ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

63 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಆರ್.ಟಿ.ಓ. ನೂತನ ಕಛೇರಿಯನ್ನು ಲೋಕಾರ್ಪಣೆಗೊಳಿಸಿದ – ಶಾಸಕ ಹೆಚ್.ಪಿ. ಸ್ವರೂಪ್

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 2 ನಿಮಿಷದ ಓದು

63 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಆರ್.ಟಿ.ಓ. ನೂತನ ಕಛೇರಿಯನ್ನು ಲೋಕಾರ್ಪಣೆಗೊಳಿಸಿದ – ಶಾಸಕ ಹೆಚ್.ಪಿ. ಸ್ವರೂಪ್


ಹಾಸನ : ನಗರದ ಹೊರವಲಯ ಅರಸೀಕೆರೆ ರಸ್ತೆ, ಬಿ. ಕಾಟಿಹಳ್ಳಿ ಬಳಿ ಇರುವ ಸಾರಿಗೆ ಇಲಾಖೆಯ ಆವರಣದಲ್ಲಿ ಗುರುವಾರದಂದು ಸುಮಾರು 63 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಕಟ್ಟಡ ಹಾಗೂ ದುರಸ್ತಿಗೊಂಡ ಆರ್.ಟಿ.ಓ. ಕಛೇರಿಯನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಟೇಪ್ ಕತ್ತರಿಸಿ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಆರ್.ಟಿ.ಓ. ಕಛೇರಿ ದುರಸ್ತಿಯಲ್ಲಿತ್ತು. ಬಹಳ ಹಳೆಯದಾದ ಕಟ್ಟಡ. ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರನ್ನು ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮತ್ತು ಸಾರಿಗೆ ಅಧಿಕಾರಿ ರಾಜಕುಮಾರ್ ಅವರು ಸೇರಿದಂತೆ ಎಲ್ಲಾರೂ ಕೂಡ ಮನವಿ ಮಾಡಲಾಯಿತು. ನಂತರದಲ್ಲಿ 63 ಲಕ್ಷ ರೂಗಳ ಅನುಧಾನ ಬಿಡುಗಡೆ ಮಾಡಿದರು. ಆರ್ ಟಿ ಓ ಇಲಾಖೆ ದುರಸ್ತಿ ಮತ್ತು ಗುಣಮಟ್ಟದ ಹೊಸ ಕೊಠಡಿಯನ್ನು ಕೂಡ ನಿರ್ಮಿಸಿ ಉದ್ಘಾಟಿಸಲಾಗಿದೆ ಎಂದರು. ಹಾಸನ ಆರ್ ಟಿ ಓ ಇಲಾಖೆಯಲ್ಲಿ ಯಾವ ದೊಡ್ಡ ಮಟ್ಟದ ಸಮಸ್ಯೆ ಯಾವುದು ಕಾಣಿಸುತ್ತಿಲ್ಲ. ಪ್ರಾದೇಶಿಕ ಸಾರಿಗೆ ಸಂಸ್ಥೆಯು ಉತ್ತಮವಾದ ಕೆಲಸ ಮಾಡಿಕೊಂಡು ಹೋಗುತ್ತಿದೆ ಇನ್ನು ಹೊರ ಭಾಗದಲ್ಲಿ ಬೈಪಾಸ್ ರಸ್ತೆ ಮಧ್ಯೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಆರ್.ಟಿ.ಓ. ಇಲಾಖೆಯವರು ಗಮನವಹಿಸಬೇಕು ಎಂದು ಹೇಳಿದರು. ಇಲಾಖೆಯಲ್ಲಿ ಇರುವ ಹೆಚ್ಚಿನ ಕೆಲಸ ನಿರ್ವಹಿಸಲು ಇನ್ನಷ್ಟು ಹೆಚ್ಚಿನ ಕೊಠಡಿಗಳ ಅಗತ್ಯವಿದೆ ಅವುಗಳನ್ನು ಶೀಘ್ರವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊರ ಭಾಗದಲ್ಲಿ ಬೈಪಾಸ್ ರಸ್ತೆ ಮಧ್ಯೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಆರ್.ಟಿ.ಓ. ಇಲಾಖೆಯವರು ಗಮನವಹಿಸಬೇಕು ಎಂದು ಸೂಚಿಸಿದರು.


ಸಹಾಯಕ ಸಾರಿಗೆ ಅಧಿಕಾರಿ ಮತ್ತು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿ, ನಮ್ಮ ಆರ್.ಟಿ.ಓ. ಇಲಾಖೆಯಲ್ಲಿ ಸಿಬ್ಬಂದಿಗಳು ಬಹಳ ಕಡಿಮೆ ಇದ್ದು, ಐದು ಜನ ಇದ್ದ ಇನ್ಸ್ ಪೆಕ್ಟರ್ ಈಗ ನಾಲ್ಕು ಜನರು ಮಾತ್ರ ಇದ್ದಾರೆ. ಬೇರೆ ಕಡೆಯಿಂದ ಒಟ್ಟು 15 ಇಲಾಖೆ ಜೀಪುಗಳು ಬಂದು ವಾಹನ ತಪಾಸಣೆಯಲ್ಲಿ ಮೂರು ದಿವಸದಲ್ಲೆ 400 ಕೇಸು ದಾಖಲಿಸಲಾಗಿದೆ. ತಪಾಸಣೆ ವೇಳೆ ಲೋಕಲ್ ನಲ್ಲಿ ಅನೇಕರು ಗಲಾಟಿ ಮಾಡಿದರೂ ವಿಧಿಯಿಲ್ಲದೇ ಕೇಸು ದಾಖಲಿಸಬೇಕಾಯಿತು. ಬೇರೆ ರಾಜ್ಯಗಳಿಂದ ವಾಹನ ಬಂದಾಗ ಒಂದೊಂದು ವಾಹನಕ್ಕೆ 1 ಲಕ್ಷದಿಂದ ನಾಲ್ಕು ಲಕ್ಷದವರೆಗೂ ಟ್ಯಾಕ್ಸ್ ಕಟ್ಟುತ್ತಾರೆ. ವಾಹನ ಚಾಲಕರು ಸರಿಯಾದ ಸಮಯಕ್ಕೆ ಎಫ್.ಸಿ. ಮಾಡಿಸಿ ಟ್ಯಾಕ್ಸ್ ಕಟ್ಟಬೇಕು. ಇನ್ನು ಸರಿಯಾಗಿ ವಾಯುಮಾಲಿನ್ಯ ತಡೆಗಟ್ಟುವ ವಾಹನವನ್ನು ಬಳಸಿ ಎಂದು ವಾಹನ ಮಾಲಿಕರಲ್ಲಿ ಮನವಿ ಮಾಡುತ್ತೇವೆ ಎಂದರು. ಕಾನೂನು ಉಲ್ಲಂಘನೆ ಮಾಡದೇ ವಾಹನ ಚಲಾಯಿಸಿ ಏನಾದರೂ ಕಾನೂನು ಉಲ್ಲಂಘನೆ ಮಾಡಿದರೇ ಯಾವ ಮುಲಾಜು ಇಲ್ಲದೇ ದಂಢ ಹಾಕುತ್ತೇವೆ ಎಂದು ಎಚ್ಚರಿಸಿದರು. ಒಂದೆ ವಾಹನದ ನಂಬರನ್ನು ಊದಾರು ವಾಹನಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದರೇ ಅಂತಹ ವಾಹನ ಕಂಡರೇ ನಮಗೆ ತಿಳಿಸಿ ಎಂದು ಕೋರಿದರು. ಶಾಲಾ ವಾಹನದ ಬಗ್ಗೆಯೂ ಗಮನಹರಿಸಲಾಗಿದ್ದು, ಮಕ್ಕಳ ಹಿತಾ ದೃಷ್ಠಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.


ಆರ್.ಟಿ.ಓ. ಇಲಾಖೆ ಅಧಿಕಾರಿ ರಾಜಕುಮಾರ್ ಮಾತನಾಡಿ, ವಾಯುಮಾಲಿನ್ಯ ಹೆಚ್ಚಿಸುವ ವಾಹನ ಸೇರಿದಂತೆ ಇತರೆ ಉಲ್ಲಂಘನೆಯ ಸುಮಾರು 400 ವಾಹನಗಳಿಗೆ ಕೇಸು ದಾಖಲಿಸಲಾಗಿದೆ. ಮೂರು ದಿನದಲ್ಲೆ 20 ಲಕ್ಷ ರೂ ದಂಢ ವಿಧಿಸಲಾಗಿದೆ. ಹೆಚ್ಚು ಹೊಗೆ ಬರುವ ವಾಹನಗಳ ಬಗ್ಗೆ ಗಮನಹರಿಸಿ ಅಂತವರಿಗೆ ದಂಢ ವಿಧಿಸುವ ಪ್ರಕ್ರಿಯೆ ಹೆಚ್ಚು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಟಿ.ಓ. ಇಲಾಖೆಯ ನೂತನ ವಾಹನದ ಕೀಯನ್ನು ಶಾಸಕರಾದ ಹೆಚ್.ಪಿ. ಸ್ವರೂಪ್ ಹಸ್ತಂತರಿಸಿದರು. ಇದೆ ವೇಳೆ ಆರ್.ಟಿ.ಓ. ಇಲಾಖೆ ಸಾರಿಗೆ ಅಧಿಕಾರಿ ರಾಜಕುಮಾರ್, ಯಶವಂತ್, ಕಾರ್ಯಪಾಲಕ ಅಭಿಯಾಂತರ ಅಣ್ಣಪ್ಪ, ನವ್ಯಶ್ರೀ ಇತರರು ಉಪಸ್ಥಿತರಿದ್ದರು.

ವಿಷಯಗಳು: #news #peepalmedia
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು