ಮರೆಯದಿರಿ ಪ್ಯಾನ್‌ ಕಾರ್ಡ್‌ ಆಧಾರ್‌ ಲಿಂಕ್‌ ಮಾಡಲು ಉಳಿದಿರುವುದು ಇನ್ನು ಒಂದೇ ದಿನ

ಹೊಸದೆಹಲಿ: ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇದ್ದಲ್ಲಿ ಅದನ್ನು ಇಂದು ಅಥವಾ ನಾಳೆ ಆಧಾರ್‌ ಕಾರ್ಡಿನೊಂದಿಗೆ ಲಿಂಕ್‌ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಪ್ಯಾನ್‌ ಕಾರ್ಡನ್ನು ಆದಾಯ ತೆರಿಗೆ ಇಲಾಖೆ ನಿಷ್ಕ್ರಿಯಗೊಳಿಸಲಿದೆ.

ಸರ್ಕಾರದ ಈ ಕಾನೂನು ಜನಸಾಮಾನ್ಯರಲ್ಲಿ ತಲೆ ನೋವು ತಂದಿದ್ದು ಸಾಕಷ್ಟು ಜನರಿಗೆ ಲಿಂಕ್‌ ಮಾಡಿಸಲು 1000 ರೂ ಮತ್ತು ಸೈಬರ್‌ ಕೇಂದ್ರದವರಿಗೆ 250 ರೂಗಳ ತನಕ ನೀಡಬೇಕಿರುವುದು ಸಂಕಷ್ಟಕ್ಕೆ ಈಡು ಮಾಡಿದೆ. ಸಣ್ಣ ಸಂಪಾದನೆಯ ಜನರಿಗೆ ಅವರ ಬದುಕಿನಲ್ಲಿ ಕನಿಷ್ಟ ಉಪಯೋಗ ಕಾಣುವ ಪ್ಯಾನ್‌ ಕಾರ್ಡಿಗೆ ಇಷ್ಟು ಖರ್ಚು ಮಾಡುವುದು ಕಷ್ಟ.

ಈಗೀಗ ಬ್ಯಾಂಕ್‌ ಖಾತೆ ತೆರೆಯಲು ಹಾಗೂ ಇನ್ನಿತರ ಕಾರ್ಯಗಳಿಗೆ ಪ್ಯಾನ್‌ ಕಾರ್ಡ್‌ ಅನಿವಾರ್ಯವಾಗಿರುವುದರಿಂದಾಗಿ ಅದನ್ನು ಲಿಂಕ್‌ ಮಾಡದೆ ಹೋದರೆ ಕಾರ್ಡ್‌ ನಿಷ್ಕ್ರಿಯವಾಗುತ್ತದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು