Home ರಾಜಕೀಯ ಮಂಡ್ಯಕ್ಕೆ ಕಾಲಿಟ್ಟ ಬಿಜೆಪಿ “ಜನಾಕ್ರೋಶ”; ಕೇಂದ್ರದ ಬೆಲೆ ಏರಿಕೆ ಬಗ್ಗೆಯೂ ರಾಜ್ಯ ನಾಯಕರು ಮಾತಾಡಲಿ :...

ಮಂಡ್ಯಕ್ಕೆ ಕಾಲಿಟ್ಟ ಬಿಜೆಪಿ “ಜನಾಕ್ರೋಶ”; ಕೇಂದ್ರದ ಬೆಲೆ ಏರಿಕೆ ಬಗ್ಗೆಯೂ ರಾಜ್ಯ ನಾಯಕರು ಮಾತಾಡಲಿ : ಡಿಕೆಶಿ

0

ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮೈಸೂರಿನ ನಂತರ ಮಂಡ್ಯದಲ್ಲಿ ಯಾತ್ರೆ ಪ್ರಾರಂಭವಾಗಲಿದೆ.

ಬೆಳಿಗ್ಗೆ 10:30ಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿಯಿಂದ ಜನಾಕ್ರೋಶ ಯಾತ್ರೆ ಆರಂಭವಾಗಿ, ಸಿಲ್ವರ್ ಜೂಬ್ಲಿ ಪಾರ್ಕ್ ವರೆಗೆ ಈ ಒಂದು ಜನಾಕ್ರೋಶ ಯಾತ್ರೆ ಸಾಗಲಿದೆ. ಸೋಮವಾರ ಮೈಸೂರಿನಲ್ಲಿ ನಡೆದ ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಚಾಲನೆ ನೀಡಿದ್ದರು.

ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಪಕ್ಷ ನಾಯಕರಾದ ಆರ್ ಅಶೋಕ, ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಜನಾಕ್ರೋಶ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಸಹ ಇಂದು ಮಂಡ್ಯದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತ ಕೇಂದ್ರ ಸರ್ಕಾರದಿಂದಲೂ ಬೆಲೆ ಏರಿಕೆ ವಿಚಾರವಾಗಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮಾತನಾಡಿರುವ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರ ಸಹ ಬೆಲೆ ಏರಿಕೆ ಮಾಡಿದ್ದರ ಹಿನ್ನೆಲೆ, ಬಿಜೆಪಿ ನಾಯಕರು ಕೇಂದ್ರ ನಾಯಕರ ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸಬೇಕು. ಬಿಜೆಪಿ ನಾಯಕರು ತಮ್ಮ ಹೋರಾಟವನ್ನು ಮುಂದುವರಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಜನರಿಗೆ ತಿಳಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ನಿನ್ನೆ ಸಹ ಕೇಂದ್ರ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ಗ್ಯಾಸ್ ಬೆಲೆ ರೂ.50 ಹಾಗೂ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಸುಂಕ ಹೆಚ್ಚಳ ಮಾಡಿದೆ. ಇದೂ ಸಹ ಜನಸಾಮಾನ್ಯರಿಗೆ ಮಾಡಿದ ಹೊರೆ ಆಗಿದ್ದರಿಂದ ಬಿಜೆಪಿ ರಾಜ್ಯ ನಾಯಕರು ಈ ಬಗ್ಗೆಯೂ ಜನಾಕ್ರೋಶ ವ್ಯಕ್ತಪಡಿಸಲಿ ಎಂದು ಹೇಳಿದ್ದಾರೆ.

You cannot copy content of this page

Exit mobile version