ಕೊಳ್ಳೇಗಾಲ :ತಾಲೂಕಿನ ಕೋಂಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸುವ ಸರ್ಕಾರಿ ಬೋರ್‌ವೆಲ್‌ಗಳಲ್ಲಿ ಸುಮಾರು 100 ಮೀಟರ್ ಕೇಬಲ್ ಕಳ್ಳತನವಾಗಿರುವ ಘಟನೆ ನಡೆದಿದೆ.ಕಾಮಗೆರೆ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಬೋರ್‌ವೆಲ್‌ಗಳಲ್ಲಿ ಸೆಪ್ಟೆಂಬರ್ 01, 03 ಮತ್ತು 04 ರಂದು ರಾತ್ರಿ ವೇಳೆ ಕಳ್ಳರು ಕೇಬಲ್ ಕತ್ತರಿಸಿ ಕದ್ದೊಯ್ದಿದ್ದಾರೆ. ಇದರಿಂದ ಅಂದಾಜು 28 ಸಾವಿರ ರೂ. ನಷ್ಟವಾಗಿದೆ.ಈ ಸಂಬಂಧ ಕೊoಗರಹಳ್ಳಿ ಪಂಚಾಯಿತಿ ವತಿಯಿಂದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದ್ದು, ಕಳ್ಳರ ಪತ್ತೆ ಹಚ್ಚುವಂತೆ ಕ್ರಮಕ್ಕೆ ಆಗ್ರಹಿಸಲಾಗಿದೆ.
ನೀರು ಪೂರೈಕೆಯಲ್ಲಿ ವಿಳಂಬ :ಕೇಬಲ್ ಕಳ್ಳತನದಿಂದ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಕೋಂಗರಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಂದ್ರ ಕುಮಾರ್ರವರು ತಿಳಿಸಿದ್ದಾರೆ. ಕೂಡಲೇ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ, ಮತ್ತೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಮೂರು ಬೋರ್ ಗಳಲ್ಲೂ ಪೈಪ್ ಮೋಟಾರ್ ಮೇಲಕ್ಕೆ ಎಳೆದು 28 ಸಾವಿರ ವೆಚ್ಚದಲ್ಲಿ ಹೊಸ ಕೇಬಲ್ ಅಳವಡಿಸಿ ಜನರಿಗೆ ಸಮಸ್ಯೆ ಆಗದಂತೆ ನೀರು ಪೂರೈಕೆ ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಈ ರೀತಿ ಕಳ್ಳತನ ಆಗದಂತೆ ತಡೆಗಟ್ಟಲು ಪೊಲೀಸ್ ಇಲಾಖೆ ಕಳ್ಳರನ್ನು ಕಂಡು ಹಿಡಿದು ಕ್ರಮ ವಹಿಸಬೇಕೆಂದು ಮನವಿ ಮಾಡುತ್ತೇನೆ.
ಪಿಡಿಓ ಮಹೇಂದ್ರ ಕುಮಾರ್ ಕೊಂಗರಹಳ್ಳಿ
ಕೊಂಗರಹಳ್ಳಿ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಮೂರು ಬೋರ್ ಗಳಲ್ಲಿ 100 ಕ್ಕೂ ಹೆಚ್ಚುಮೀಟರ್ ಕೇಬಲ್ ಕಳ್ಳತನವಾಗಿರುವ ಕುರಿತು ದೂರು ಬಂದಿದೆ ಕಳ್ಳರನ್ನು ಪತ್ತೆ ಹಚ್ಚಲು ಕ್ರಮ ವಹಿಸುತ್ತೇನೆ.ಚೇತನ್ ಕುಮಾರ್ ಕೊಳ್ಳೇಗಾಲ ಗ್ರಾಮಾಂತರ ಠಾಣಿ ಪಿಎಸ್ಐ
ವರದಿ ನಾಗೇಂದ್ರ ಪ್ರಸಾದ್
