ಪಟ್ಟಣಂತಿಟ್ಟ: ಆಂಧ್ರಪ್ರದೇಶದ ಶಬರಿಮಲೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಪಟ್ಟಣಂತಿಟ್ಟ ಸಮೀಪದ ಲಾಹಾ ಎಂಬಲ್ಲಿ ಮಂಗಳವಾರ ಬೆಳಗ್ಗೆ ಅಪಘಾತಕ್ಕೀಡಾಗಿದೆ. ಬಸ್ ಪಲ್ಟಿಯಾದ ಪರಿಣಾಮ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲಾಹಾ ಮತ್ತು ಪುತ್ತುಕ್ಕಡ ನಡುವೆ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ವಾಹನ ಪಲ್ಟಿಯಾಗಿದೆ. ತಿರುವಿನಲ್ಲಿ ಹೋಗುವಾಗ ವಾಹನ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ಶಬರಿಮಲೆ ದರ್ಶನ ಮುಗಿಸಿ ಮಿನಿ ಬಸ್‌ನಲ್ಲಿ ಯಾತ್ರಾರ್ಥಿಗಳು ವಾಪಸ್ಸಾಗುತ್ತಿದ್ದರು.
ಗಾಯಗೊಂಡವರನ್ನು ಪಥನಂತಿಟ್ಟದ ಜನರಲ್ ಆಸ್ಪತ್ರೆ ಮತ್ತು ಪೆರಿನಾಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ.
ಬಸ್ಸಿನಲ್ಲಿ 34 ಯಾತ್ರಾರ್ಥಿಗಳು ಇದ್ದರು. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಅಗ್ನಿಶಾಮಕ ಮತ್ತು ರಕ್ಷಣಾ ತಂಡ ಬಸ್ಸನ್ನು ರಸ್ತೆಯಿಂದ ಸ್ಥಳಾಂತರಿಸಿದೆ.