Monday, January 6, 2025

ಸತ್ಯ | ನ್ಯಾಯ |ಧರ್ಮ

ಕೊಹ್ಲಿ ತಂಡದಲ್ಲಿರಲು ಅನರ್ಹ: ಇರ್ಫಾನ್ ಪಠಾಣ್

ಸಿಡ್ನಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಮಾಜಿ ಆಟಗಾರ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಆಡದ, ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳದ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ ಎಂದು ಹೇಳಿದ್ದಾರೆ.

”ತಂಡದಲ್ಲಿ ಸ್ಟಾರ್ ಸಂಸ್ಕೃತಿ ಹೋಗಬೇಕು. ನಮಗೆ ತಂಡದ ಸಂಸ್ಕೃತಿ ಬೇಕು. ನೀವು ನಿಮ್ಮನ್ನು ಸುಧಾರಿಸಿಕೊಳ್ಳಬೇಕು ಮತ್ತು ಭಾರತ ತಂಡವನ್ನು ಸುಧಾರಿಸಬೇಕು. ಸರಣಿಗೂ ಮುನ್ನ ಸಾಕಷ್ಟು ಪಂದ್ಯಗಳನ್ನು ಆಡಲಾಗಿತ್ತು.

ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶವಿತ್ತು. ಆದರೆ ಅವರು ಆಡಲಿಲ್ಲ. ಈ ಸಂಸ್ಕೃತಿ ಬದಲಾಗಬೇಕು. ದೇಶೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಕೊನೆಯ ಬಾರಿಗೆ ಯಾವಾಗ ಆಡಿದ್ದರು? ಒಂದು ದಶಕ ಕಳೆದಿದೆ. ಕಳೆದ ಐದು ವರ್ಷಗಳಲ್ಲಿ ಅವರ ಸರಾಸರಿ 30 ಕೂಡ ಇಲ್ಲ. ಹಿರಿಯ ಆಟಗಾರ ಭಾರತ ತಂಡಕ್ಕೆ ಅರ್ಹರೇ? ಬದಲಿಗೆ ಯುವ ಆಟಗಾರನಿಗೆ ಅವಕಾಶ ನೀಡಿ. ಇದು ವ್ಯಕ್ತಿಗಳ ಕ್ರೀಡೆಯಲ್ಲ, ತಂಡದ ಆಟ” ಪಠಾಣ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page