Friday, June 14, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ದಕ್ಕೆ ತರುವುದಿಲ್ಲ: ಕಾಂಗ್ರೆಸ್‌

ಬೆಂಗಳೂರು: ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿಯ ಜೊತೆಗೆ 2.5 ಲಕ್ಷ ರೂಪಾಯಿ ನಗದು ಕೊಡುಗೆಯಾಗಿ ನೀಡಿರುವ ಸುದ್ದಿ ಎಲ್ಲಡೆ ವರದಿಯಾಗಿದ್ದು, ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಪತ್ರಕರ್ತರಿಗೆ ಲಂಚ ನೀಡಿದ್ದೇಕೆ? ಎಂದು ಪ್ರಶ್ನಿಸಿದೆ.

ಮಾಧ್ಯಮಗಳ ಪತ್ರಕರ್ತರಿಗೆ, ಸಂಪಾದಕರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ದೀಪಾವಳಿ ಗಿಫ್ಟ್‌ ಆಗಿ ಸಿಹಿ ತಿಂಡಿಯೊಂದಿಗೆ ಲಕ್ಷಗಟ್ಟಲೆ ಹಣ ನೀಡಿರುವ ಕುರಿತು ʻಪೀಪಲ್‌ ಮೀಡಿಯಾʼ ಇಂದು ಬೆಳಿಗ್ಗೆ ಸ್ಫೋಟಕ ವರದಿ ಮಾಡಿತ್ತು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ಸಿಎಂ ಕಚೇರಿ ನೀಡಿದ ₹2.5 ಲಕ್ಷ ಲಂಚವನ್ನು ವಾಪಸ್ ಮಾಡುವ ಮೂಲಕ ಪತ್ರಿಕಾಧರ್ಮವನ್ನು ಎತ್ತಿ ಹಿಡಿದಿದ್ದಾರೆ ಎಂಬುದು ತಿಳಿದುಬಂದಿದೆ. ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ದಕ್ಕೆ ತರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಪತ್ರಕರ್ತರಿಗೆ ಲಂಚ ನೀಡಿದ್ದೇಕೆ ಎಂಬುದನ್ನು ಸಿಎಂ ಉತ್ತರಿಸಬೇಕು.ʼ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಶ್ನೆ ಮಾಡಿದೆ.

ಇದನ್ನೂ ಓದಿ : ➤➤ಪತ್ರಕರ್ತರಿಗೆ ಲಕ್ಷಗಟ್ಟಲೆ ದುಡ್ಡು: ಸಿಎಂ ಕಚೇರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆ

➤➤ಪತ್ರಕರ್ತರಿಗೆ ಹಣ ಹಂಚಿಕೆ: ಲೋಕಾಯುಕ್ತ ತನಿಖೆಗೆ ಹಿರಿಯ ಪತ್ರಕರ್ತರ ಆಗ್ರಹ

➤➤ಸಿಎಂ ಕಚೇರಿಯ ಗಿಫ್ಟ್‌ ಹಣ ನಿರಾಕರಿಸಿದ ಕನ್ನಡಪ್ರಭ


Related Articles

ಇತ್ತೀಚಿನ ಸುದ್ದಿಗಳು