Home ರಾಜ್ಯ ಕೋಲಾರ ಕೋಲಾರ ಜಿಲ್ಲೆಯಾದ್ಯಂತ ಆಜಾದಿ ಕಾ ಅಮೃತ ಸರೋವರ ಕಾಮಗಾರಿ ವೀಕ್ಷಣೆ :ಅಸಮಾಧಾನಗೊಂಡ ನಿರ್ಮಲಾ ಸೀತಾರಾಮನ್‌

ಕೋಲಾರ ಜಿಲ್ಲೆಯಾದ್ಯಂತ ಆಜಾದಿ ಕಾ ಅಮೃತ ಸರೋವರ ಕಾಮಗಾರಿ ವೀಕ್ಷಣೆ :ಅಸಮಾಧಾನಗೊಂಡ ನಿರ್ಮಲಾ ಸೀತಾರಾಮನ್‌

0

ಕೋಲಾರ : ಆಜಾದಿ ಕಾ ಅಮೃತ ಸರೋವರ ಯೋಜನೆಯ ಅಡಿ ಕೋಲಾರ ಜಿಲ್ಲೆಯಾದ್ಯಂತ ವೀಕ್ಷಣೆಗೆಂದು ಬಂದ ಸಚಿವೆ ನಿರ್ಮಲಾ ಸೀತಾರಾಮನ್‌ ಅಲ್ಲಿನ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಆಜಾದಿ ಕಾ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಾದ್ಯಂತ ಸುಮಾರು 75 ಕೆರೆಗಳನ್ನು ಆಯ್ಕೆ ಮಾಡಿ ಕಾಮಗಾರಿಯನ್ನು ಶುರು ಮಾಡಲಾಗಿತ್ತು. ಈ ಹಿನ್ನಲೆ ಕಾಮಗಾರಿಯ ವೀಕ್ಷಣೆಗೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಕೋಲಾರಕ್ಕೆ ಬಂದಿದ್ದು, ಜಿಲ್ಲೆಯಾದ್ಯಂತ ಕೆರೆಗಳನ್ನು ವೀಕ್ಷಿಸಿದ್ದಾರೆ.

ಕಾಮಗಾರಿಗಳ ಸ್ಥಿತಿಯನ್ನು ನೋಡಿದ ಕೇಂದ್ರ ಸಚಿವೆ ʼಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು. ನೀರು ಹರಿದು ಬರದಿದ್ದರೆ ಕೆರೆಗಳು ತುಂಬುವುದಾದರೂ ಹೇಗೆ? ಮುಂದಿರುವ ಕೆರೆಗಳಿಗೆ ಯಾವ ರೀತಿ ನೀರು ಹರಿದು ಹೋಗುತ್ತದೆ ನೀವೇ ಹೇಳಿ? ಎಂದು ಪ್ರಶ್ನಿಸಿ ಜಿ.ಪಂ.ಸಿಇಒ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ ನಿರ್ಮಲಾ ಸೀತಾರಾಮನ್ ʼಕೆರೆಗಳ ಅಭಿವೃದ್ಧಿಗೆ ಮತ್ತಷ್ಟು ಹಣ ನೀಡುತ್ತೇವೆ ಆದರೆ ನಡೆಯುತ್ತಿರುವ ಕೆರೆಗಳ ಕಾಮಗಾರಿ ಸಮರ್ಪಕವಾಗಿ ಆಗಬೇಕುʼ ಎಂದು ಹೇಳಿದ್ದು ಇತರ ತಾಲ್ಲೂಕುಗಳ ಕೆರೆಗಳ ವೀಕ್ಷಣೆಯನ್ನು ಮುಂದುವರೆಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ನೇಮಕಾತಿ ಸಂಬಂಧಿಸಿದಂತೆ ಕನ್ನಡ ವಿಷಯ ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ದೇವನಹಳ್ಳಿಯ ಪರೀಕ್ಷಾ ಕೇಂದ್ರದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಘಟಕ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಯುಜಿಸಿ ಮರುಪರೀಕ್ಷೆ ನಡೆಸಲು ಒಪ್ಪಿಕೊಂಡು ಆದೇಶ ನೀಡಿತು.

♦️ peepal TV YouTube ಚಾನಲ್ ಅನ್ನು Subscribe ಮಾಡಿ ಬೆಲ್ ಐಕಾನ್ ಒತ್ತಿ

https://youtu.be/tl-niY8LscA

You cannot copy content of this page

Exit mobile version