Friday, September 27, 2024

ಸತ್ಯ | ನ್ಯಾಯ |ಧರ್ಮ

ಸಿದ್ಧಾಪರಾಧ ಸಾಬೀತಿಗೆ ಇನ್ನು ಒಂದೇ ಹೆಜ್ಜೆ ಬಾಕಿ! ಕರ್ಮ ಹಿಟ್ಸ್‌ ಬ್ಯಾಕ್‌ ಅಂದರೆ ಇದೇ ಅಲ್ಲವೇ ಮು‍ಖ್ಯಮಂತ್ರಿಗಳೇ? ಎಚ್‌ಡಿಕೆ ಪ್ರಶ್ನೆ

ಬೆಂಗಳೂರು: ಒಂದು ಸ್ಪಷ್ಟ ತಿರುವಿಗೆ ಇನ್ನೂ ಬಾರದ ಮುಡಾ ಹಗರಣದ ವಿಷಯದಲ್ಲಿ ಕೆಸರೆರಚಾಟ ಮುಂದುವರೆದಿದೆ. ಬಿಜೆಪಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜೀನಾಮೆಗೆ ಹೋದಲ್ಲಿ ಬಂದಲ್ಲಿ ಆಗ್ರಹಿಸುತ್ತಿದೆ. ಇನ್ನೊಂದು ಕಡೆ ನಾನು ಇದ್ದೇನೆ ಎನ್ನುವಂತೆ ಆಗಾಗ ಕುಮಾರಸ್ವಾಮಿ ಕೂಡಾ ಸದ್ದು ಮಾಡುತ್ತಿದ್ದಾರೆ.

ಲೇಟೆಸ್ಟ್‌ ಆಗಿ ವಿಷಯದ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯಿಸಿ ಹಲವು ಪನ್‌ ವರ್ಡ್‌ಗಳನ್ನು ಸೃಷ್ಟಿಸುವ ಮೂಲಕ ತನ್ನ ಅಕ್ಷರಗಳೊಂದಿಗೆ ಆಡುವ ಚಾಕಚಕ್ಯತೆಯನ್ನೂ ಅವರು ಮೆರೆದಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾಯುಕ್ತವನ್ನು ಬರಕಾಸ್ತು ಮಾಡಿ ಎಸಿಬಿ ಎನ್ನುವ ಸಂಸ್ಥೆಯನ್ನು ತಂದಿದ್ದರು. ಆದರೆ ಅದನ್ನು ಕೋರ್ಟು ಅಮಾನ್ಯಗೊಳಿಸಿ ಲೋಕಾಯುಕ್ತವನ್ನು ಮತ್ತೆ ಸ್ಥಾಪಿಸುವಂತೆ ಹೇಳಿತ್ತು.

ಈಗ ಅದನ್ನೇ ಹೇಳಿರುವ ಕುಮಾರಸ್ವಾಮಿ ನೀವು ಯಾವ ಲೋಕಾಯುಕ್ತವನ್ನು ತಂದಿರೋ ಅದೇ ಇವತ್ತು ನಿಮ್ಮನ್ನು ಮುಡಾ ವಿಷಯದಲ್ಲಿ ಕಾಪಾಡುತ್ತಿದೆ ಎಂದಿದ್ದಾರೆ. ಇದನ್ನೇ ನಾವು ಕರ್ಮ ಹಿಟ್ಸ್‌ ಬ್ಯಾಕ್‌ ಎನ್ನುವುದು ಎಂದೂ ಹೇಳಿದ್ದಾರೆ.

ಅವರು ತಮ್ಮ ಟ್ವೀಟಿನಲ್ಲಿ “ಶ್ರೀಮಾನ್ ಸಿದ್ದರಾಮಯ್ಯನವರೇ.. ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಲೇಬೇಕು. ಅಂದು: ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ! ಇಂದು: ಮೂಡಾಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇsss ಗತಿ!!

Karma Hit back ಎಂದರೇ ಇದೇ ಅಲ್ಲವೇ ಸಿದ್ಧರಾಮಯ್ಯನವರೇ? ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು.. ನಿಮಗೂ ಭಯವಿದೆsss!! ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ?” ಎಂದು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page