ಸ್ಯಾಂಡಲ್‌ವುಡ್‌ನ ಕಾಸ್ಟ್ಯೂಮ್ ಡಿಸೈನರ್, ಹಾಸ್ಯ ನಟ ಗಂಡಸಿ ನಾಗಾರಾಜ್ ನಿಧನ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಮತ್ತು ಹಾಸ್ಯ ನಟ ಗಂಡಸಿ ನಾಗಾರಾಜ್ ಇಂದು ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಅವರು ಸೋಮವಾರದಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಕನ್ನಡದ ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟ ನಾಗಾರಾಜ್ ಅನಾರೋಗ್ಯದ ಕಾರಣ ತನ್ನ 65ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
K3 ಸಿನೆಮಾದಲ್ಲಿ ಇವರ ನಟಿಸಿರುವ ಕೊನೆಯ ಚಿತ್ರವಾಗಿದ್ದು, ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ರಾಜಾಹುಲಿ, ರಾಯರ ಮಗ, ಗುಂಡನ ಮನೆ, ಹಬ್ಬ, ಮಾತಾಡ್ ಮಾತಾಡು ಮಲ್ಲಿಗೆ, ಪರ್ವ, ಕೋಟಿಗೊಬ್ಬ-3 ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ನಟನೆಯಲ್ಲಿ ಖ್ಯಾತ ಗಳಿಸಿದ್ದರು.
ವಸ್ತ್ರಾಲಂಕಾರ ಮಾಡುವುದರಲ್ಲಿಯೂ ಹೆಚ್ಚು ಹೆಸರು ಮಾಡಿರುವ ಗಂಡಸಿ ಅವರು ನಾಗರಾಜ್ ಇಂದು ಅಗಲಿದ್ದಾರೆ.
ವಿಷಯಗಳು:
#bengalure
#cinema
#gandasi nagaraj
#india
#kannada
#karnataka
#news
#peepal
#peepalmedia
#sandalwood
P
Peepal Media Desk
Peepal Media · ರಾಜ್ಯ ವಿಭಾಗ
ಹಿಂದಿನ ಸುದ್ದಿ