ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸಮಗ್ರ ಸಂಸ್ಕೃತಿ ವಿಕಾಸದ ಶೋಧನೆ ಅತ್ಯಗತ್ಯ:ಸಂಸ್ಕೃತಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್

MMurali Maluru

Murali Maluru • ರಾಜ್ಯ

• 2 ನಿಮಿಷದ ಓದು

ಸಮಗ್ರ ಸಂಸ್ಕೃತಿ ವಿಕಾಸದ ಶೋಧನೆ ಅತ್ಯಗತ್ಯ:ಸಂಸ್ಕೃತಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಮಾ,10 : ಹೊಸ ತಲೆಮಾರಿನ ಸಂಶೋಧಕರು ಯಾವುದೇ ವಸ್ತು-ವಿಷಯವನ್ನು ಬಿಡಿ ಘಟಕವಾಗಿ ನೋಡದೆ ಒಟ್ಟಾರೆ ಸಾಂಸ್ಕೃತಿಕ ಪ್ರಕ್ರಿಯೆಯ ವಿಕಾಸದ ಭಾಗವಾಗಿ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಬಂಜಗೆರೆ ಜಯಪ್ರಕಾಶ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ “ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು” ಕುರಿತು ಅಂತರ್ಜಾಲದ ಜೂಮ್ ವೇದಿಕೆಯ ಮೂಲಕ ಆಯೋಜಿಸಲಾಗಿದ್ದ 5 ದಿನಗಳ ರಾಷ್ಟ್ರಮಟ್ಟದ ‘ಸಂಶೋಧನ ಕಾರ್ಯಾಗಾರ’ದಲ್ಲಿ ಸಮಾರೋಪ ಭಾಷಣ ಮಾಡಿದರು.

ಸಂಶೋಧನೆ ಎಂಬುದೇ ಯಾವಾಗಲೂ ಹೊಸ ಸಾಧ್ಯತೆಯಾಗಿರುತ್ತದೆ. ಅದು ನಿರಂತರ ಕ್ರಿಯೆಯೂ ಹೌದು ಹಾಗೂ ಹೊಸದರ ಶೋಧನೆಯೂ ಹೌದು. ಜ್ಞಾನದ ವಿಕಾಸವಾದಂತೆಲ್ಲ ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಅದನ್ನು ಮತ್ತಷ್ಟು ನಿಖರವಾಗಿ ಕಂಡುಕೊಳ್ಳುವುದಕ್ಕೆ ಇರುವಂಥ ಇಂದು ವಿಧಾನವೇ ಸಂಶೋಧನೆ. ತಲೆಮಾರಿನಿಂದ ತಲೆಮಾರಿಗೆ ಹಾಗೂ ಕಾಲದಿಂದ ಕಾಲಕ್ಕೆ ಸಂಶೋಧನೆ ಮಾಡುತ್ತಾ ಹೋದಂತೆ ಅದು ವಿಸ್ತರಿಸುತ್ತಾ ಹೋಗುತ್ತದೆ, ಆದ್ದರಿಂದ ಗೊತ್ತಿರುವ ವಿಷಯಗಳನ್ನು ಬಹುಶಿಸ್ತೀಯ ನೋಟದ ಮೂಲಕ ಒಂದು ವಿಶ್ಲೇಷಣಾ ಕ್ರಮದಲ್ಲಿ ಹೊಸ ಹೊಳಹು ಮತ್ತು ಹೊಸ ತಿಳುವಳಿಕೆಗಳಿಗೆ ತೆರೆದಿಡುವ ಕ್ರಮವನ್ನು ಸಂಶೋಧನಾರ್ಥಿಗಳು ಅರಿಯಬೇಕಾಗಿದೆ ಎಂದು ತಿಳಿಸಿದರು.

ಜರ್ಮನಿಮೂಲದ ಸಂಶೋಧಕರಾದ ಗುನ್ತೆ ಡಿ ಸುನ್ತೇಮರ್ ಅವರು ಮಹಾರಾಷ್ಟ್ರದ ಆದಿಮ ದೇವತೆಗಳನ್ನು ಕುರಿತು ನಡೆಸಿರುವ ಸಂಶೋಧನೆ ಹಾಗೂ ಕರ್ನಾಟಕ ಸಂಸ್ಕೃತಿ ಕುರಿತು ಶಂ.ಬಾ.ಜೋಶಿ ಅವರು ನಡೆಸಿರುವ ಸಂಶೋಧನೆಗಳಲ್ಲಿ ಹಲವಾರು ಸಾಮ್ಯತೆಗಳಿವೆ. ಪಶುಪಾಲಕ ಸಮಾಜ ಹಾಗೂ ಬೇಟೆಗಾರ ಸಮಾಜಗಳು ಆದಿಮವಾಗಿ ರೂಪುಗೊಂಡಿದ್ದು ಇವುಗಳ ಚಲನೆಯನ್ನು ಕುರಿತಾದ ಇವರಿಬ್ಬರ ಸಂಶೋಧನೆಗಳು ಬಹಳ ವಿಶಿಷ್ಠವಾಗಿವೆ. ಗ್ರಂಥಸ್ಥ ಹಾಗೂ ಶಾಸನೋಕ್ತ ಮಾಹಿತಿಗಳನ್ನು ಮಾತ್ರ ಆಧರಿಸದೆ ಜಾನಪದ‌ ಮೊದಲಾದ ಬಹು ಮೂಲಗಳಿಂದ ಸಂಶೋಧನೆ ನಡೆಸಿದ್ದಾರೆ. ಕರ್ನಾಟಕವು ಮಹಾರಾಷ್ಟ್ರದಷ್ಟೇ ಮತ್ತು ಅದಕ್ಕಿಂತ ಪ್ರಾಚೀನವಾದ ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ನಾವು ಈ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಂಡು ಬಹುನೆಲೆಯ ಆಕರಗಳನ್ನು ತೌಲನಿಕವಾಗಿ ಪರಿಶೀಲಿಸಿ ಹೊಸಹೊಳಹುಗಳನ್ನು ಕಂಡುಕೊಳ್ಳಬಹುದು ಎಂದು ವಿವರಿಸಿದರು.

ಈಗಾಗಲೇ ನಡೆದಿರುವ ಸಂಶೋಧನೆಗಳ ಮೇಲೆ ಮರುಶೋಧನೆ ಕೈಗೊಳ್ಳಬಹುದು. ಹಿಂದಿನವರು ನೀಡಿರುವ ಅಪಾರವಾದ ಮಾಹಿತಿಗಳ ಧ್ವನಿಯನ್ನು ಅರಿತು ಒಪ್ಪಿತ ಸತ್ಯಗಳ ಮೇಲೆ ಪುನರಪಿ ಅಧ್ಯಯನ ಮಾಡಲು ಸಾಕಷ್ಟು ಅವಕಾಶಗಳಿವೆ. ಯಾಕೆಂದರೆ ಸಂಶೋಧನೆ ಪೂರ್ಣಸತ್ಯ, ಪೂರ್ಣವಾಸ್ತವ ಲೆಕ್ಕವಲ್ಲ. ಅಧ್ಯಯನದಲ್ಲಿ ಮುಂದುವರೆಯಲಿಕ್ಕೆ ಬೇರೆ ಬೇರೆ ಎಳೆಗಳನ್ನು ಹಿಡಿದು ನೋಡ್ತಾ ಹೋಗುವುದು ಬಹಳ ಮುಖ್ಯ. ಬಹುಶಿಸ್ತೀಯ ಮಾದರಿಗಳಲ್ಲಿ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತಿತರ ಶಾಸ್ತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದರೆ ನಮ್ಮ ಸಾಂಸ್ಕೃತಿಕ ನೆಲೆ-ಬೆಲೆಗಳನ್ನು ಹೊಸರೂಪದಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಪ್ರಾಧ್ಯಾಪಕರೂ ಆದ ಪ್ರೊ.ಎನ್.ಕೆ.ಲೋಲಾಕ್ಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರಚಲಿತ ಕಾಲಘಟ್ಟದಲ್ಲಿ ಸತ್ಯಶೋಧನೆಯೇ ಸಂಶೋಧನೆ ಎಂದು ಹೊರಡುವುದೇ ಸಮಸ್ಯೆಯಾಗಿ ಕಾಣುತ್ತದೆ. ಯಾಕೆಂದರೆ ಒಂದೇ ಸತ್ಯವಿಲ್ಲ; ಹಲವು ಸತ್ಯಗಳಿವೆ. ಒಂದೇ ಸುಳ್ಳು ಇಲ್ಲ; ಹಲವು ಸುಳ್ಳುಗಳಿವೆ. ಕಾಲದಿಂದ ಕಾಲಕ್ಕೆ ಸತ್ಯ, ಸುಳ್ಳುಗಳು ಬದಲಾಗ್ತಾ ಹೋಗಿವೆ. ನಮ್ಮ ಸಾಹಿತ್ಯವು ಕಲ್ಪನಾತ್ಮಕವಲ್ಲದ ಜ್ಞಾನವೂ ವಿಜ್ಞಾನವೂ ಆಗಿದೆ. ಇದನ್ನು ನಮ್ಮ ಸಮಾಜಕ್ಕೆ ವಿಸ್ತರಿಸಬೇಕಾಗಿದೆ. ನಮ್ಮ ಪರಿಸ್ಥಿತಿ ಹಾಗೂ ಮನಸ್ಥಿತಿಗೆ ಅನುಗುಣವಾಗಿ ಸಂಶೋಧನೆ ನಡೆಯುತ್ತವೆ. ಹೊಸಚಿಂತನೆಗಳು ಸತ್ಯ ಪ್ರತಿಪಾದನೆಯಲ್ಲದೇ ನೈತಿಕವೂ ಕಾನೂನಾತ್ಮಕವೂ ಆದ ವ್ಯಾಖ್ಯಾನದಿಂದ ಕೂಡಿರಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಸೈಯದ್ ಮುಯಿನ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಾಗಾರದ ಸಂಯೋಜಕರಾದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಭೈರಪ್ಪ ಅವರು ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್., ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ರವಿಶಂಕರ್ ಎ.ಕೆ., ಡಾ.ಪ್ರೇಮಕುಮಾರ್ ಕೆ., ಡಾ.ಕಿರಣಕುಮಾರ್ ಹೆಚ್.ಜಿ. ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತ ಸುಮಾರು 300 ಜನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

MMurali Maluru

Murali Maluru

Peepal Media · ರಾಜ್ಯ ವಿಭಾಗ

Murali MV is a Reporter at Peepal Media. An avid reader, he reports on Sports and Political issues.

ಸಂಬಂಧಿತ ಸುದ್ದಿಗಳು