Home ದೇಶ ಸ್ನೇಹಿತನ ಪುತ್ರಿಯ ಮೇಲೆ ನಿರಂತರ ರೇಪ್ ಆರೋಪ: ಸರ್ಕಾರಿ ಉದ್ಯೋಗಿಯನ್ನು ವಜಾಗೊಳಿಸಿದ ದೆಹಲಿ ಸಿ.ಎಂ ಕೇಜ್ರಿವಾಲ್

ಸ್ನೇಹಿತನ ಪುತ್ರಿಯ ಮೇಲೆ ನಿರಂತರ ರೇಪ್ ಆರೋಪ: ಸರ್ಕಾರಿ ಉದ್ಯೋಗಿಯನ್ನು ವಜಾಗೊಳಿಸಿದ ದೆಹಲಿ ಸಿ.ಎಂ ಕೇಜ್ರಿವಾಲ್

0

ಹೊಸದಿಲ್ಲಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನಿರ್ದೇಶಕರನ್ನು ಅಮಾನತು ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದರು.

ದೆಹಲಿ ಪೊಲೀಸರು ಉಪನಿರ್ದೇಶಕನ ಮನೆಗೆ ಬಂದಿದ್ದು, ಉಪನಿರ್ದೇಶಕ ಶೀಘ್ರದಲ್ಲೇ ಬಂಧನಕ್ಕೆ ಸಾಧ್ಯತೆಯಿದೆ. ಉಪ ನಿರ್ದೇಶಕನ ಮೇಲೆ ತಮ್ಮ ಸ್ನೇಹಿತನ ಮಗಳ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರವೆಸಗಿರುವ ಆರೋಪವಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿ ಆಕೆ ಗರ್ಭಧರಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದರು.

ಸಂತ್ರಸ್ತ ಬಾಲಕಿ ತನ್ನ ತಂದೆಯ ಮರಣದ ನಂತರ ಅಕ್ಟೋಬರ್ 1, 2020ರಿಂದ ಉಪ ನಿರ್ದೇಶಕರ ಮನೆಯಲ್ಲಿ ವಾಸಿಸುತ್ತಿದ್ದು, ಪೊಲೀಸರ ಪ್ರಕಾರ, ಆರೋಪಿ ಅಧಿಕಾರಿಯು ನವೆಂಬರ್ 2020 ಮತ್ತು ಜನವರಿ 2021ರ ನಡುವೆ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದು, ದೂರಿನಲ್ಲಿ ಅಧಿಕಾರಿಯ ಪತ್ನಿಯೂ ಗರ್ಭಪಾತಕ್ಕೆ ಔಷಧ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

You cannot copy content of this page

Exit mobile version