Friday, June 14, 2024

ಸತ್ಯ | ನ್ಯಾಯ |ಧರ್ಮ

ಕೋಮಾದಲ್ಲಿದ್ದಾರೆಂದು ಭಾವಿಸಿ 18 ತಿಂಗಳಿಂದ ಶವವನ್ನು ಮನೆಯಲ್ಲೇ ಇಟ್ಟುಕೊಂಡ ಕಾನ್ಪುರ ಕುಟುಂಬ

ಕಾನ್ಪುರ : ವಿಮಲೇಶ್‌ ದೀಕ್ಷಿತ್‌ ಅವರು ಮೃತಪಟ್ಟು 18 ತಿಂಗಳಾದರೂ, ಅವರಿನ್ನೂ ಕೋಮಾದಲ್ಲಿದ್ದಾರೆಂದು ನಂಬಿದ್ದ ಕುಟುಂಬಸ್ಥರು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ರಾವತ್ ಪುರ್‌ನಲ್ಲಿ ನಡೆದಿದೆ.

ಆದಾಯ ತೆರಿಗೆ ಇಲಾಖೆ ನೌಕರರಾಗಿದ್ದ ದೀಕ್ಷಿತ್‌ ಹೃದಯ ಸ್ತಂಭನದಿಂದ ಮೃತಪಟ್ಟಿದ್ದು ಖಾಸಗಿ ಆಸ್ಪತ್ರೆಯೊಂದು 2021 ಏಪ್ರಿಲ್‌ 21 ರಂದೇ ಮರಣ ಪ್ರಮಾಣ ಪತ್ರ ನೀಡಿದೆ. ಆದರೂ ಕುಟುಂಬಸ್ಥರು ದೀಕ್ಷಿತ್‌ ಅವರ ಮೇಲಿನ ಅತಿಯಾದ ಪ್ರೇಮದಿಂದ ಸತ್ಯವನ್ನು ನಂಬದೇ ಅಂತ್ಯಸಂಸ್ಕಾರವನ್ನೂ ನಡೆಸದೆ ದೀಕ್ಡಿತ್‌ ಇನ್ನೂ ಕೋಮಾದಲ್ಲಿದ್ದಾರೆಂದು ಭಾವಿಸಿ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ.ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ.ಅಲೋಕ್‌ ರಂಜನ್‌ ವಿವರಿಸಿದ್ದಾರೆ.

ವಿಮಲೇಶ್‌ ದೀಕ್ಷಿತ್‌ ಅವರ ಕುಟುಂಬದ ಪಿಂಚಣಿ ಸಂಬಂಧಿಸಿದ ಕಡತಗಳು ವಿಲೇವಾರಿಯಾಗದ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ಹೇಳಿದಾಗ ಅಲ್ಲಿನ ಪೋಲೀಸರು ಮತ್ತು ಮ್ಯಾಜಿಸ್ಟ್ರೇಟ್‌ಗಳೊಂದಿಗೆ ಆದಾಯ ತೆರಿಗೆ ಅಧಿಕಾರಿಗಳು ದೀಕ್ಷಿತ್‌ ಅವರ ಮನೆಗೆ ಭೇಟಿ ನೀಡಿದ್ದಾರೆ . ಈ ವೇಳೆ ಅಲ್ಲಿ ಆ ವಿಲಕ್ಷಣ ವಿಚಾರ ತಿಳಿದು ಬಂದಿದೆ. ಅಷ್ಟಾದರೂ ಅವರ ಕುಟುಂಬದವರು ಅವರಿನ್ನೂ ಸತ್ತಿಲ್ಲ ಕೋಮಾದಲ್ಲಿದ್ದಾರೆ ಎಂದು ಒತ್ತಾಯಪೂರ್ವಕವಾಗಿ ಹೇಳಿದ್ದಾರೆ. ದೀಕ್ಷಿತ್‌ ಅವರ ಪತ್ನಿ, ತನ್ನ ಪತಿ ಬೇಗ ಗುಣಮುಖವಾಗಲಿ, ಆದಷ್ಟು ಬೇಗ ಕೋಮಾದಿಂದ ಹೊರಬರಲಿ ಎಂದು ಪ್ರತಿನಿತ್ಯ ಶವದ ಮೇಲೆ ಗಂಗಾಜಲವನ್ನು ಪ್ರೋಕ್ಷಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ಕುಟುಂಬದವರ ಮನವೊಲಿಸಿದ ಅಧಿಕಾರಿಗಳು ಶವವನ್ನು ಲಾಲಾ ಲಜಪತ್‌ ರಾಜ್‌(LLR) ಆಸ್ಪತ್ರೆಗೆ ತಂದು ತಪಾಸಣೆ ನಡೆಸಿ ದೀಕ್ಷಿತ್‌ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಗಿದೆ ಎಂದು ರಂಜನ್‌ ಹೇಳಿದರು.

ಕುಟುಂಬದವರು ದೀಕ್ಷಿತ್‌ ಕೋಮಾದಲ್ಲಿದಾರೆಂದು ಎಂದು ನೆರೆಹೊರೆಯವರ ಹತ್ತಿರವೂ ಹೇಳಿಕೊಂಡಿದ್ದಾರೆ. ದೀಕ್ಷಿತ್‌ ಅವರ ಪತ್ನಿ ದಿನೇ ದಿನೇ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗೆಯೇ ದೀಕ್ಷಿತ್‌ ಕುಟುಂಬದವರು ಆಗಾಗ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಮನೆಗೆ ಕೊಂಡೊಯ್ಯುತಿದ್ದರು ಎಂದು ಅಕ್ಕಪಕ್ಕದ ಮನೆಗಳವರು ಹೇಳಿಕೆ ಕೊಟ್ಟಿದ್ದಾರೆ.

ಈ ಕುರಿತು ತ್ರಿ-ಸದಸ್ಯ ತಂಡವನ್ನು ರಚಿಸಲಾಗಿದ್ದು, ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸುವಂತೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು