Monday, July 28, 2025

ಸತ್ಯ | ನ್ಯಾಯ |ಧರ್ಮ

ಮತ್ತೊಂದು ಗೆಲುವಿ ನಿರೀಕ್ಷೆಯಲ್ಲಿ ಕಿವೀಸ್‌ ತಂಡ: ಮೊದಲ ಗೆಲುವಿನ ಒತ್ತಡದಲ್ಲಿ ಶಿಕರ್‌ ತಂಡ

ಹ್ಯಾಮಿಲ್ಟನ್‌: ಇಲ್ಲಿ ನಡೆಯುವ ಭಾರತ- ನ್ಯೂಜಿಲೆಂಡ್‌ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, ಕಿವೀಸ್‌ ತಂಡ 2 ನೇ ಗೆಲುವಿನ ನಿರೀಕ್ಷೆಯ್ಲಲ್ಲಿದ್ದರೆ. ಶಿಕರ್‌ ಧವನ್‌ ನಾಯಕತ್ವದ ಭಾರತ ತಂಡವು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ.

ಕಿವೀಸ್‌ ನೆಲದಲ್ಲಿ ಶುಕ್ರವಾರ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ, ಭಾರತ ತಂಡವು 300ಕ್ಕೂ ಹೆಚ್ಚು ರನ್‌ಗಳ ಗುರಿ ನೀಡಿದ್ದರು, ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌, ಮತ್ತು ಟಾಮ್‌ ಲಥಾಮ್‌ ಅವರ ದ್ವಿಶತಕದ ಜೊತೆಯಾಟವು ಭಾರತ ತಂಡ ನೀಡಿದ ಗುರಿಯನ್ನು ಸುಲಭವಾಗಿ ಸಾಧಿಸಿತು. ಈ ಮೂಲಕ ನ್ಯೂಜಿಲ್ಯಾಂಡ್‌ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಇಂದು ಸರಣಿಯ ಎರಡನೇ ಪಂದ್ಯವು ನಡೆಯಲಿದ್ದು, ಭಾರತ ತಂಡವು ಗೆಲ್ಲಲೇಬೇಕಾದ ಅನಿವಾರ್ಯಯತೆ ಸೃಷ್ಟಿಯಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ, ಸರಣಿ ತನ್ನದಾಗಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಟ್ಟು ಕೊಳ್ಳಬಹುದಾಗಿದೆ. ಭಾರತ ತಂಡದ ಬೌಲಿಂಗ್‌ ವಿಭಾಗದಲ್ಲಿ ಅನುಭವದ ಕೊರತೆ ಕಂಡುಬರುತ್ತಿದ್ದು, ಬೌಲರ್‌ಗಳು ತಮ್ಮ ಸಾಮರ್ಥ್ಯದ ಚಳಕವನ್ನು ತೋರಿಸದರೆ ಮಾತ್ರ ಕಿವೀಸ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಮರಳಿ ಕಳಿಸಬಹುದು. ಇದರಿಂದ ತಂಡ ಗಲುವು ಸಾಧಿಸಲು ಸುಲಭವಾಗುತ್ತದೆ ಎನ್ನಲಾಗಿದೆ.

ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಟಾಸ್‌ ಗೆದ್ದಿದ್ದು, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಯಾವ ತಂಡ ಗೆಲುವನ್ನು ಸಾಧಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page