Thursday, November 20, 2025

ಸತ್ಯ | ನ್ಯಾಯ |ಧರ್ಮ

ಸಚಿವ ಸಂಪುಟ ಪುನರ್‌ರಚನೆ: ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನದ ಮುನ್ಸೂಚನೆ, ಶಾಸಕ ಟಿಡಿ ರಾಜೇಗೌಡರಿಗೆ ಒಲಿಯುತ್ತಾ ಸಚಿವ ಸ್ಥಾನ?

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸಚಿವ ಸಂಪುಟ ಪುನರ್‌ರಚನೆಗೆ ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಇದರ ಮುಂದಿನ ಬೆಳವಣಿಗೆಯಂತೆ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಶೃಂಗೇರಿ ಶಾಸಕ ಟಿಡಿ ರಾಜೇಗೌಡರ ದಿಢೀರ್ ದೆಹಲಿ ಪಯಣ ಜಿಲ್ಲಾ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.

ಸಂಪುಟ ಪುನಾರಚನೆ ಮುಂದಿನ ತಿಂಗಳಿಗೆ ನಡೆಯುವ ಸಾಧ್ಯತೆ ಇದೆ ಎಂದು ದೆಹಲಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಇತ್ತೀಚಿನ ದೆಹಲಿ ಭೇಟಿ ವೇಳೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜೊತೆ 20 ನಿಮಿಷಗಳ ಕಾಲ ಚರ್ಚೆ ನಡೆಸಿ, ಕೇಂದ್ರ ಹೈಕಮಾಂಡ್‌ನಿಂದ ಪ್ರಾಮುಖ್ಯ ಅನುಮತಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸಭೆಯೊಂದರಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಸಚಿವ ಸ್ಥಾನದ ಹಕ್ಕು ಸಿಕ್ಕಬಹುದು. ಈ ನಿಟ್ಟಿನಲ್ಲಿ ನಾನೂ ಸಹ ಮುಖ್ಯಮಂತ್ರಿಯವರಿಗೆ ಬೇಡಿಕೆ ಇಟ್ಟಿದ್ದೇನೆ. ಅವರಿಂದಲೂ ಹಸಿರು ನಿಶಾನೆ ಸಿಕ್ಕಿದೆ. ಮೂಲತಃ ನಾನೂ ಈ ಜಿಲ್ಲೆಯವನೇ ಆದರೂ ಇಲ್ಲಿಂದ ಆರಿಸಿ ಬಂದ ಹಿರಿಯರಿಗೂ ಅವಕಾಶ ಸಿಗಬೇಕು ಅನ್ನೋದು ನನ್ನ ಅಭಿಲಾಷೆ ಕೂಡಾ. ಹೀಗಾಗಿ ತನಗೆ ಉಸ್ತುವಾರಿ ಸಚಿವನಾಗಿ ಇದು ಕೊನೆಯ ಅವಕಾಶ ಇರಬಹುದು ಎಂದು ಸಚಿವ ಜಾರ್ಜ್ ಮುನ್ಸೂಚನೆ ಕೊಟ್ಟಿದ್ದರು.

ಈಗಾಗಲೇ ರಾಜಕೀಯ ಬಯಕೆಯನ್ನು ಶಾಸಕ ಟಿ.ಡಿ. ರಾಜೇಗೌಡ ಅವರು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರು ಮತ್ತು ರಾಜ್ಯಾಧ್ಯಕ್ಷರಿಂದ ನಿರೀಕ್ಷೆ ಸಲ್ಲಿಸುತ್ತಿದ್ದಾರೆ. ದೆಹಲಿ ಯಾತ್ರೆಯಲ್ಲಿ ಸ್ಥಳೀಯ ನಾಯಕರು ಪ್ರಾದೇಶಿಕ ರಾಜಕೀಯದಲ್ಲಿ ಮನವರಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಅಧಿಕಾರ ಹಂಚಿಕೆಯಲ್ಲಿ ಕ್ರಿಯಾಶೀಲ ಬದಲಾವಣೆ ಆರಂಭವಾಗಿವೆ. 2023ರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದ 2.5 ವರ್ಷ ಪೂರ್ಣಗೊಳ್ಳುವ ಸಮಯದ ಹಿನ್ನೆಲೆ, ಈ ಸಂಪುಟ ಪುನರ್‌ರಚನೆ ಕರ್ನಾಟಕ ರಾಜಕೀಯದ ಕ್ರಾಂತಿ ಭ್ರಾಂತಿಗಳಿಗೆ ಮಹತ್ವದ ಸುಳಿವು ಕೊಟ್ಟಿದೆ‌.

Related Articles

ಇತ್ತೀಚಿನ ಸುದ್ದಿಗಳು

You cannot copy content of this page