ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

MLC ಶಿವಕುಮಾರ್ ಕೇವಲ ಬೈಲೈನ್ ಗೆ ಫಿಕ್ಸ್ ಆದ ಪತ್ರಕರ್ತರಲ್ಲ: ಕೆ.ವಿ.ಪ್ರಭಾಕರ್

PPeepal Media

Peepal Media ರಾಜ್ಯ

• 2 ನಿಮಿಷದ ಓದು

MLC ಶಿವಕುಮಾರ್ ಕೇವಲ ಬೈಲೈನ್ ಗೆ ಫಿಕ್ಸ್ ಆದ ಪತ್ರಕರ್ತರಲ್ಲ: ಕೆ.ವಿ.ಪ್ರಭಾಕರ್

ಬೆಂಗಳೂರು ಸೆ 18: ಡಾ.ಶಿವಕುಮಾರ್ ಕೇವಲ ಬೈ ಲೈನ್ ಗಳಿಗಾಗಿ ಸ್ಟೋರಿಗಳನ್ನು ಬರೆಯುವ ಪತ್ರಕರ್ತ ಅಲ್ಲ, ಬದಲಿಗೆ ಪತ್ರಕರ್ತನ‌ ಆಚೆಗೆ ಯೋಚಿಸುವ ಮತ್ತು ಕ್ರಿಯಾಶೀಲವಾಗಿರುವ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮೆಚ್ಚುಗೆ ಸೂಚಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ನೂತನ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನು ಆಡಿದರು.

ನಾನು ಕೇವಲ ಬೈ ಲೈನ್ ಗಳಿಂದ ಪತ್ರಕರ್ತರ ವ್ಯಕ್ತಿತ್ವವನ್ನು ಅಳೆಯುವುದಿಲ್ಲ. ಬಹಳ ಸಾರಿ ತಮ್ಮ ಅಂತರಂಗಕ್ಕೆ ಒಪ್ಪಿಗೆ ಇಲ್ಲದ್ದನ್ನೂ ಒಳ್ಳೆ ಬೈ ಲೈನ್ ಸ್ಟೋರಿ ಬರೆಯುವವರು ಇದ್ದಾರೆ. ಆದರೆ, ಶಿವಕುಮಾರ್ ಹಾಗಲ್ಲ. ಇವರ ಬೈ ಲೈನ್ ಮತ್ತು ಬ್ರೈನ್ ಲೈನ್ ಹಾಗೂ ಬದುಕಿನ ಬದ್ಧತೆ ಒಂದೇ ಆಗಿದೆ.

ತಮ್ಮ ಜಾತಿ ಯಾವುದೆಂದು ಗೊತ್ತಿಲ್ಲದ, ತಮ್ಮ ತಂದೆ ತಾಯಿ ಕೂಡ ಯಾರು ಎಂದು ಗೊತ್ತಿಲ್ಲದ ಇಬ್ಬರು ಹೆಣ್ಣು ಮಕ್ಕಳ ಕುರಿತಾಗಿ ಶಿವಕುಮಾರ್ ಅವರು “Indians are orphans” (ಭಾರತೀಯರು ಅನಾಥರು) ಎನ್ನುವ ಒಂದು ಸ್ಟೋರಿ ಬರೆದಿದ್ದರು.

ಒಡನಾಡಿ ಸಂಸ್ಥೆಯಲ್ಲಿ ಬೆಳೆದ ಇಬ್ಬರು ಅನಾಥ ಹೆಣ್ಣು ಮಕ್ಕಳು ಕಾಲೇಜಿಗೆ ಸೇರುವಾಗ ತಮ್ಮ ಧರ್ಮ ಮತ್ತು ಜಾತಿಯ ಕಾಲಂನಲ್ಲಿ “ಭಾರತೀಯರು” ಎಂದು ಬರೆಸಿದ್ದರು. ಹೀಗಾಗಿ ಇವರು ಮುಂದೆ ಓದಿ ಕೆಲಸಕ್ಕೆ ಸೇರುವಾಗ ಮೀಸಲಾತಿಯಿಂದ ವಂಚಿತರಾದರು. ಆಗ ಶಿವಕುಮಾರ್ ಅವರು ಈ ಸ್ಟೋರಿ ಬರೆದದ್ದು ಮಾತ್ರವಲ್ಲ, ಬರೆದ ಬಳಿಕ‌ ಆ ಇಬ್ಬರೂ ಹೆಣ್ಣು ಮಕ್ಕಳಿಗೆ ಅವರ ಪಾಲಿನ ಅವಕಾಶ ಒದಗಿ ಬರುವಂತೆ ಕೆಲಸ ಮಾಡಿದರು.

ಶಿವಕುಮಾರ್ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದು ಅತ್ಯಂತ ಉತ್ತಮ ಅವಧಿ ಎನ್ನುವುದನ್ನು ನಾನು ಕೇಳಿದ್ದೇನೆ.

ದೃಶ್ಯ ಮಾಧ್ಯಮದ ಆ್ಯಂಕರ್ ಗಳು, ರಿಪೋರ್ಟರ್ ಗಳು ಬಳಸುವ ಭಾಷೆ ಹೇಗಿರಬೇಕು, ದೃಶ್ಯ ಮಾಧ್ಯಮದವರಿಗೆ ಇರಬೇಕಾದ ವೃತ್ತಿಪರ ಸಭ್ಯತೆ ಬಗ್ಗೆಯೇ ಒಂದು ಕಾರ್ಯಾಗಾರ ನಡೆಸಿದ್ದರು. ಇದು ಬಹಳ ಮುಖ್ಯವಾದ ಸಂಗತಿ.

ಹಾಗೆಯೇ ಪತ್ರಕರ್ತರಿಗೆ ಕನ್ನಡ ಭಾಷೆ ಮತ್ತು ಭಾಷೆ ಬಳಸುವ ಬಗ್ಗೆಯೇ ಒಂದು ಕಾರ್ಯಾಗಾರ ನಡೆಸಿದ್ದರು.

ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಮೈಸೂರಿನಲ್ಲಿ ಕೋಮುಗಲಭೆ ನಡೆಯಿತು. ಆಗ ಪತ್ರಕರ್ತರಿಗೆ ಪಿ.ಲಂಕೇಶ್ ಅವರ ಸಂಕ್ರಾಂತಿ ನಾಟಕ ಆಡಿಸಿದರು.

ಹೀಗೆ ಪತ್ರಕರ್ತರಾಗಿದ್ದೂ ಶಿವಕುಮಾರ್ ಕೇವಲ‌ ಪತ್ರಕರ್ತ ಮಾತ್ರ ಆಗಿರಲಿಲ್ಲ ಎನ್ನುವುದಕ್ಕೆ ನೂರಾರು ಉದಾಹರಣೆ ಕೊಡಬಹುದು‌.

ಮಾಧ್ಯಮ ಅಕಾಡೆಮಿ‌ ಸದಸ್ಯರಾಗಿದ್ದಾಗ ದಲಿತ ವಿದ್ಯಾರ್ಥಿಗಳಿಗೆ ಫೆಲೋಶಿಪ್, ಇಂರ್ಟನ್ ಶಿಪ್ ಕೊಡುವ ನಿಯಮ ಮಾಡಿಸಿದರು. ಇದರಿಂದ ಹತ್ತಾರು ಮಂದಿ ಶೋಷಿತ ಸಮುದಾಯದ ಮಕ್ಕಳು ಪತ್ರಿಕೋದ್ಯಮಕ್ಕೆ ಎಂಟ್ರಿ ಆಗಲು ಅವಕಾಶ ಆಯಿತು.

ಹೀಗೆ ಜಾತಿ, ಲಿಂಗ, ಧಾರ್ಮಿಕ‌ ಶೋಷಿತರ ಪರವಾಗಿ ಪತ್ರಕರ್ತರಾಗಿ ಬರೆದದ್ದು ಮಾತ್ರವಲ್ಲ, ಆ ಬಗ್ಗೆ ಕೆಲಸವನ್ನೂ ಮಾಡಿದ್ದಾರೆ.

ಇಷ್ಟೆಲ್ಲಾ ಒಳನೋಟ ಇದ್ದ ಡಾ.ಶಿವಕುಮಾರ್ ಅವರಿಗೆ ರಾಜಕೀಯ ವರದಿಗಾರರಾಗಿ ಸಹಜವಾಗಿ ರಾಜಕೀಯ ನಾಯಕರ ಒಡನಾಟವೂ ಒದಗಿ ಬಂದಿತ್ತು. ಒಂದು ಪಕ್ಷದ ಪರವಾಗಿ ಅಂಟಿಕೊಳ್ಳದ ಶಿವಕುಮಾರ್ ಅವರಿಗೆ ಎಲ್ಲಾ ಪಕ್ಷದಲ್ಲೂ ಆತ್ಮೀಯರಾದ ನಾಯಕರಿದ್ದಾರೆ. ಆದರೆ, ಶಿವಕುಮಾರ್ ಅವರು ವೈಯುಕ್ತಿಕವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದಾಮಯ್ಯ ಅವರ ಸಾಮಾಜಿಕ ನ್ಯಾಯ ಪರವಾದ ಕಾಳಜಿಗಳ ಜೊತೆಗೇ ಇದ್ದಾರೆ ಎನ್ನುವುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು ಶಿವಕುಮಾರ್ ಅವರನ್ನು ಪರಿಷತ್ತಿಗೆ ನೇಮಕ ಮಾಡುವಾಗ ಸುಮ್ಮನೆ ಮಾಡಿರುವುದಿಲ್ಲ. ಸಮಗ್ರವಾಗಿ ಯೋಚಿಸಿಯೇ ಮಾಡಿದ್ದಾರೆ ಎಂದು ಭಾವಿಸುತ್ತೇನೆ.

ಹೀಗಾಗಿ, ಡಾ.ಶಿವಕುಮಾರ್ ಅವರು ಈಗ ವಿಧಾನ ಪರಿಷತ್ ಸದಸ್ಯರಾಗಿರುವುದು ಹೊರಗಿನವರಿಗೆ ಆಶ್ಚರ್ಯದ ಸಂಗತಿ ಆಗಿರಬಹುದು. ಆದರೆ, ನನಗೇನೂ ಆಶ್ಚರ್ಯದ ಸಂಗತಿಯಲ್ಲ. ಏಕೆಂದರೆ ಡಾ.ಶಿವಕುಮಾರ್ ಅವರ ಶಕ್ತಿ, ಸಾಮರ್ಥ್ಯ, ಬದ್ಧತೆಯನ್ನು ನಾನು ಕಳೆದ ಹತ್ತು ವರ್ಷಗಳಿಂದ ಹೆಚ್ಚು ಆತ್ಮೀಯವಾಗಿ ಗಮನಿಸಿದ್ದೀನಿ.

ಬಡತನಕ್ಕೆ ಲಿಂಗ-ಜಾತಿ-ಧರ್ಮದ ಹಂಗಿಲ್ಲ ಎನ್ನುವುದನ್ನು ಹೇಳಿಕೊಂಡು ಪಾಲಿಸಿಕೊಂಡು ಬರುತ್ತಿರುವ ಡಾ.ಶಿವಕುಮಾರ್ ಅವರ political activist ಪಯಣ 20 ವರ್ಷಗಳ ಹಿಂದೆಯೇ ಶುರುವಾಗಿ ಈಗ MLC ಆಗುವ ಇವರ ಜವಾಬ್ದಾರಿ ಹೆಚ್ಚಿದೆ. ಈ ಮೂಲಕ
ಪತ್ರಕರ್ತ ಸಮುದಾಯದ ಸಂಕಷ್ಟಗಳಿಗೆ ಧ್ವನಿ ಆಗ್ತಾರೆ, ನಮ್ಮ ಜೊತೆ ಒಡಗೂಡಿ ಕೆಲಸ ಮಾಡುತ್ತಾರೆ ಎನ್ನುವ ಆಶಯ ಮತ್ತು ಭರವಸೆ ನನಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು