Tuesday, February 17, 2026

ಸತ್ಯ | ನ್ಯಾಯ |ಧರ್ಮ

ಕೇವಲ 500 ರುಪಾಯಿಗೆ ತಲೆ ಕಡಿದ ಯುವಕ

ಗುವಾಹಟಿ: ಫುಟ್‌ಬಾಲ್ ಪಂದ್ಯಕ್ಕೆ ವಿಧಿಸಿದ 500 ರೂ.ಗಳ ಷರತ್ತಿನ ವಿವಾದದ ನಂತರ, ಅಸ್ಸಾಂನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಂತ ಗ್ರಾಮದ ವ್ಯಕ್ತಿಯನ್ನು ಕತ್ತು ಸೀಳಿ ಕೊಂದಿರುವ ಅಮಾನುಷ ಘಟನೆ ನಡೆದಿದೆ.
ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯ ಆಯೋಜಿಸಲಾಗಿತ್ತು. ಪಂದ್ಯದಲ್ಲಿ 500 ರೂ ಗಳ ಷರತ್ತನ್ನಾ ಹಾಕಿಕೊಂಡಿದ್ದು, ಪಂದ್ಯಮುಗಿದ ನಂತರ ಕೊಲೆಯಾದ ವ್ಯಕ್ತಿ ಕೆಲವು ಸಮಯದ ಹಿಂದೆ ಆಪಾದಿತ ಹಂತಕನಿಂದ 500 ರೂ ಸಾಲವನ್ನು ಕೇಳಿದ್ದ, ಆದರೆ ಆತ ಹಣಕೊಡಲು ನಿರಾಕರಿಸಿದ್ದ ಕಾರಣ ಇಬ್ಬರ ನಡುವೆ ಇರಿಸು-ಮುರಿಸು ಶುರುವಾಗಿ, ಆಕ್ರೋಶಗೊಂಡ ಹಂತಕ ಕೊಡಲಿಯಂತಹ ಆಯುಧದಿಂದ ಕತ್ತನ್ನ ಕಡಿದಿದ್ದಾನೆ.
ಕೃತ್ಯದ ಬಳಿಕ ತುಂಡಾಗಿರುವ ತಲೆ ಹಿಡಿದುಕೊಂಡು ಸುಮಾರು 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ತೆರಳಿ, ಕೊಲೆಮಾಡಿದ ಆಯುಧದೊಂದಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್‌ ಮಾಹಿತಿ ಪ್ರಕಾರ ಕೊಲೆಯಾದ ವ್ಯಕ್ತಿ ಹೇಮ್ರಾಮ್ ಹಾಗೂ ಆರೋಪಿ ತುನಿರಾಮ್ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page