Saturday, September 20, 2025

ಸತ್ಯ | ನ್ಯಾಯ |ಧರ್ಮ

ಅವಿಶ್ವಾಸ ಗೊತ್ತುವಳಿ ಅಂಗೀಕಾರದ ನಂತರ ಶಾಸಕಾಂಗದ ಕೆಲಸ ನಡೆಯಬಾರದು: ರಾಘವ್ ಚಡ್ಡಾ

ಹೊಸದಿಲ್ಲಿ: ಅವಿಶ್ವಾಸ ಗೊತ್ತುವಳಿ ಅಂಗೀಕಾರವಾದ ಬಳಿಕ ಲೋಕಸಭೆಯಲ್ಲಿ ಯಾವುದೇ ಶಾಸಕಾಂಗ ವ್ಯವಹಾರ ನಡೆಯಬಾರದು ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ. ಮಣಿಪುರ ವಿಷಯದ ಬಗ್ಗೆ ನಿರಂತರ ಗದ್ದಲದ ನಡುವೆ ಕೆಳಮನೆಯಲ್ಲಿ ಮಸೂದೆಗಳನ್ನು ಅಂಗೀಕರಿಸುತ್ತಿರುವ ಕುರಿತು ಮಾತನಾಡಿದ ಚಡ್ಡಾ, ವಿಶ್ವಾಸ ಮತವನ್ನು ತೆಗೆದುಕೊಳ್ಳುವವರೆಗೆ ಯಾವುದೇ ಮಸೂದೆಯನ್ನು ಚರ್ಚಿಸದಂತೆ ಸ್ಪೀಕರ್‌ಗೆ ಮನವಿ ಮಾಡುವುದಾಗಿ ಹೇಳಿದರು.

ಅವಿಶ್ವಾಸ ಗೊತ್ತುವಳಿಯನ್ನು ಲೋಕಸಭಾ ಸ್ಪೀಕರ್ ಅಂಗೀಕರಿಸಿದ ನಂತರ ಸಂಸತ್ತಿನಲ್ಲಿ ಯಾವುದೇ ವಿಧೇಯಕ ಮಂಡಿಸುವುದಿಲ್ಲ, ಆದರೆ ಸಂಸತ್ತಿನಲ್ಲಿ ಹಲವು ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಕುರಿತು ಸಂಸತ್ತಿನ ಸಭಾಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ಮಣಿಪುರದ ಜನರಿಗೆ ಬೆಂಬಲ ಸೂಚಿಸುವ ಸಲುವಾಗಿ ಇಂಡಿಯಾ ಮಿತ್ರಕೂಟವು ಮಣಿಪುರಕ್ಕೆ ಭೇಟಿ ನೀಡಲಿದೆ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಣಿಪುರದ ವೈರಲ್ ವಿಡಿಯೋ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಿದ ಕೇಂದ್ರದ ಕುರಿತು ಎಎಪಿ ನಾಯಕ, 85 ದಿನಗಳ ನಂತರ ಪ್ರಕರಣವನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಲು ಇದು ತುಂಬಾ ಕಡಿಮೆ ಮತ್ತು ತಡವಾಗಿದೆ ಎಂದು ಹೇಳಿದರು. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿದ ಘಟನೆಯ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿದೆ.

ಜುಲೈ 20ರಂದು ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ಇದನ್ನು ನೋಡಿ ತೀವ್ರ ದುಃಖವಾಗಿದೆ” ಮತ್ತು ಹಿಂಸಾಚಾರವನ್ನು ನಡೆಸಲು ಮಹಿಳೆಯರನ್ನು ಅಸ್ತ್ರವಾಗಿ ಬಳಸುವುದು “ಯಾವುದೇ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಹೇಳಿತ್ತು. ಜೊತೆಗೆ ಕೇಂದ್ರ ಸರ್ಕಾರಕ್ಕೂ ತೀವ್ರವಾದ ಎಚ್ಚರಿಕೆಯನ್ನು ನೀಡಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page