Tuesday, July 1, 2025

ಸತ್ಯ | ನ್ಯಾಯ |ಧರ್ಮ

ಪೆನ್ ಡ್ರೈವ್ ಪಿತಾಮಹ ಹೆಚ್.ಡಿ.ಕುಮಾರಸ್ವಾಮಿಗೆ ಬುದ್ದಿ ಭ್ರಮಣೆಯಾಗಿದೆ : ಸಚಿವ ಕೆ.ಎನ್.ರಾಜಣ್ಣ

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರೇ ಪೆನ್ ಡ್ರೈವ್ ಪಿತಾಮಹ. ಎಲ್ಲಾ ಕಡೆಗೂ ಜೇಬಿನಿಂದ ತಗೆದು ತೋರಿಸ್ತಿದ್ದದ್ದು ಅವರೇ. ಈಗ ಅವರ ಕುಟುಂಬದ್ದೇ ಪೆನ್ ಡ್ರೈವ್ ಆಚೆ ಬಂದಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.

ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ‘ಪೆನ್ ಡ್ರೈವ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಕುಮಾರಸ್ವಾಮಿ ಅವರಿಂದಲೇ ಕಲಿಯಬೇಕು, ಈಗ ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೊಗಳಿದ್ದ ಪೆನ್ ಡ್ರೈವ್ ಹಂಚಿದ್ದು ದೊಡ್ಡ ಅಪರಾಧ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ ವಿಡಿಯೊ ಹಂಚಿದವರ ವಿರುದ್ಧ ಏಕೆ ಕ್ರಮ ಆಗಲಿಲ್ಲ? ಆ ವಿಡಿಯೊದಲ್ಲಿ ದಲಿತ ಹೆಣ್ಣು ಮಗಳಿದ್ದಳು ಅಲ್ಲವೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ವಾಕ್ಸಮರದಲ್ಲಿ ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಕುರಿತಾಗಿ ಮಾತನಾಡಿದ ಕುಮಾರಸ್ವಾಮಿಗೆ ತಿರುಗೇಟು ನೀಡುತ್ತಾ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಾವಿನ ವಿಚಾರವನ್ನು ಈಗ ಪ್ರಸ್ತಾಪಿಸುವುದು ಬೇಡ. ಅಲ್ಲಿ ಏನು ನಡೆದಿತ್ತು ಎಂಬುದು ಯಾರಿಗೆ ಗೊತ್ತು? ಆ ವಿಚಾರ ಮಾತನಾಡಿ ಯಾರನ್ನೂ ನೋಯಿಸುವುದು ಬೇಡ. ನಮಗೂ ಮಾತನಾಡಲು ಸಾವಿರ ವಿಚಾರಗಳಿವೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page