Monday, June 17, 2024

ಸತ್ಯ | ನ್ಯಾಯ |ಧರ್ಮ

ಪರೀಕ್ಷಾ ಅಕ್ರಮ ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದ KPSC !

ಕೆಇಎ (KEA Exam) ಪರೀಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ನಡೆಸುತ್ತಿದ್ದ ತಂಡ ಸಿಕ್ಕಿಹಾಕಿಕೊಂಡಿರುವ ಹಿನ್ನೆಲೆಯಲ್ಲಿ, ಇಲಾಖೆ ಈ ಬಾರಿಯ ಕೆಪಿಎಸ್ಸಿ (KPSC) ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಕಡ್ಡಾಯವಾಗಿ ಪಾಲಿಸಲೇಬೇಕಾದ ಒಂದಷ್ಟು ನಿಯಮಗಳನ್ನು ಕರ್ನಾಟಕ ಲೋಕ ಸೇವಾ ಆಯೋಗ ಬಿಡುಗಡೆ ಮಾಡಿದೆ.

ಅಂದಹಾಗೆ ನವೆಂಬರ್ 4, 5 ರ ಶನಿವಾರ ಹಾಗೂ ಭಾನುವಾರ ಕರ್ನಾಟಕ ಲೋಕ ಸೇವಾ ಆಯೋಗದ (KPSC) ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು (Exam malpractice) ನಡೆಯದಂತೆ ಇಲಾಖೆಯ ಕಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ತಾಳಿ ಮತ್ತು ಕಾಲುಂಗುರ ಹೊರತು ಪಡಿಸಿ, ಕಿವಿಯೋಲೆ, ಕೈ ಉಂಗುರ ಸೇರಿದಂತೆ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ ಎಂಬ ನಿಯಮ ಜಾರಿ ಮಾಡಿದೆ.

ಪುರುಷ ಅಭ್ಯರ್ಥಿಗಳು ಪೂರ್ತಿ ತೋಳಿನ ಅಂಗಿ, ಜಾಕೆಟ್‌, ಸ್ವೆಟರ್‌ ಗಳನ್ನು ಧರಿಸಿ ಪರೀಕ್ಷಾ ಆವರಣದೊಳಗೆ ಪ್ರವೇಶಿಸುವಂತಿಲ್ಲ. ಜೊತೆಗೆ ಪುರುಷರೂ ಸಹ ಯಾವುದೇ ಅನಗತ್ಯ ಆಭರಣ, ಇನ್ನಿತರ ಉಪಕರಣಗಳನ್ನು ಧರಿಸದೇ ಪರೀಕ್ಷಾ ಆವರಣದ ಒಳಗೆ ಬರಬೇಕು ಎಂದು ಕೆಪಿಎಸ್ಸಿ ಆದೇಶಿಸಿದೆ.

242 ಲೆಕ್ಕ ಸಹಾಯಕರು, 67 ಕಿರಿಯ ಲೆಕ್ಕ ಸಹಾಯಕರು, 47 ಸಹಕಾರ ಸಂಘಗಳ ನಿರೀಕ್ಷಕರುಗಳ ಹುದ್ದೆಗೆ ಪರೀಕ್ಷೆ ನಡೆಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು