Sunday, June 16, 2024

ಸತ್ಯ | ನ್ಯಾಯ |ಧರ್ಮ

ಕಾಶ್ಮೀರಿ ಪ್ರತ್ಯೇಕತಾವಾದಿ ಅಲ್ತಾಫ್ ಅಹ್ಮದ್ ಶಾ ಆಸ್ಪತ್ರೆಯಲ್ಲಿ ನಿಧನ

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ, ದಿವಂಗತ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಳಿಯ ಅಲ್ತಾಫ್ ಅಹ್ಮದ್ ಶಾ ಅವರು ಮಂಗಳವಾರ ಮುಂಜಾನೆ ದೆಹಲಿಯ ಏಮ್ಸ್‌ನಲ್ಲಿ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ಈ ಹಿಂದೆ ಅಲ್ತಾಫ್‌ ಶಾ ಅವರ ಮಗಳು ರುವಾ ಶಾ ಅವರು ತಮ್ಮ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಶೀಘ್ರವೇ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಅಕ್ಟೋಬರ್ 5 ರಂದು, ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಸೂಕ್ತ ಚಿಕಿತ್ಸೆಗಾಗಿ ದೆಹಲಿ ಹೈಕೋರ್ಟಿನ ಆದೇಶದ ಮೇರೆಗೆ ಅಲ್ತಾಫ್ ಅಹ್ಮದ್ ಅವರನ್ನು ತಿಹಾರ್‌ ಜೈಲಿನಿಂದ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ (ಎಐಐಎಂಎಸ್) ಕರೆದೊಯ್ಯಲಾಗಿತ್ತು. 

ಅವರು ನ್ಯುಮೋನಿಯಾ, ಅನಿಯಂತ್ರಿತ ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು. ತಿಹಾರ್ ಜೈಲಿನಿಂದ ಆಸ್ಪತ್ರೆಗೆ ಕರೆದೊಯ್ದ ಕೆಲವು ದಿನಗಳ ನಂತರ ಶಾ ಅವರು ಏಮ್ಸ್ ನಲ್ಲಿ ನಿಧನರಾದರು. ಈ ಕುರಿತು ನಿನ್ನೆ ತಡರಾತ್ರಿ ಅಬು ನಿಧನರಾದ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು ಎಂದು ಅವರ ಪುತ್ರಿ ರುವಾ ಶಾ, ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ತಾಫ್ ಅಹ್ಮದ್ ಶಾ ಅವರಿಗೆ 66 ವರ್ಷ ವಯಸ್ಸಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು