ಹೊಸದೆಹಲಿ: ಲೆಬನಾನ್ ನಲ್ಲಿ ನಡೆದ ಪೇಜರ್ ಸ್ಫೋಟ ಪ್ರಕರಣದಲ್ಲಿ ಕೇರಳದ ರಿನ್ಸನ್ ಜೋಸ್ (37) ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಇವರು ಕೇರಳದ ವಯನಾಡ್ ಮೂಲದವರು.
ಪ್ರಸ್ತುತ ನಾರ್ವೇಜಿಯನ್ ಪ್ರಜೆ. ಅವರು ಬಲ್ಗೇರಿಯನ್ ಕಂಪನಿ ನಾರ್ಟಾ ಗ್ಲೋಬಲ್ ಲಿಮಿಟೆಡ್‌ನ ಏಕೈಕ ಮಾಲೀಕರಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಇದೇ ಕಂಪನಿಯು ಹಿಜ್ಬುಲ್ಲಾ ಭಯೋತ್ಪಾದಕರ ಮೇಲಿನ ದಾಳಿಯಲ್ಲಿ ಬಳಸಲಾದ ಪೇಜರ್‌ಗಳನ್ನು ಪೂರೈಸಿದೆ. ಬಲ್ಗೇರಿಯಾ ಈ ಬಗ್ಗೆ ತನಿಖೆ ನಡೆಸುತ್ತಿದೆ.
ರಿನ್ಸನ್ ಲೆಬನಾನ್ ಸ್ಫೋಟದಲ್ಲಿ ಭಾಗಿಯಾಗಿರುವ ಬಗ್ಗೆ ಸುದ್ದಿ ಬಂದ ನಂತರ ಆತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಯನಾಡ್ ಉಪ ಎಸ್ಪಿ (ವಿಶೇಷ ಬ್ರಾಂಚ್) ಪಿಎಲ್ ಶಿಜು ಹೇಳಿದ್ದಾರೆ.
ಲೆಬನಾನ್‌ನಾದ್ಯಂತ ನಡೆದ ಪೇಜರ್ ಸ್ಫೋಟಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 3,000 ಜನರು ಗಾಯಗೊಂಡಿದ್ದರು. ರಿನ್ಸನ್ ಪಾಂಡಿಚೇರಿ ವಿಶ್ವವಿದ್ಯಾನಿಲಯದಲ್ಲಿ MBA ಮಾಡಿದರು. ಅವರು ಓಸ್ಲೋ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿಯಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು.