ಮೈಸೂರು: ಜಿಲ್ಲೆಯ ಕನಕನಗರಕ್ಕೆ ಚಿರತೆಯೊಂದು ನುಗ್ಗಿ ಕೆಲವರ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿದು ರಕ್ಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಚಿರತೆಯು ಕೆಲವರ ಮನೆಗೆ ನುಗ್ಗಲು ಪ್ರಯತ್ನಿಸಿದೆ. ನಂತರ ಬೈಕ್ ಸವಾರನ ಮೇಲೆ ದಾಳಿ ಮಾಡಿದ್ದು, ಯಾವುದೇ ಅಪಾಯ ಮಾಡದೆ ಹಿಂತಿರುಗಿದೆ.
ನಂತರ ಅರಣ್ಯ ಇಲಾಖೆ ಸಿಬ್ಬಂದಿಯು ಚಿರತೆಯನ್ನು ಕೆಣಕಿದ್ದು, ಆತನನ್ನು ಓಡಿಸಿಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.