Friday, June 14, 2024

ಸತ್ಯ | ನ್ಯಾಯ |ಧರ್ಮ

ಕಂಗನಾ ಕಪಾಳಮೋಕ್ಷ ಪ್ರಕರಣ: ಕುಲ್ವಿಂದರ್‌ ಕೌರ್‌ ಆರೆಸ್ಟ್

ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್‌ ಅವರಿಗೆ ಕಪಾಳಕ್ಕೆ ಹೊಡೆದ ಆರೋಪದ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಇಲಾಖೆ ಅಮಾನತುಗೊಳಿಸಿದೆ. ನಂತರ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ. ಬಿಜೆಪಿ ನಾಯಕಿ ಮತ್ತು ಮಂಡಿ ಲೋಕಸಭಾ ಸಂಸದೆ ಕಂಗನಾ ರನೌತ್ ಚಂಡೀಗಢದಿಂದ ದೆಹಲಿಗೆ ಮರಳಲು ಚಂಡೀಗಢ ವಿಮಾನ ನಿಲ್ದಾಣವನ್ನು ಪ್ರವೇಶಿಸಿಸಿದ್ದರು. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮುಗಿಸಿ ವಿಮಾನ ಹತ್ತಲು ತೆರಳುತ್ತಿದ್ದ ಕಂಗನಾಗೆ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ.

ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಒಂದು ಸಾವಿರ ರೂಪಾಯಿಗಳ ಆಸೆಗಾಗಿ ಬಂದಿದ್ದಾರೆ ಎಂದು ನಟಿ, ಸಂಸದೆ ಕಂಗನಾ ಈ ಹಿಂದೆ ಹೇಳಿಕೆ ನೀಡಿದ್ದರು. ಆ ಪ್ರತಿಭಟನೆಯಲ್ಲಿ ಕುಲ್ವಿಂದರ್‌ ಕೌರ್‌ ಅವರ ತಾಯಿಯೂ ಭಾಗವಹಿಸಿದ್ದು, ಕಂಗನಾ ಹೇಳಿಕೆ ಕುಲ್ವಿಂದರ್‌ ಅವರಲ್ಲಿ ಆಕ್ರೋಶ ಮೂಡಿಸಿತ್ತು. ಮೊನ್ನೆ ವಿಮಾನ ನಿಲ್ದಾಣದಲ್ಲಿ ಕಂಗನಾ ಎದುರಾದಾಗ ಆ ಘಟನೆ ನೆನಪಾಗಿ ಅವರು ಆಕೆ ಕಪಾಳಕ್ಕೆ ಹೊಡೆದಿದ್ದಾರೆ.

ಘಟನೆಯ ನಂತರ ದೇಶಾದ್ಯಂತ ಈ ಕುರಿತು ಚರ್ಚೆ ಆರಂಭವಾಗಿದೆ. ಸಂಗೀತ ನಿರ್ದೇಶಕ ವಿಶಾಲ್‌ ದದ್ಲಾನಿ ಕುಲ್ವಿಂದರ್‌ ಅವರಿಗೆ ಕೆಲಸದ ಆಫರ್‌ ನೀಡಿದ್ದರೆ, ರೈತ ಸಂಘಟನೆಗಳು ಅವರಿಗೆ ನೈತಿಕ ಬೆಂಬಲ ಘೋಷಿಸಿವೆ.

Related Articles

ಇತ್ತೀಚಿನ ಸುದ್ದಿಗಳು