ಬೇಲೂರು : ವಕೀಲರು ಮನವಿ ಸಲ್ಲಿಸಲು ಬಂದಂತಹ ಸಂದರ್ಭದಲ್ಲಿ ಅಸಡ್ಡೆ ತೋರಿದ ಜಿಲ್ಲಾಧಿಕಾರಿ ಗಳು ಕೂಡಲೇ ವಕೀಲ ಸಂಘದ ಬಳಿ ಕ್ಷಮಾಪಣೆ ಕೇಳಬೇಕು ಮತ್ತು ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಜಿಲ್ಲಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು
ವಕೀಲರ ಸಂಘದ ಅಧ್ಯಕ್ಷ ಸಿಎಂ ಪೃಥ್ವಿ .ಸುದ್ದಿಗಾರ ರೊಂದಿಗೆ ಮಾತನಾಡಿ, ಉರಿಲಿಂಗ ಪೆದ್ದಿಮಠದ ಜ್ನಾನಪ್ರಕಾಶ್ ಸ್ವಾಮೀಜಿ ಹೇಳಿಕೆಗೆ ನಮ್ಮ ವಿರೋಧವಿದೆ. ಅವರ ವಿರುದ್ಧ ಕೂಡಲೇ ಸೂಕ್ರ ಕ್ರಮಕೈಗೊಳ್ಳಬೇಕು. ಇವರ ವಿರುದ್ಧ ನಮ್ಮ ಜಿಲ್ಲಾ ವಕೀಲರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದಂ ತಹ ಸಂದರ್ಭದಲ್ಲಿ ಜಿಲ್ಲಾಧಿ ಕಾರಿಗಳ ನಡುವೆ ತುಂಬಾ ಬೇಸರ ತಂದಿದ್ದು ಇಂದಿನಿಂದ ನಾವು ನ್ಯಾಯಾಲಯದ ಕಲಾಪವನ್ನು ನಿಲ್ಲಿಸಿ ಜ್ಞಾನಪ್ರಕಾಶ್ ಸ್ವಾಮೀಜಿಯ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಆದರೆ ನಮ್ಮ ವಕೀಲರ ವಿರುದ್ಧ ಅವಹೇಳನ ಕಾರಿಯಾಗಿ ಮಾತನಾಡಿದ ಅವರ ವಿರುದ್ಧ ಮತ್ತು ಸಂವಿಧಾನದ ಹೇಳಿಕೆಯನ್ನು ವಿರೋಧಿಯಾಗಿ ನಮ್ಮ ವಿರುದ್ಧ ಮಾತನಾಡಿದ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಡೆ ಇದಕ್ಕೂ ಕೂಡಲೇ ಕ್ಷಮಾಪಣೆಯನ್ನು ಕೇಳಬೇಕು ಮತ್ತು ಅವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಾವು ಅನಿದಿಷ್ಟ ಅವಧಿಯವರೆಗೆ ನ್ಯಾಯಾ ಲಯಕ್ಕೆ ತೆರಳದೆ ಹೊರಗು ಳಿದು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಈಗಾಗಲೇ ನಾವು ತಾಲೂಕು ದಂಡಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿ ಹಾಗೂ ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ವಿರುದ್ಧ ದೂರನ್ನು ಸಲ್ಲಿಸುತ್ತಿ ದ್ದೇವೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ . ಪ್ರಧಾನ ಕಾರ್ಯ ದರ್ಶಿ ಪುಟ್ಟಸ್ವಾಮಿಗೌಡ. ನಟರಾಜ್.ಲಿಂಗೇಶ್ .ಮಹೇಶ್. ಸತೀಶ್. ಜೆಟಿ ಪ್ರಕಾಶ್. ಚಂದ್ರು ದಿಲೀಪ್. ಪಂಚಾಕ್ಷರಿ. ಗಿರೀಶ್ .ಪ್ರದೀಪ್. ಸುನಿಲ್. ಬ್ರಮರಾಂಬಿಕೆ. ಕಿರಣ್. ಸೇರಿದಂತೆ ಇತರ ಹಾಜರಿದ್ದರು
