Saturday, August 2, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಸೇರಿದ ಕೇರಳ ಕ್ಯಾಥೋಲಿಕ್ ಪಾದ್ರಿ: ವಿವರಣೆ ಕೇಳಿದ ಚರ್ಚ್

ತಿರುವನಂತಪುರಂ: ಕೇರಳದ ಕ್ಯಾಥೋಲಿಕ್ ಪಾದ್ರಿ ರೆವ್ ಕುರಿಯಾಕೋಸ್ ಮಟ್ಟೆಮ್ ಬಿಜೆಪಿ ಸದಸ್ಯತ್ವ ಪಡೆದಿದ್ದರು. ಇಡುಕ್ಕಿ ಜಿಲ್ಲೆಯ ಸೇಂಟ್ ಥಾಮಸ್ ಕ್ಯಾಥೋಲಿಕ್ ಚರ್ಚ್‌ನ ವಿಕಾರ್ ಆಗಿದ್ದ ಅವರು, ಆ ಸ್ಥಾನದಿಂದ ಕೆಳಗಿಳಿದ ಒಂದು ದಿನದ ನಂತರ, ಪ್ರಕರಣವನ್ನು ಈಗ ಮೇಲಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಚರ್ಚ್ ವಕ್ತಾರ ಹೇಳಿದ್ದಾರೆ.

ಇಡುಕ್ಕಿ ಧರ್ಮಪ್ರಾಂತ್ಯದ ವಕ್ತಾರ ರೆ.ಫಾ.ಜಿನ್ಸ್ ಕರಕಟ್ಟಿಲ್ ಮಾತನಾಡಿ, ಚರ್ಚ್ ಆವರಣವನ್ನು ಪಕ್ಷದ ಕೆಲಸಗಳಿಗೆ ಬಳಸುವಂತಿಲ್ಲ ಕಟ್ಟಿನಿಟ್ಟಾಗಿ ತಿಳಿಸಿದ್ದಾರೆ.

“ಪ್ರಸ್ತುತ, ಅವರನ್ನು ವಿಕಾರ್ ಸ್ಥಾನದಿಂದ ಕೆಳಗಿಳಿಸಲಾಗಿದೆ ಮತ್ತು ನಾವು ವಿಷಯವನ್ನು ಪರಿಶೀಲಿಸಲು ಆಯೋಗವನ್ನು ರಚಿಸುತ್ತೇವೆ. ಈ ನಿರ್ಧಾರವನ್ನು ತೆಗೆದುಕೊಂಡ ಪಾದ್ರಿಯನ್ನು ಆಯೋಗದ ಮುಂದೆ ಹಾಜರಾಗುವಂತೆ ತಿಳಿಸಲಾಗುವುದು ಮತ್ತು ಚರ್ಚ್ ಈ ಬಗ್ಗೆ ತಿಳಿದುಕೊಳ್ಳಲು ಬಯಸುತ್ತದೆ ಮತ್ತು ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ಕ್ಯಾರಕಟ್ಟಿಲ್ ಹೇಳಿದರು.

ಕ್ಯಾಥೋಲಿಕ್ ಚರ್ಚ್‌ನ ಇಡುಕ್ಕಿ ಡಯಾಸಿಸ್ ಅವರನ್ನು ವಿಕಾರ್ ಸ್ಥಾನದಿಂದ ತಾತ್ಕಾಲಿಕವಾಗಿ ಅಮಾನತು ಮಾಡಿ ಆದೇಶವನ್ನು ನೀಡಿದ್ದು, ಅವರು ಕೇಸರಿ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ಒಂದು ಗಂಟೆಯ ನಂತರ ಈ ನಿರ್ಧಾರವನ್ನು ಚರ್ಚ್‌ ತೆಗೆದುಕೊಂಡಿದೆ.

ಕೇರಳದ ಕ್ಯಾಥೋಲಿಕ್ ಪಾದ್ರಿಯೊಬ್ಬರು ಕೇಸರಿ ಪಕ್ಷಕ್ಕೆ ಸೇರುತ್ತಿರುವುದು ಇದೇ ಮೊದಲು ಎಂದು ಬಿಜೆಪಿ ಮೂಲಗಳು ಹೇಳಿವೆ.

62 ವರ್ಷದ ಕ್ಯಾಥೋಲಿಕ್ ಪಾದ್ರಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಕ್ರಿಶ್ಚಿಯನ್ನರ ಪಕ್ಷವಲ್ಲ ಎಂಬ ಸಾಮಾನ್ಯ ನಂಬಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

ಕೇರಳದಲ್ಲಿ, ರಾಜ್ಯದ 3.30 ಕೋಟಿ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಶೇಕಡಾ 18ರಷ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page