ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಆ ಪ್ರದೇಶದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಹಿರಿಯ ನಟ ಅತುಲ್ ಕುಲಕರ್ಣಿ ಕರೆ ನೀಡಿದ್ದಾರೆ.
ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್ ಗೆ ಏಪ್ರಿಲ್ 27ರ, ಭಾನುವಾರ ಭೇಟಿ ನೀಡಿರುವ ಅವರು ಇದು ನಮ್ಮ ಕಾಶ್ಮೀರ, ಇದು ನಮ್ಮ ದೇಶ, ನಾವು ಬರುತ್ತೇವೆ” ಎಂದು ದೇಶದ ಜನತೆಗೆ ಸಂದೇಶ ನೀಡಿದ್ದಾರೆ.
ಜಗತ್ತಿಗೆ ಈ ಸಂದೇಶ ನೀಡಲು ನಾನು ಸಹ ಪಹಲ್ಗಾಮ್ ಗೆ ಬಂದಿದ್ದೇನೆ. “ಕಾಶ್ಮೀರ ಭಾರತದ ಆಸ್ತಿ. ಧೈರ್ಯ ಭಯಕ್ಕಿಂತಲೂ ಹೆಚ್ಚು ತೂಕ ಹೊಂದಿರುತ್ತದೆ. ದ್ವೇಷವು ಪ್ರೀತಿಗೆ ಸೋತಿದೆ. ಕಾಶ್ಮೀರಕ್ಕೆ ಹೋಗೋಣ. ಸಿಂಧ್, ಝೀಲಂ ತೀರಕ್ಕೆ ಹೋಗೋಣ. ನಾನು ಬಂದಿದ್ದೇನೆ, ನೀವು ಕೂಡ ಬನ್ನಿ ಎಂದು ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ.
ಪಹಲ್ಗಾಮ್ ದಾಳಿಯಿಂದಾಗಿ ಪ್ರವಾಸೋಧ್ಯಮವನ್ನೇ ನಂಬಿ ಬದುಕುತ್ತಿದ್ದ ಕಾಶ್ಮೀರಿಗಳು ಆತಂಕದಲ್ಲಿದ್ದಾರೆ. ಈ ಕಾರಣಕ್ಕೆ ಅತುಲ್ ಕುಲಕರ್ಣಿ ಈ ನಿರ್ಣ/ವನ್ನು ತೆಗೆದುಕೊಂಡಿದ್ದು, ಸಹ ಭಾರತೀಯರಿಗೆ ಕಾಶ್ಮೀರಕ್ಕೆ ಭೇಟಿ ನೀಡಿ ತಮ್ಮ ಬೆಂಬಲವನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ.
ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಖಾಲಿ ವಿಮಾನದ ಸೀಟುಗಳು, ಅವರ ಬೋರ್ಡಿಂಗ್ ಪಾಸ್ ಮತ್ತು ವಿಮಾನ ಸಿಬ್ಬಂದಿಯ ಟಿಪ್ಪಣಿಗಳೊಂದಿಗೆ ಖಾಲಿ ವಿಮಾನವನ್ನು ನಾವು ಭರ್ತಿ ಮಾಡಬೇಕಾಗಿದೆ ಚಲಿಯೇ ಜಿ, ಕಾಶ್ಮೀರ್ ಚಲೀನ್” ಎಂದು ಶೀರ್ಷಿಕೆ ನೀಡಿದ್ದಾರೆ.
ಏಪ್ರಿಲ್ 27 ರಂದು, ಅತುಲ್ ಕುಲಕರ್ಣಿ ಅವರು ಪಹಲ್ಗಮ್‌ಗೆ ಭೇಟಿ ನೀಡುತ್ತಿರುವುದನ್ನು ಮತ್ತು ಅಂಗಡಿಯಲ್ಲಿ ಸ್ಥಳೀಯ ಖಾದ್ಯಗಳನ್ನು ಖರೀದಿಸುತ್ತಿರುವ ಒಂದೆರಡು ಭಾವಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಒಂದು ಭಾವಚಿತ್ರದಲ್ಲಿ, ಅವರು “ಐ ಲವ್ ಪಹಲ್ಗಾಮ್” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಭಾವಚಿತ್ರದಲ್ಲಿ ಅವರು ಕಾಶ್ಮೀರಿ ಅಂಗಡಿಯಿಂದ ಕ್ರಿಕೆಟ್ ಬ್ಯಾಟ್ ಖರೀದಿಸುತ್ತಿರುವುದನ್ನು ತೋರಿಸಲಾಗಿದೆ. ಅಂಗಡಿಯ ಮಾಲೀಕರು ನಟನಿಗೆ ಕಷ್ಟದ ಸಮಯದಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅವರ ಒಂದು ಪೋಸ್ಟ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ಅತುಲ್ ಸರ್, ನೀವು ನಮ್ಮೂರಿನಲ್ಲಿ ಆತಿಥ್ಯ ವಹಿಸಿದ್ದು ತುಂಬಾ ಸಂತೋಷವಾಯಿತು. ಈ ಕಷ್ಟದ ಸಮಯದಲ್ಲಿ ಆಗಮಿಸಿ ಶತ್ರುಗಳಿಗೆ ನಾವು ಹೆದರುವುದಿಲ್ಲ ಎಂದು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾವು ಒಟ್ಟಾಗಿ ಇದನ್ನು ಜಯಿಸುತ್ತೇವೆ” ಎಂದು ಹೇಳಿದ್ದಾರೆ.