Wednesday, October 30, 2024

ಸತ್ಯ | ನ್ಯಾಯ |ಧರ್ಮ

ಅದಾನಿ ಗ್ರೂಪ್ ಪವರ್ ಲೈನ್ ಒಪ್ಪಂದವನ್ನು ಅಮಾನತುಗೊಳಿಸಿದ ಕೀನ್ಯಾ ನ್ಯಾಯಾಲಯ

ಬೆಂಗಳೂರು: ವಿದ್ಯುತ್‌ ಸರಬರಾಜು ಮಾರ್ಗಗಳು ಸೇರಿದಂತೆ ವಿದ್ಯುತ್ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸರ್ಕಾರಿ ಸ್ವಾಮ್ಯದ ಕೀನ್ಯಾ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಕಂಪನಿ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ನಡುವೆ ನಡೆದಿದ್ದ ಒಪ್ಪಂದವನ್ನು ಕೀನ್ಯಾ ಹೈಕೋರ್ಟ್ ಅಕ್ಟೋಬರ್ 25 ಶುಕ್ರವಾರ ಅಮಾನತುಗೊಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಎರಡು ಕಂಪನಿಗಳ ನಡುವಿನ 30 ವರ್ಷಗಳ ಒಪ್ಪಂದಕ್ಕೆ ಈ ತಿಂಗಳ ಆರಂಭದಲ್ಲಿ ಸಹಿ ಹಾಕಲಾಯಿತು . ಅದಾನಿ ಎನರ್ಜಿ ಸಲ್ಯೂಷನ್ಸ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್‌ನ ಭಾಗವಾಗಿದೆ.

ಈ ಒಪ್ಪಂದವನ್ನು ಪ್ರಶ್ನಿಸಿ ಕೀನ್ಯಾದ ಲಾ ಸೊಸೈಟಿ ಸಲ್ಲಿಸಿದ ಪ್ರಕರಣದ ಕುರಿತು ನ್ಯಾಯಾಲಯವು ನಿರ್ಧರಿಸುವವರೆಗೆ ಕೀನ್ಯಾ ಸರ್ಕಾರವು $ 736 ಮಿಲಿಯನ್ ಒಪ್ಪಂದವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕೀನ್ಯಾದ ಲಾ ಸೊಸೈಟಿಯು ಈ ಒಪ್ಪಂದವು “ಗೌಪ್ಯತೆಯಿಂದ ಕೂಡಿದೆ (tainted with secrecy)” ಮತ್ತು “ಸಾಂವಿಧಾನಿಕ ನೆಪವನ್ನು ಇಟ್ಟುಕೊಂಡಿದೆ (constitutional sham) ” ಎಂದು ವಾದಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕೀನ್ಯಾದ 2021 ರ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕಾಯ್ದೆಯಿಂದ ಕಡ್ಡಾಯಗೊಳಿಸಿದ ಒಪ್ಪಂದದ ಬಗ್ಗೆ ಸರ್ಕಾರಿ ಸ್ವಾಮ್ಯದ ಕಂಪನಿ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಅರ್ಥಪೂರ್ಣ ಸಾರ್ವಜನಿಕ ಭಾಗವಹಿಸುವಿಕೆಯನ್ನು ನಡೆಸಿಲ್ಲ ಎಂದು ಅದು ಆರೋಪಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಫ್ರಿಕನ್ ದೇಶದಲ್ಲಿ ಸಾರ್ವಜನಿಕ ವಲಯದ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕಾನೂನು ಖಾಸಗಿ ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ.

ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳ ಅವಧಿಗೆ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಕೀನ್ಯಾ ಸರ್ಕಾರ ಮತ್ತು ಅದಾನಿ ಗ್ರೂಪ್‌ನ ಇನ್ನೊಂದು ಕಂಪನಿಯ ನಡುವಿನ ಪ್ರಸ್ತಾವಿತ ಒಪ್ಪಂದವನ್ನು ಇತರ ಗುಂಪುಗಳ ಜೊತೆಗೆ ಕೀನ್ಯಾದ ಕಾನೂನು ಸೊಸೈಟಿ (ಲಾ ಸೊಸೈಟಿ ಆಫ್‌ ಕೀನ್ಯಾ) ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಈ ಒಪ್ಪಂದವು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಲಾ ಸೊಸೈಟಿ ಆಫ್‌ ಕೀನ್ಯಾ ಹೇಳಿದೆ.

ಸೆಪ್ಟೆಂಬರ್‌ನಲ್ಲಿ, ಕೀನ್ಯಾದ ನ್ಯಾಯಾಲಯವು ಈ ವಿಷಯವನ್ನು ನಿರ್ಧರಿಸುವವರೆಗೆ ವಿಮಾನ ನಿಲ್ದಾಣದ ಒಪ್ಪಂದವನ್ನು ಅಮಾನತುಗೊಳಿಸಿತು .

Related Articles

ಇತ್ತೀಚಿನ ಸುದ್ದಿಗಳು

You cannot copy content of this page