Monday, January 12, 2026

ಸತ್ಯ | ನ್ಯಾಯ |ಧರ್ಮ

ಕೆಪಿಟಿಸಿಎಲ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರ ಬಂಧನ

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣವನ್ನು  ಬೆಳಗಾವಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ.

ಬಂಧಿತರು  ಹುಕ್ಕೇರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾದ ಕಮತನೂರ ನಿವಾಸಿ ಆದೇಶ ಈರಪ್ಪ ನಾಗನೂರಿ (26) ಮತ್ತು ಬೈಲಹೊಂಗಲ ತಾಲ್ಲೂಕಿನ ನಾವಲಗಟ್ಟಿ ಗ್ರಾಮದ ಮಡಿವಾಳಪ್ಪ ಬಾಳಪ್ಪ ತೋರಣಗಟ್ಟಿ (36) ಹಾಗೂ ಅದೇ ತಾಲೂಕಿನ ಹೊಸಕೋಟಿಯ ಶಂಕರ ಕಲ್ಲಪ್ಪ ಉಣಕಲ್‌ (30) ಎಂದು ತಿಳಿದು ಬಂದಿದೆ.

ವಿಚಾರಣೆಯಲ್ಲಿ  ಈರಪ್ಪ ಎಂಬುವರು ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿ (ಬಿ.ಕೆ) ಗ್ರಾಮದ ತೋಟದ ಮನೆಯಲ್ಲಿ ಕುಳಿತು ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಹೇಳುತ್ತಿದ್ದರು ಹಾಗೂ ಶಂಕರ್‌ ಮತ್ತು ಬಾಳಪ್ಪ ಇಬ್ಬರೂ, ತಮ್ಮ ತಮ್ಮ ಅಭ್ಯಾರ್ಥಿಗಳಿಗೆ ಬ್ಲೂಟೂತ್‌ ಉಪಕರಣಗಳನ್ನು  ನೀಡುವಂತೆ  ಪರೀಕ್ಷಾ ಕೇಂದ್ರದ ಹೊರಗಿದ್ದ ಸಿಬ್ಬಂದಿಯೊಬ್ಬರ ಕೈಗೆ ಕೊಟ್ಟು ಬಂದಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page