Wednesday, October 30, 2024

ಸತ್ಯ | ನ್ಯಾಯ |ಧರ್ಮ

ಲಾರೆನ್ಸ್ ಬಿಷ್ಣೋಯ್ ಸಂದರ್ಶನ: 7 ಪೊಲೀಸ್ ಅಧಿಕಾರಿಗಳ ಅಮಾನತು

ಚಂಡೀಗಢ: ಪಂಜಾಬ್‌ನಲ್ಲಿ ಬಂಧನದಲ್ಲಿರುವಾಗ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದ ಕುರಿತು ರಾಜ್ಯದ ಗೃಹ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಸಂದರ್ಶನದ ತನಿಖೆ ನಡೆಸಿದ ಪಂಜಾಬ್ ಗೃಹ ಇಲಾಖೆ, ಸಂದರ್ಶನಕ್ಕೆ ಸಹಕರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ.

ಅದರ ಭಾಗವಾಗಿ, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್ಪಿ) ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ ಈ ಸಂದರ್ಶನ ನಡೆದಿರುವುದು 2023ರಲ್ಲಿ ಪಂಜಾಬ್ ಜೈಲಿನಲ್ಲಿ ಕೈದಿಯಾಗಿದ್ದಾಗ ಎಂಬುದು ಗಮನಾರ್ಹ. ‌

ಈ ಸಂದರ್ಶನದಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಪಾತ್ರದ ಕುರಿತು ಪ್ರಶ್ನಿಸಲಾಗಿತ್ತು. ಸಂದರ್ಶನದ ಪ್ರಸಾರದ ನಂತರ, ಸೆಪ್ಟೆಂಬರ್, 2023ರಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು . ಪೊಲೀಸ್ ಕಸ್ಟಡಿಯಲ್ಲಿರುವ ಖೈದಿಯ ಸಂದರ್ಶನವನ್ನು ಹೇಗೆ ಆಯೋಜಿಸಲಾಯಿತು ಎಂದು ಕೋರ್ಟ್‌ ಪ್ರಶ್ನಿಸಿತ್ತು.

ಅಲ್ಲದೆ ಕೋರ್ಟ್ ಈ ಘಟನೆಯು ಪಂಜಾಬ್ ಜೈಲು ವ್ಯವಸ್ಥೆಯಲ್ಲಿನ ಭದ್ರತಾ ಪ್ರೋಟೋಕಾಲ್‌ಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ‌ ಎಂದೂ ಹೇಳಿತ್ತು. ನಂತರ ಪೊಲೀಸ್‌ ಇಲಾಖೆ ಈ ಕುರಿತು ತನಿಖೆ ಕೈಗೆತ್ತಿಕೊಂಡಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page