Saturday, April 19, 2025

ಸತ್ಯ | ನ್ಯಾಯ |ಧರ್ಮ

ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ಬಜರಂಗ್ ಪುನಿಯಾ

ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟ 2022ರ ಫ್ರೀಸ್ಟೈಲ್ ಕುಸ್ತಿ ಫೈನಲ್ ಸ್ಪರ್ಧೆಯಲ್ಲಿ ಭಾರತದ ಬಜರಂಗ್ ಪುನಿಯಾ, ಕೆನಾಡದ ಲಾಚ್ಲಾನ್ ಮೆಕ್‌ನೀಲ್ ಅವರನ್ನು ಸೋಲಿಸುವುದರ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.

ಅದೇ ದಿನ ಕೆಲವು ನಿಮಿಷಗಳ ನಂತರ ಮಹಿಳೆಯರ 62 ಕೆಜಿ ವಿಭಾಗದಲ್ಲಿ, ಭಾರತದ ಸಾಕ್ಷಿ ಮಲ್ಲಿಕ್ ಅವರು ಕೆನಾಡದ ಅನಾ ಗೊನ್ಜಾಲೆಜ್ ಅವರನ್ನು ಹಿಂದಿಕ್ಕಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಮತ್ತು 86 ಕೆಜಿ ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಸೋಲಿಸುವ ಮೂಲಕ ಭಾರತದ ದೀಪಕ್ ಪುನಿಯಾ ಭಾರತಕ್ಕೆ ಕುಸ್ತಿಯಲ್ಲಿ ಮೂರನೇ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page