Thursday, January 30, 2025

ಸತ್ಯ | ನ್ಯಾಯ |ಧರ್ಮ

ಹಣವಿದ್ಧ ಎಟಿಎಂ ಯಂತ್ರವನ್ನೆ ಕದ್ದೋಯ್ದ ಕತರ್ನಾಕ್ ಕಳ್ಳರು

ಹಾಸನ : ವಿವಿಧ ಕಡೆ ಎಟಿಎಂ ಒಳಗಿದ್ದ ಹಣ ಕಳ್ಳತನ ಮಾಡಲಾಗಿದೆ ಎಂದು ಸುದ್ದಿ ಕೇಳಿದ್ದೇವೆ. ಆದರೇ ಇಲ್ಲಿ ಮುಖ್ಯ ರಸ್ತೆ ಬಳಿ ಇದ್ದ ಎಟಿಎಂ ಮಿಷನ್‌ನನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಗೊರೂರು ಮುಖ್ಯ ರಸ್ತೆ, ಹನುಮಂತಪುರ, ಪಂಚ ಬೃಹತ್ ಆಂಜನೇಯ ವಿಗ್ರಹದ ಸಮೀಪದಲ್ಲೆ ಇರುವ ಇಂಡಿಯಾ ಒನ್ ಎಟಿಎಂ ಮಿಷನ್ ಒಳಗಿನ ಹಣಕ್ಕೆ ಹೊಂಚು ಹಾಕಿರುವ ಕಳ್ಳರು ಸುಮಾರು ಒಂದು ಗಂಟೆಯ ಆಸುಪಾಸಿನಲ್ಲಿ ಬಂದು ಕದಿಯುವಾಗ ಯಾರು ಸಮಸ್ಯೆ ಕೊಡಬಾರದೆಂದು ಮೊದಲೆ ಪ್ಲಾನ್ ಮಾಡಿರುವ ಕಳ್ಳರು ಮೊದಲು ಈ ಎಟಿಎಂ ಪಕ್ಕದಲ್ಲಿರುವ ಮನೆಗಳ ಮುಂದಿನ ಚಿಲಕಕ್ಕೆ ಕಡ್ಡಿ ಸಿಗಿಸಿದ್ದು, ನಂತರ ಎಟಿಎಂ ಬೂತ್ ಗೆ ನುಗ್ಗಿದ್ದಾರೆ.

ಹಣ ತೆಗೆಯಲು ಹೋದರೇ ಸೈರನ್ ಇತರೆ ಸಮಸ್ಯೆಗಳು ಎದುರಾಗಬಹುದೆಂದು ಸೈರನ್ ಬಾರದಂತೆ ನಿಗಾವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಬಾಕ್ಸನ್ನೆ ಕಳ್ಳತನ ಮಾಡಿದ್ದಾರೆ. ಬೆಳಗಿನ ಸಮಯದಲ್ಲಿ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ. ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಬುಧವಾರದಂದು ಬೆಳಿಗ್ಗೆ ಎಸ್ಪಿ ಮೊಹಮ್ಮದ್ ಸುಜೀತಾ ಹಾಗೂ ಪೊಲೀಶ್ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page