Saturday, June 29, 2024

ಸತ್ಯ | ನ್ಯಾಯ |ಧರ್ಮ

ಲೈಂಗಿಕ ಕಿರುಕುಳ: ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಗೆ ಸಿಬಿಐ ವಿಚಾರಣೆ

ನವದೆಹಲಿ: ಕೇರಳ ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಗೆ ನೀಡಿದ್ದರು ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ರವರನ್ನು ಸಿಬಿಐ ಸುದೀರ್ಘ ವಿಚಾರಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಸಿಬಿಐ ಮೂಲಗಳು ಈ ಮಾಹಿತಿ ಯನ್ನು ಹೊರಹಾಕಿವೆ.

2012ರಲ್ಲಿ ಬೆಳಕಿಗೆ ಬಂದ ಸೋಲಾರ್ ಎನರ್ಜಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಒಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಕೇರಳ ಕ್ರ್ಯೆಂ ಬ್ರಾಚ್ ತನಿಖೆ ನಡೆಸುತ್ತಿತ್ತು.ಈ ಪ್ರಕರಣವು ಕೇರಳದಲ್ಲಿ ಸಾಕಷ್ಟು ಗುಲ್ಲೆಬ್ಬಿಸಿದ್ದರಿಂದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕಳೆದ ವರ್ಷ ಇದನ್ನು ಸಿಬಿಐ ಗೆ ಹಸ್ತಾಂತರಿಸಿದ್ದರು.

ಮಹಿಳೆಯ ಹೇಳಿಕೆಯ ಮೇರೆಗೆ ಕೆ.ಸಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಹಿಬಿ ಇದನ್, ಮಾಜಿ ಸಚಿವ ಎಪಿ ಅನಿಲ್ ಕುಮಾರ್, ಸಂಸದ ಆಡೂರ್ ಪ್ರಕಾಶ್ ಹಾಗೂ ಬಿಜೆಪಿ ಮುಖಂಡ ಎಪಿ ಅಬ್ದುಲ್ ಕುಟ್ಟಿ ಸೇರಿದಂತೆ ಒಟ್ಟು ಆರು ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಕೆ.ಸಿ ವೇಣುಗೋಪಾಲ್ ಅವರು ಕರ್ನಾಟಕ ಕಾಂಗ್ರೆಸ್ ನ ಮಾಜಿ ಉಸ್ತುವಾರಿಯಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು