Thursday, June 20, 2024

ಸತ್ಯ | ನ್ಯಾಯ |ಧರ್ಮ

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದದ ಪೂರ್ಣ ವಿವರ

ಅಲಹಾಬಾದ್ ಉಚ್ಚ ನ್ಯಾಯಾಲಯವು ದೀರ್ಘಕಾಲದ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣದಲ್ಲಿ ಗುರುವಾರ, ಜನವರಿ 11ರಂದು ತನ್ನ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿ ಪ್ರಾಥಮಿಕ ಸಮೀಕ್ಷೆ ನಡೆಸುವಂತೆ ಆದೇಶಿಸಿ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

19 ಮೇ 2022ರಂದು, ಮಥುರಾ ನ್ಯಾಯಾಲಯವು ಹಿಂದೂ ದೇವಾಲಯವಾದ ಕತ್ರಾ ಕೇಶವ್ ದೇವ್ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ಇರುವ ಒಂದು ತುಂಡು ಭೂಮಿಯ ಮೇಲೆ ಹೂಡಲಾದ ಮೊಕದ್ದಮೆಯನ್ನು ಮರು-ವಿಚಾರಣೆಗೆ ಅನುಮತಿ ನೀಡಿತು.

13.77 ಎಕರೆ ಜಾಗವು ‘ಜನ್ಮಸ್ಥಾನ’ ಅಥವಾ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಶಾಹಿ ಈದ್ಗಾವನ್ನು ನಿರ್ಮಿಸಲಾಗಿದೆ ಎನ್ನುವ ವಿವಾದವು ಎರಡು ರಚನೆಗಳ ನಡುವೆ ಕಾನೂನು ಮತ್ತು ರಾಜಕೀಯ ಹೋರಾಟವನ್ನು ಹುಟ್ಟುಹಾಕಿವೆ.

ಮಥುರಾ ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಹತ್ತಾರು ಅರ್ಜಿಗಳಲ್ಲಿ ಅಲ್ಲಿಂದ ‘ಮಸೀದಿ ತೆಗೆಯುವುದು’ ಸಾಮಾನ್ಯ ವಿಷಯವಾಗಿದ್ದರೆ, ಇತರ ಮನವಿಗಳಲ್ಲಿ ಪ್ರದೇಶದ ವೀಡಿಯೊ ಸಮೀಕ್ಷೆ, ಪ್ರಾರ್ಥನೆ ಸಲ್ಲಿಸುವ ಹಕ್ಕು ಮತ್ತು ಸ್ಥಳದಲ್ಲಿ ಉತ್ಖನನವನ್ನು ಕೈಗೊಳ್ಳುವ ಬೇಡಿಕೆಯನ್ನು ಒಳಗೊಂಡಿದ್ದವು.

ಹಾಗಿದ್ದರೆ 13.77 ಎಕರೆ ಜಮೀನು ಯಾರದ್ದು?

ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1670 AD ನಲ್ಲಿ ನಿರ್ಮಿಸಲಾಯಿತು ಎಂದು ವರದಿಯಾಗಿದೆ, ಅವನು ವೀರ್ ಸಿಂಗ್ ಕಟ್ಟಿಸಿದ ಕೇಶವದೇವ ದೇವಾಲಯವನ್ನು ಕೆಡವಲು ನಿರ್ಧರಿಸಿದ್ದ. ಈ ವೀರ್ ಸಿಂಗ್ ಓರ್ಚಾದ ರಜಪೂತ ಆಡಳಿತಗಾರ ಮತ್ತು ಮೊಘಲ್ ಮಿತ್ರನಾಗಿದ್ದ ಎನ್ನಲಾಗುತ್ತದೆ.

ಹೀಗಾಗಿ, ಪ್ರಶ್ನೆಯಲ್ಲಿರುವ ಪ್ರದೇಶವು ಕೃಷಿಯೇತರ ಸರ್ಕಾರಿ ಭೂಮಿಯಾಗಿತ್ತು. ಮೊಘಲರಿಂದ ಮರಾಠರಿಗೆ ಅವರಿಂದ ಬ್ರಿಟಿಷರಿಗೆ, ಈ 13.77 ಎಕರೆ ಭೂಮಿ 1944 ರವರೆಗೆ ಅನೇಕ ಕೈಗಳಿಗೆ ಹಾದುಹೋಗಿದೆ. ನಂತರ ಜುಗಲ್ ಕಿಶೋರ್ ಬಿರ್ಲಾ ಎನ್ನುವವರು 13,400 ರೂಗಳಿಗೆ ಈ ಭೂಮಿಯನ್ನು ಖರೀದಿಸಿದರು ಮತ್ತು ದೇವಾಲಯದ ಮಾಲೀಕತ್ವದ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡ ಶ್ರೀ ಕೃಷ್ಣ ಜನ್ಮ ಭೂಮಿ ಎನ್ನುವ ಹೆಸರಿನ ಟ್ರಸ್ಟ್ ಸ್ಥಾಪಿಸಿದರು.

ನಂತರ 1956ರಲ್ಲಿ, ದೇವಾಲಯದ ವ್ಯವಹಾರಗಳನ್ನು ನಿರ್ವಹಿಸಲು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘವನ್ನು ಸ್ಥಾಪಿಸಲಾಯಿತು. ಅದರ ಹೆಸರನ್ನು ನಂತರ ಶ್ರೀ ಕೃಷ್ಣ ಜನ್ಮ‌ಸ್ಥಾನ್ ಸೇವಾ ಸಂಸ್ಥಾನ ಎಂದು ಬದಲಾಯಿಸಲಾಯಿತು.

ಇದೆಲ್ಲದರ ನಡುವೆ 1968ರಲ್ಲಿ ನಡೆದ ‘ರಾಜಿ ಒಪ್ಪಂದ’ವು ಮಸೀದಿಯ ನಿರ್ವಹಣೆಯ ಹಕ್ಕುಗಳನ್ನು ಈದ್ಗಾ ಸಮಿತಿಗೆ ನೀಡಿತು. ಆದರೆ ದೇವಾಲಯದ ಟ್ರಸ್ಟ್ ಭೂಮಿಯ ಮಾಲೀಕತ್ವವನ್ನು ಹೊಂದಿರುತ್ತದೆ ಎಂದು ಮಾತುಕತೆಯಾಗಿತ್ತು ಎನ್ನಲಾಗುತ್ತದೆ.

ಷಾ ಈದ್ಗಾ ಮಸೀದಿಯ ಮೇಲೆ ಹಕ್ಕು ಸಾಧಿಸಲು ಟೆಂಪಲ್ ಟ್ರಸ್ಟ್‌ಗೆ ಕಾನೂನುಬದ್ಧ ಹಕ್ಕಿದೆ ಎಂದು ಒಪ್ಪಂದವು ಹೇಳುತ್ತದೆ. ಆದರೆ ಅರ್ಜಿದಾರರು 1968ರ ಒಪ್ಪಂದದ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ್ದರು.

ಆದಾಗ್ಯೂ, 1968 ರಲ್ಲಿ, ‘ರಾಜಿ ಒಪ್ಪಂದ’ವು ಮಸೀದಿಯ ನಿರ್ವಹಣೆಯ ಹಕ್ಕುಗಳನ್ನು ಈದ್ಗಾ ಸಮಿತಿಗೆ ನೀಡಿದಾಗ ದೇವಾಲಯದ ಟ್ರಸ್ಟ್ ಭೂಮಿಯ ಮಾಲೀಕತ್ವವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ವರದಿಯಾಗಿದೆ.

ಷಾ ಈದ್ಗಾ ಮಸೀದಿಯ ಮೇಲೆ ಹಕ್ಕು ಸಾಧಿಸಲು ದೇವಸ್ಥಾನದ ಟ್ರಸ್ಟ್‌ಗೆ ಕಾನೂನುಬದ್ಧ ಹಕ್ಕಿದೆ. ಆದರೆ ಈಗ ಅರ್ಜಿದಾರರು 1968ರ ಒಪ್ಪಂದದ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು