಪ ಪ್ರಾರ್ಥಿಸಿದರು, ಗಿರಿಜಾ ಸ್ವಾಗತಿಸಿದರೆ, ರೇಖಾ ಪ್ರಕಾಶ್ ವಂದಿಸಿದರು, ಪ್ರಮೀಳಾ ನಿರೂಪಿಸಿದರು. ಗಿರಿಜಾಂಬ ಪ್ರಾಯೋಜಕತ್ವ ವಹಿಸಿ ಆತಿಥ್ಯ ನೀಡಿದರು.


ಇದೆ ವೇಳೆ ಬಳಗದ ಸದಸ್ಯರಾದ ರೇಖಾ ಪ್ರಕಾಶ್, ಲಕ್ಷ್ಮಿದೇವಿ ದಾಸಪ್ಪ, ಜಯಂತಿ ಚಂದ್ರಶೇಖರ್, ಪ್ರೇಮ ಪ್ರಶಾಂತ್, ಪಲ್ಲವಿ ಬೇಲೂರು, ವನಜ ಸುರೇಶ್, ಜಯ ರಮೇಶ್, ಉಷಾ, ಗಿರಿಜಾ ನಿರ್ವಾಣಿ ಪ್ರಮೀಳಾ, ಪೂರ್ಣಿಮ, ಸೇರಿದಂತೆ ಎಲ್ಲರೂ ಸಾಹಿತ್ಯದ ವಿವಿಧ ಪ್ರಕಾರಗಳ ತಮ್ಮ ಬರಹಗಳನ್ನು ಪ್ರಸ್ತುತ ಪಡಿಸಿದರು. ಬಳಗದ ಸದಸ್ಯರಾದ ಮಂಜುಳಾ ಕುಮಾರಸ್ವಾಮಿ, ಜಯಶೀಲ, ಶಾಂತ ಅತ್ನಿ, ಉಪಸ್ಥಿತರಿದ್ದರು

ವಿಷಯಗಳು: #karnataka #peepal #peepalmedia
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು