Wednesday, July 23, 2025

ಸತ್ಯ | ನ್ಯಾಯ |ಧರ್ಮ

ಚಿರತೆ ದಾಳಿ : ಮೃತರ ಕುಟುಂಬಕ್ಕೆ 15 ಲಕ್ಷ.ರೂ ಪರಿಹಾರ

ಬೆಂಗಳೂರು : ಇತ್ತೀಚೆಗೆ ಮೈಸೂರು ಭಾಗಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ದಾಳಿಗೆ ಬಲಿಯಾದ ಇಬ್ಬರು ಕುಟುಂಬಗಳಿಗೆ 15 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರದಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಇತ್ತೀಚೆಗೆ ಹಲವು ಭಾಗಗಳಲ್ಲಿ ಆನೆ ಚಿರತೆಗಳು ತನ್ನ ಆಹಾರಕ್ಕಾಗಿ ಕಾಡಿಂದ ನಾಡಿಗೆ ಬರುವುದು ಹೆಚ್ಚಾಗುತ್ತಲೇ ಇದ್ದು, ಮನುಷ್ಯರ ಮೇಲೆ ದಾಳಿ ಹೆಚ್ಚಾಗುತ್ತಿವೆ. ಆನೆ ದಾಳಿಯ ಸಂತ್ರಸ್ತರಿಗೆ ಕೊಡುವ ಪರಿಹಾರವನ್ನೇ ಚಿರತೆ ದಾಳಿಯ ಸಂತ್ರಸ್ಥರಿಗೂ ನೀಡಲಾಗುವುದು ಎಂದು ಹೇಳಿದ್ದಾರೆ.

ಕಳೆದ ಎರಡು ತಿಂಗಳಲ್ಲಿ, ಬೆಂಗಳೂರು ಮತ್ತು ಮೈಸೂರಿನ ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ಹಲವಾರು ಘಟನೆಗಳು ಬೆಳಕಿಗೆ ಬಂದಿದ್ದು, ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ತಾಲ್ಲೂಕಿನಲ್ಲಿ ಗುರುವಾರ ಸಂಜೆ ಚಿರತೆ ಮೇಘನಾ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಇದನ್ನು ಸರ್ಕಾರ ಪರಿಗಣಿಸಿದ್ದು, ಮೃತ ಕುಟುಂಬಗಳಿಗೆ 15 ಲಕ್ಷ ರೂ ಪರಿಹಾರಧನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page