ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮಾನವೀಯ ಅಂತಃಕರಣದ ಪ್ರತೀಕವಾಗಿದ್ದರು ಡಾ.ಎಂ.ಎಂ. ಕಲಬುರ್ಗಿ: ನಾಡೋಜ ಗೊ. ರು. ಚನ್ನಬಸಪ್ಪ

PPeepal Media

Peepal Media ರಾಜ್ಯ

• 2 ನಿಮಿಷದ ಓದು

ಮಾನವೀಯ ಅಂತಃಕರಣದ ಪ್ರತೀಕವಾಗಿದ್ದರು ಡಾ.ಎಂ.ಎಂ. ಕಲಬುರ್ಗಿ: ನಾಡೋಜ ಗೊ. ರು. ಚನ್ನಬಸಪ್ಪ

ಧಾರವಾಡ (ಕರ್ನಾಟಕ ವಾರ್ತೆ) ನವೆಂಬರ್ 28: ಕಲಬುರ್ಗಿ ಅವರ ಶ್ರೇಷ್ಠತೆ ಇರುವುದು ಕೇವಲ ಅವರು ಹಿರಿಯ ಸಂಶೋಧಕರು ಆಗಿದ್ದರು ಎಂಬುವುದಕ್ಕಲ್ಲ; ಅವರು ಸೃಜನಶೀಲ ಬರಹಗಾರರಾಗಿದ್ದರು ಎಂಬ ಕಾರಣಕ್ಕೂ ಅಲ್ಲ; ಅದಕ್ಕಿಂತ ಅವರಲ್ಲಿದ್ದ ಮಾನವೀಯ ಅಂಥಃಕರಣ ಎಂಬುದು ಅವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ನಾವು ಮಾಡುವಂತಹ ಕೆಲಸದಲ್ಲಿನಿಷ್ಠೆ ಇಲ್ಲದಿದ್ದರೆ ನಮ್ಮ ಬದುಕು ಶೃತಿ ಕೆಟ್ಟ ಸಂಗೀತವಾಗುತ್ತದೆ ಎಂದು ಹೇಳುತ್ತಿದ್ದರು. ಸಂಗೀತ ಮತ್ತು ಅಧ್ಯಯನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಬರದಂತೆ ಎಚ್ಚರ ವಹಿಸಿದ ವ್ಯಕ್ತಿ ನಮ್ಮ ಕಲಬುರ್ಗಿಯವರು ಎಂದು ನಾಡೋಜ ಗೊ.ರು.ಚನ್ನಬಸಪ್ಪ ಅವರು ಹೇಳಿದರು.

ಅವರು ಇಂದು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಟಾನ ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕತಿಕ ಭವನದಲ್ಲಿ ಆಯೋಜಿಸಲಾದ ಡಾ.ಎಂ.ಎಂ.ಕಲಬುರ್ಗಿ ಅವರ 86 ನೇ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಡಾ.ಎಂ.ಎಂ.ಕಲಬುರ್ಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಕಲಬುರ್ಗಿ ಅವರು ಯಾವುದೇ ಕೊರತೆ, ಹಸಿವು, ನಿದ್ದೆಗಳ ಹಂಗಿಲ್ಲದೆ ಕೆಲಸ ಮಾಡುವ ವ್ಯಕ್ತಿ ಆಗಿದ್ದರು. ಸಾಮಾನ್ಯವಾಗಿ ನಾವು ಸಮಗ್ರ ಎಂಬ ಪದವನ್ನು ಬಳಸುತ್ತೇವೆ. ಸಮಗ್ರ ಅಂದರೆ ಪೂರ್ಣವಾಗಿದ್ದು, ಒಟ್ಟಾಗಿರುವುದು ಎಂಬ ಅರ್ಥ ಇದೆ. ಲೋಕವ್ಯವಹಾರದಲ್ಲಿ ಸಮಗ್ರ ನೋಟ, ಸಮಗ್ರ ವರದಿ, ಸಮಗ್ರ ವ್ಯಕ್ತಿತ್ವ ಎಂಬ ಇಂತಹ ಪದಗಳನ್ನು ಬಳಸುತ್ತೇವೆ. ವ್ಯಕ್ತಿಗತವಾಗಿ ಅನ್ವಯಿಸುವುದಾದರೆ ಅದು ನಮ್ಮ ನೆಚ್ಚಿನ ಸಾಹಿತಿಗಳಾದ ಡಾ.ಎಂ.ಎಂ ಕಲಬುರ್ಗಿ ಅವರಿಗೆ ಅನ್ವಯಿಸುತ್ತದೆ ಎಂದರು.

ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು ಕಲಬುರ್ಗಿ ಅವರ ಸಮಗ್ರ ಲೇಖನಗಳು ಪ್ರಕಟವಾಗಬೇಕು. ಸರಕಾರ ಕಲಬುರ್ಗಿ ಟ್ರಸ್ಟ್ ಸ್ಥಾಪಿಸಿದೆ, ಅವರ ಮನಸ್ಸಿನಲ್ಲಿ ಏನು ಇತ್ತೋ ಅದೆಲ್ಲಾ ಇಂದು ನೆರವೇರುತ್ತಿದೆ. ಕಲಬುರ್ಗಿ ಅವರು ತಮ್ಮ ಸಾಧನೆ, ಅವರು ನಡೆದು ಬಂದ ಬದುಕು, ಇದಾವುದರ ಬಗ್ಗೆಯೂ ಸಹ ಬರೆಯಲಿಲ್ಲ.

ಅವರು ಸಂಶೋಧನೆ ಸ್ತರಗಳ ಬಗ್ಗೆ ಬರೆದರು. ಮುಂದೆ ಬರುವಂತಹ ವಿದ್ಯಾರ್ಥಿಲೋಕಕ್ಕೆ ತಿಳುವಳಿಕೆ ಉಂಟಾಗಬೇಕು. ಸಂಶೋಧನೆ ಅಂದರೆ ಏನು?, ಸಂಶೋಧನೆಯ ಬಗ್ಗೆ ಯಾಕೆ ಆಸಕ್ತಿಯನ್ನು ಹೊಂದಬೇಕು, ಸಂಶೋಧನೆಯ ಸ್ವರೂಪ ಯಾವುದು ಎಂಬುದನ್ನು ತಿಳಿಸಿಕೊಡುವುದು ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದರು.

ಡಾ.ಎಂ.ಎಂ.ಕಲಬುರ್ಗಿ ವಚನ ಸಂಗೀತ ಪ್ರಶಸ್ತಿ ಪುರಸ್ಕೃತ ಡಾ. ಶರಣಬಸಪ್ಪ ಮೇಡೆದಾರ ಅವರು ಮಾತನಾಡಿ, ಡಾ.ಎಂ.ಎಂ.ಕಲಬುರ್ಗಿ ಹೆಸರಿನ ಪ್ರಶಸ್ತಿ ಪಡೆದಿರುವುದಾಗಿ ತುಂಬಾ ಸಂತಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಶರಣರ ವಚನಗಳು ಮತ್ತು ಸಾಹಿತ್ಯವನ್ನು ಉತ್ತಮವಾಗಿ ನಿಮ್ಮ ಮುಂದೆ ಹಾಡುತ್ತೇನೆ. ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಸ್ವತಃ ನಾನೇ ಬರೆದು ಕಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿμÁ್ಠನ ಅಧ್ಯಕ್ಷ ವೀರಣ್ಣ ರಾಜೂರ, ಉಮಾದೇವಿ ಎಂ. ಕಲಬುರ್ಗಿ ಉಪಸ್ಥಿತರಿದ್ದರು.

ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿμÁ್ಠನದ ಸದಸ್ಯ ಶಶಿಧರ ತೊಡಕರ ಅವರು ಅತಿಥಿ ಪರಿಚಯ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಡಾ.ಈರಣ್ಣ ಇಂಜಗನೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿμÁ್ಠನ ಸದಸ್ಯ ಡಾ. ಬಾಳಣ್ಣ ಶೀಗಿಹಳ್ಳಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರು, ಗಣ್ಯವ್ಯಕ್ತಿಗಳು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು