Saturday, August 17, 2024

ಸತ್ಯ | ನ್ಯಾಯ |ಧರ್ಮ

ಕೊನೆಗೂ ಬಗೆಹರಿದ ಕೋಲಾರದ ಕಗ್ಗಂಟು: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ ವಿ ಗೌತಮ್‌ ಆಯ್ಕೆ

ಕೋಲಾರ: ಕಳೆದ ಕೆಲವು ದಿನಗಳಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಶನಿವಾರ ಅಂತಿಮವಾಗಿದೆ.

ನಿನ್ನೆ ಅಭ್ಯರ್ಥಿಗಳ 9ನೇ ಪಟ್ಟಿ ಪ್ರಕಟವಾಗಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆ ಮಾಡಲಾಗಿತ್ತು. ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು,ಕೋಲಾರದಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ ಇಂದು ಕಾಂಗ್ರೆಸ್​​ ಉತ್ತರ ನೀಡಿದೆ. ಕೋಲಾರ ಕ್ಷೇತ್ರಕ್ಕೆ ಕೆ, ವಿ ಗೌತಮ್​​  ಅವರಿಗೆ ಕಾಂಗ್ರೆಸ್​​ ಟಿಕೆಟ್​ ನೀಡಿದೆ.

ಪ್ರಸ್ತುತ ಕೆ ವಿ ಗೌತಮ್ ಸದ್ಯ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕೋಲಾರದ ಟಿಕೆಟ್‌ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಯಿಟ್ಟಿರುವ ಕಾಂಗ್ರೆಸ್‌ ಜಿಲ್ಲೆಯ ಯಾವುದೇ ಬಣಕ್ಕೆ ಸೇರದ ಮೂರನೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ರಾಜಕೀಯವಾಗಿ ಜಾಣ್ಮೆ ಪ್ರದರ್ಶಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪೂರ್ಣ ಪಟ್ಟಿ ಇಲ್ಲಿದೆ

ಚಿತ್ರದುರ್ಗ -ಬಿ.ಎನ್‌.ಚಂದ್ರಪ್ಪ
ಬೆಳಗಾವಿ – ಮೃಣಾಲ್‌ ಹೆಬ್ಬಾಳ್ಕರ್‌
ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ – ಸಂಯುಕ್ತಾ ಪಾಟೀಲ್‌
ಧಾರವಾಡ – ವಿನೋದ್‌ ಅಸೂಟಿ
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ಕೊಪ್ಪಳ – ರಾಜಶೇಖರ ಹಿಟ್ನಾಳ್‌
ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
ಬೀದರ್‌ – ಸಾಗರ್‌ ಖಂಡ್ರೆ
ದಕ್ಷಿಣ ಕನ್ನಡ – ಪದ್ಮರಾಜ್‌
ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್‌ ಹೆಗ್ಡೆ
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಬೆಂಗಳೂರು ಸೆಂಟ್ರಲ್‌ -ಮನ್ಸೂರ್‌ ಅಲಿಖಾನ್‌
ಬೆಂಗಳೂರು ಉತ್ತರ -ಪ್ರೊ.ರಾಜೀವ್‌ ಗೌಡ
ಮೈಸೂರು -ಎಂ.ಲಕ್ಷ್ಮಣ್‌
ರಾಯಚೂರು -ಜಿ.ಕುಮಾರ ನಾಯಕ್‌
ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್‌
ಶಿವಮೊಗ್ಗ-ಗೀತಾ ಶಿವರಾಜ್​ ಕುಮಾರ್
ತುಮಕೂರು-ಎಸ್​ಪಿ ಮುದ್ದಹನುಮೇಗೌಡ
ಮಂಡ್ಯ-ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)
ಹಾಸನ- ಶ್ರೇಯಸ್ ಪಟೇಲ್
ಬೆಂಗಳೂರು ಗ್ರಾಮಾಂತರ-ಡಿಕೆ ಸುರೇಶ್
ವಿಜಯಪುರ- ರಾಜು​ ಅಲಗೂರು
ಹಾವೇರಿ- ಆನಂದ ಸ್ವಾಮಿ ಗಡ್ಡದೇವರ ಮಠ

ಚಿಕ್ಕಬಳ್ಳಾಪುರ -ರಕ್ಷಾ ರಾಮಯ್ಯ

ಚಾಮರಾಜನಗರ – ಸುನೀಲ್ ಬೋಸ್​

ಬಳ್ಳಾರಿ – ಇ. ತುಕರಾಂ

ಕೋಲಾರ- ಕೆ, ವಿ ಗೌತಮ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page